ರಾಷ್ಟ್ರೀಯ

ಇನ್ನೊಬ್ಬ ಮಗನಿದ್ದರೆ, ಆತನನ್ನೂ ದೇಶ ಸೇವೆಗೆ ಕಳುಹಿಸುತ್ತಿದ್ದೆ: ಹುತಾತ್ಮ ಯೋಧನ ತಾಯಿ

Pinterest LinkedIn Tumblr


ಗುರುಗ್ರಾಮ: ನನ್ನ ಮಗನಿಗೆ ಇನ್ನೂ ಸಣ್ಣ ಪ್ರಾಯ, ಒಂದು ವೇಳೆ ನನಗೆ ಇನ್ನೊಬ್ಬ ಮಗನಿದ್ದರೆ ಆತನನ್ನೂ ನಾನು ದೇಶ ಸೇವೆಗೆ ಕಳುಹಿಸುತ್ತಿದ್ದೆ’ ಇದು ಭಾನುವಾರ ಪಾಕಿಸ್ತಾನದ ಉಗ್ರರ ದಾಳಿಗೆ ಮೃತಪಟ್ಟ ಕ್ಯಾಪ್ಟನ್‌ ಕಪಿಲ್‌ ಕುಂಡು ಅವರ ತಾಯಿ ಮಾತುಗಳು.

ಜಮ್ಮು-ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ಪಾಕಿಸ್ತಾನ ಸೇನೆಯ ಗುಂಡಿನ ದಾಳಿಗೆ ಹುತಾತ್ಮನಾದ ಭಾರತೀಯ ಯೋಧ 22 ವರ್ಷದ ಕ್ಯಾಪ್ಟನ್ ಕಪಿಲ್ ಕುಂದು ಇದೇ ತಿಂಗಳ 10ರಂದು ತಮ್ಮ ಜನ್ಮದಿನಕ್ಕೆ ಮನೆಗೆ ಬರುವವರಿದ್ದರು. ಆದರೆ ಇದೀಗ ಕ್ಯಾಪ್ಟನ್ ಕಪಿಲ್ ಕುಂಡು ಮನೆಯಲ್ಲಿ ದುಃಖ ಮಡುಗಟ್ಟಿದೆ.

ತನ್ನ ಮಗನ ಕುರಿತು ಹೇಳಿರುವ ಸುನಿತಾ ಕುಂಡು, ಆರ್ಮಿಗೆ ಸೇರುವುದೆಂದರೆ ಆತನಿಗೆ ಎಲ್ಲಿಲ್ಲದ ಪ್ರೀತಿ, ನನ್ನ ಮಗನಿಗಾದಂತಹ ಅನ್ಯಾಯ ಇನ್ನೂ ನಡೆಯಬಾರದು, ಹೀಗಾಗಿ ಪಾಕ್‌ನ ಮೇಲೆ ಇನ್ನೂ ಹೆಚ್ಚು ಸರ್ಜಿಕಲ್‌ ಸ್ಟ್ರೈಕ್‌ ನಡೆಸಿ, ಒಂದು ವೇಳೆ ಪಾಕ್‌ ದಾಳಿ ನಡೆಸದೇ ಇದ್ದರೆ ನನ್ನ ಮಗ ಇನ್ನೂ 15-20 ವರ್ಷ ದೇಶ ಸೇವೆ ಮಾಡುತ್ತಿದ್ದ’ ಎಂದು ಹೇಳಿದ್ದಾರೆ.

‘ಕಪಿಲ್‌ ಹುಟ್ಟುಹಬ್ಬಕ್ಕೆ ಮನೆಗೆ ಬರುವವನಿದ್ದನು. ಈ ಕುರಿತಂತೆ ಆತ ನನಗೆ ಅಚ್ಚರಿ ನೀಡಬೇಕೆಂದು ಸೋದರಿ ಬಳಿ ಹೇಳಿಕೊಂಡಿದ್ದ, ಕಳೆದ ವರ್ಷ ನವೆಂಬರ್ ನಲ್ಲಿ ಊರಿಗೆ ಬಂದಿದ್ದ ಎಂದು ತಾಯಿ ದುಃಖಿಸುತ್ತಾ ಹೇಳುತ್ತಾರೆ.

ಸೋದರ ಸಂಬಂಧಿ ತರಿಫ್ ಕುಂದು ಪ್ರಕಾರ ಕ್ಯಾಪ್ಟನ್‌ ಕಪಿಲ್‌ಗೆ ಕವನ ಬರೆಯುವುದೆಂದರೆ ಎಲ್ಲಿಲ್ಲದ ಪ್ರೀತಿಯಂತೆ, ಸ್ಥಳೀಯ ಗ್ರಾಮಸ್ಥರೆಲ್ಲಾ ಈತನನ್ನು ಒಬ್ಬ ಹೀರೋ ರೀತಿಯಲ್ಲೇ ನೋಡುತ್ತಿದ್ದರಂತೆ. ‘ 2012ರಲ್ಲಿ ಕಪಿಲ್‌ ತನ್ನ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ಸಂದರ್ಬದಲ್ಲೇ ಆತನ ತಂದೆ ಹೃದಯಾಘಾತದಿಂದ ತೀರಿಕೊಂಡರು, ಇದೀಗ ನಾವು ಆತನ ಮೃತ ದೇಹಕ್ಕಾಗಿ ಕಾಯುತ್ತಿದ್ದೇವೆ ಎಂದು ತರಿಫ್‌ ಹೇಳಿದ್ದಾರೆ.

Comments are closed.