ಮನೋರಂಜನೆ

ಬಜೆಟ್ ಬಗ್ಗೆ ನಟ ಕಮಲ್ ಹಾಸನ್ ಕಾಮೆಂಟ್

Pinterest LinkedIn Tumblr


ಚೆನ್ನೈ: ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಗುರುವಾರ ಲೋಕಸಭೆಯಲ್ಲಿ 2018-19 ಬಜೆಟ್ ಮಂಡಿಸಿದರು. ಈ ಬಜೆಟ್‌ ಪರವಾಗಿ ಕೆಲವರು ಪ್ರತಿಕ್ರಿಯಿಸಿದರೆ, ಇನ್ನೂ ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದೇ ವಿಚಾರವಾಗಿ ನಟ ಕಮಲ್ ಹಾಸನ್ ಸಹ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.

ಕೇಂದ್ರದ ದೃಷ್ಟಿ ಇದ್ದಕ್ಕಿದ್ದಂತೆ ರೈತರು, ಗ್ರಾಮೀಣ ಪ್ರದೇಶದ ಕಡೆಗೆ ಹರಿದಿರುವುದು ಸಂತೋಷಪಡಬೇಕಾದ ಸಂಗತಿ ಎಂದು ಹೇಳಿದ್ದಾರೆ. ಆದರೆ ಮಧ್ಯಮ ವರ್ಗದ ವಿಷಯದಲ್ಲಿ ಮಾತ್ರ ಬಜೆಟ್ ಭಿನ್ನವಾಗಿದೆ ಎಂದಿದ್ದಾರೆ.

‘ನನಗೆ ಅರ್ಥವಾದಷ್ಟು ಮಟ್ಟಿಗೆ ಬಜೆಟ್ ದಾರಿ ಗ್ರಾಮೀಣದ ಕಡೆಗೆ ಬದಲಾಗಿದೆ. ಇದು ಒಂದು ವರ್ಗದವನ್ನು ಓಲೈಸುವಂತಹದ್ದು’ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ ಕಮಲ್. ಕೃಷಿ, ಗ್ರಾಮೀಣಾಭಿವೃದ್ಧಿ, ಶಿಕ್ಷಣ, ವೈದ್ಯಕೀಯ, ಆರೋಗ್ಯ ಬಗ್ಗೆ ಮುಖ್ಯವಾಗಿ ದೃಷ್ಟಿ ಹರಿಸಿದ್ದೇವೆ ಎಂದು ಗುರುವಾರ ಜೇಟ್ಲಿ ತಿಳಿಸಿದ್ದರು. ದೇಶದ ಜನರ ಆಸೆ ಆಕಾಂಕ್ಷೆಗಳನ್ನು ಪ್ರತಿನಿಧಿಸುವಂತೆ ಬಜೆಟ್ ಇದೆ ಎಂದು ಪ್ರಧಾನಿ ಮೋದಿ ಬಣ್ಣಿಸಿದ್ದಾರೆ.

Comments are closed.