ಭೋಪಾಲ: ವಿವಾಹಕ್ಕೂ ಕೆಲ ದಿನಗಳ ಮೊದಲು ಅಪರಿಚಿತರಿಂದ ಗುಪ್ತಾಂಗ ಛೇದನಕ್ಕೆ ಒಳಗಾಗಿದ್ದ ಮಧ್ಯಪ್ರದೇಶದ ಯುವಕನ ದಾರುಣ ಕಥೆಯನ್ನು ನೀವು ಈ ಹಿಂದೆ ಓದಿರುತ್ತೀರ. ಸಂತ್ರಸ್ತ ಯುವಕನಿಗೆ ಮತ್ತೊಂದು ಆಘಾತ ಎದುರಾಗಿದ್ದು, ಆತನ ಜತೆ ಹಸೆಮಣೆ ಏರಬೇಕಿದ್ದ ಯುವತಿ ಮದುವೆಯಿಂದ ಹಿಂದೆ ಸರಿದಿದ್ದಾಳೆ. ಮಂಗಳವಾರ ಅವರ ಮದುವೆ ನಿಶ್ಚಯವಾಗಿತ್ತು.
ಯವಕ ಮಲವಿಸರ್ಜನೆಗೆಂದು ನದಿ ಬಯಲಿಗೆ ತೆರಳಿದ್ದ ವೇಳೆ ಅಪರಿಚಿತರು ಆತನ ಮೇಲೆ ದಾಳಿ ನಡೆಸಿ ಗುಪ್ತಾಂಗ ವನ್ನು ಕತ್ತರಿಸಿಕೊಂಡು ಅದನ್ನು ತಮ್ಮ ಜತೆ ಕೊಂಡೊಯ್ದಿದ್ದರು. ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ಕಳೆದವಾರ ಈ ಘಟನೆ ನಡೆದಿತ್ತು.
ಈ ಹೇಯ ಕೃತ್ಯದ ಬಗ್ಗೆ ಮಾಹಿತಿ ಸಿಕ್ಕಿದ್ದ ಕೂಡಲೇ ಕಾರ್ಯಪ್ರವೃತ್ತರಾಗಿದ್ದ ಪೊಲೀಸರು ಆರೋಪಿಗಳ ಪತ್ತೆಗೆ ನಿಂತಿದ್ದರು. ಆದಷ್ಟು ಬೇಗ ಗುಪ್ತಾಂಗವನ್ನು ಪತ್ತೆ ಹಚ್ಚಿ ಅದನ್ನು ಶಸ್ತ್ರ ಚಿಕಿತ್ಸೆ ಮೂಲಕ ಜೋಡಿಸುವ ಇರಾದೆ ಪೊಲೀಸರದಾಗಿತ್ತು.
ಆದರೆ, ಆರೋಪಿಗಳ ಸುಳಿವು ಈವರೆಗೂ ಸಿಕ್ಕಿಲ್ಲ ಮತ್ತು ಕತ್ತರಿಸಲ್ಪಟ್ಟಿರುವ ಗುಪ್ತಾಂಗವೂ ಸಿಕ್ಕಿಲ್ಲ. ಸಂತ್ರಸ್ತ ಯುವಕ ಆರೋಪಿಗಳನ್ನು ಗುರುತಿಸುವ ಸ್ಥಿತಿಯಲ್ಲಿ ಇಲ್ಲ. ಹೀಗಾಗಿ ಕಾರ್ಯಾಚರಣೆಗೆ ವಿಳಂಬವಾಗುತ್ತಿದೆ. ಕೃತ್ಯದ ಹಿಂದಿನ ಉದ್ದೇಶವೂ ಬೆಳಕಿಗೆ ಬಂದಿಲ್ಲ ಎಂದು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಅಮಿತ್ ಶರ್ಮಾ ತಿಳಿಸಿದ್ದಾರೆ.
ಘಟನೆಯ ಬಳಿಕ ಯುವತಿ ಆತನನ್ನು ಮದುವೆಯಾಗಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾಳೆ.