ನವದೆಹಲಿ: ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಮಂಡಿಸಿರುವ ಕೇಂದ್ರ ಬಜೆಟ್ನಲ್ಲಿ ಹಲವು ಉತ್ಪನ್ನಗಳ ಮೇಲಿನ ತೆರಿಗೆಯನ್ನು ಹೆಚ್ಚಿಸಲಾಗಿದ್ದು, ಕೆಲವು ಉತ್ಪನ್ನಗಳ ತೆರಿಗೆಯನ್ನು ಕಡಿತ ಮಾಡಲಾಗಿದೆ.
ಮುಂದಿನ ಆರ್ಥಿಕ ವರ್ಷದಿಂದ ದುಬಾರಿಯಾಗಲಿರುವ ಮತ್ತು ಅಗ್ಗವಾಗಲಿರುವ ಉತ್ಪನ್ನಗಳ ಪೂರ್ಣ ಪಟ್ಟಿ ಇಲ್ಲಿದೆ…
ಅಗ್ಗ
ಗೋಡಂಬಿ ಮೇಲಿನ ಅಬಕಾರಿ ಸುಂಕ ಶೇ.5ರಿಂದ ಶೇ.2.5ರವೆರೆಗೆ
ಸೋಲಾರ್ ಉಪಕರಣಗಳ ಮೇಲಿನ ದರ ಕಡಿತ
ಶ್ರವಣ ಸಾಧನಗಳ ಮೇಲಿನ ಸುಂಕ ಸಂಪೂರ್ಣ ಕಡಿತ
ಇಟ್ಟಿಗೆ, ಟೈಲ್ಸ್, ಸೆರಾಮಿಕ್ ವಸ್ತುಗಳು – ಶೇ.7.5ಕ್ಕೆ ಇಳಿಕೆ
ತುಟ್ಟಿ
ಆಹಾರ ಉತ್ಪನ್ನಗಳು:
ಆರೆಂಜ್ ಫ್ರೂಟ್ ಜೂಸ್ – ಶೇ.35ಕ್ಕೆ ಏರಿಕೆ
ಫ್ರೂಟ್ ಜ್ಯೂಸ್ ಮತ್ತು ತರಕಾರಿ ಜ್ಯೂಸ್ – ಶೇ.50ಕ್ಕೆ ಏರಿಕೆ
ಕ್ಯಾನ್ಬೆರಿ ಜ್ಯೂಸ್ – ಶೇ.50ಕ್ಕೆ ಏರಿಕೆ
ಇತರ ಆಹಾರ ತಯಾರಿ ಉತ್ಪನ್ನಗಳು – ಶೇ.50ಕ್ಕೆ ಏರಿಕೆ
ಕಚ್ಚಾ ಅಡುಗೆ ಎಣ್ಣೆ – ಶೇ.30ಕ್ಕೆ ಏರಿಕೆ
ಸಂಸ್ಕರಿಸಿದ ಅಡುಗೆ ಎಣ್ಣೆ – ಶೇ.35ಕ್ಕೆ ಏರಿಕೆ
ಸೌಂದರ್ಯ ವರ್ಧಕಗಳು
ಸುಗಂಧ ದ್ರವ್ಯ, ಡಿಯೋಡ್ರೆಂಟ್ – ಶೇ.20ಕ್ಕೆ ಏರಿಕೆ
ಸೌಂದರ್ಯ ವರ್ಧಕಗಳು – ಶೇ.20ಕ್ಕೆ ಏರಿಕೆ
ದಂತ ಶುದ್ಧಿಗೆ ಬಳಸುವ ವಸ್ತುಗಳು – ಶೇ.20ಕ್ಕೆ ಏರಿಕೆ
ಶೇವಿಂಗ್ ಕ್ರೀಮ್, ಆಫ್ಟರ್ ಶೇವ್ – ಶೇ.20ಕ್ಕೆ ಏರಿಕೆ
ಆಟೋಮೊಬೈಲ್
ಕಾರು, ಬೈಕ್ಗಳ ಬಿಡಿ ಭಾಗಗಳು – ಶೇ.15ಕ್ಕೆ ಏರಿಕೆ
ಟ್ರಕ್ ಮತ್ತು ಬಸ್ಗಳ ಟೈರ್ಗಳು – ಶೇ.15ಕ್ಕೆ ಏರಿಕೆ
ಅಂಗವಿಕಲರ ತ್ರಿಚಕ್ರ ವಾಹನ – ಶೇ.20ಕ್ಕೆ ಏರಿಕೆ
ಬಟ್ಟೆ, ಪಾದರಕ್ಷೆ
ರೇಷ್ಮೆ ಉತ್ಪನ್ನಗಳು – ಶೇ.20ಕ್ಕೆ ಏರಿಕೆ
ಪಾದರಕ್ಷೆಗಳು – ಶೇ.20ಕ್ಕೆ ಏರಿಕೆ
ಪಾದರಕ್ಷೆಗಳ ಬಿಡಿಭಾಗಗಳು – ಶೇ.15ಕ್ಕೆ ಏರಿಕೆ
ಆಭರಣಗಳು
ಜೆಮ್ ಸ್ಟೋನ್ಗಳು – ಶೇ.5ಕ್ಕೆ ಏರಿಕೆ
ವಜ್ರಗಳು – ಶೇ.5ಕ್ಕೆ ಏರಿಕೆ
ಫ್ಯಾನ್ಸಿ ಆಭರಣಗಳು – ಶೇ.20ಕ್ಕೆ ಏರಿಕೆ
ಎಲೆಕ್ಟ್ರಾನಿಕ್ ಉತ್ಪನ್ನಗಳು
ಚಾರ್ಜರ್ – ಶೇ.10ರಷ್ಟು ತೆರಿಗೆ
ಸ್ಮಾರ್ಟ್ ವಾಚ್ಗಳು – ಶೇ.20ರಷ್ಟು ಏರಿಕೆ
ಎಲ್ಸಿಡಿ/ಎಲ್ಇಡಿ/ಒಎಲ್ಇಡಿ ಟಿವಿಗಳು – ಶೇ.15ಕ್ಕೆ ಏರಿಕೆ
ಆಪ್ಟಿಕಲ್ ಫೈಬರ್ಗಳಲ್ಲಿನ ಸಿಲಿಕಾ – ಶೇ.5ರಷ್ಟು ತೆರಿಗೆ
ಗೃಹ ಅಲಂಕಾರಿಕ ವಿದ್ಯುದ್ದೀಪಗಳು – ಶೇ.20ಕ್ಕೆ ಏರಿಕೆ
ಮೊಬೈಲ್ ಫೋನ್ – ಕಸ್ಟಮ್ಸ್ ಡ್ಯೂಟಿ ಶೇ. 15 ರಿಂದ ಶೇ. 20 ಕ್ಕೆ ಏರಿಕೆ
ಇತರೆ ಉತ್ಪನ್ನಗಳು
ಹಾಸಿಗೆ, ದಿಂಬು ಇತ್ಯಾದಿ – ಶೇ.20ಕ್ಕೆ ಏರಿಕೆ
ಮಕ್ಕಳ ಆಟಿಕೆಗಳು – ಶೇ.20ಕ್ಕೆ ಏರಿಕೆ
ವಿಡಿಯೋ ಗೇಮ್ ಉಪಕರಣಗಳು – ಶೇ.20ಕ್ಕೆ ಏರಿಕೆ
ಕ್ರೀಡಾ ಉಪಕರಣಗಳು – ಶೇ.20ಕ್ಕೆ ಏರಿಕೆ
ಮೀನುಗಾರಿಕೆ ಉಪಕರಣಗಳು – ಶೇ.20ಕ್ಕೆ ಏರಿಕೆ
ಸಿಗರೇಟು, ಲೈಟರ್ಗಳು ಎಲೆಕ್ಟ್ರಿಕ್ ಸಿಗರೇಟು – ಶೇ.20ಕ್ಕೆ ಏರಿಕೆ