ರಾಷ್ಟ್ರೀಯ

ಅಬುದಾಬಿ: ಮೊದಲ ಹಿಂದು ಮಂದಿರಕ್ಕೆ ಚಾಲನೆ ನೀಡಲಿರುವ ಪಿಎಂ ಮೋದಿ

Pinterest LinkedIn Tumblr


ಹೊಸದಿಲ್ಲಿ: ಅಬು ದಾಬಿಯಲ್ಲಿ ಮೊದಲ ಹಿಂದು ದೇವಸ್ಥಾನದ ಉದ್ಘಾಟನೆಯನ್ನು ಪ್ರಧಾನಿ ನರೇಂದ್ರ ಮೋದಿ ನೆರವೇರಿಸಲಿದ್ದಾರೆ. ಫೆಬ್ರವರಿ 9ರಿಂದ 12ವರೆಗೆ ಪಶ್ಚಿಮ ಏಷ್ಯಾ ಪ್ರವಾಸದಲ್ಲಿರುವ ಮೋದಿ ಪ್ಯಾಲೆಸ್ತೇನ್‌, ಯುಎಇ ಮತ್ತು ಓಮನ್‌ಗೆ ಭೇಟಿ ನೀಡಲಿದ್ದು, ಈ ಸಂದರ್ಭ ದೇವಸ್ಥಾನವನ್ನು ಲೋಕಾರ್ಪಣೆ ಮಾಡಲಿದ್ದಾರೆ.

ಪ್ರಸ್ತುತ ಯುಎಇನಲ್ಲಿ ಕೇವಲ ಒಂದು ಹಿಂದು ದೇವಸ್ಥಾನವಿದೆ. ದುಬೈನಲ್ಲಿ ದೇವಸ್ಥಾನವಿದ್ದು, ಇದೀಗ ಅಬು ದಾಬಿಯಲ್ಲು ಹಿಂದು ದೇವಸ್ಥಾನ ತಲೆಯೆತ್ತಿದೆ.

ಪ್ರಧಾನಿ ಮೋದಿ ಅವರು ಯುಎಇಗೆ 2015ರಲ್ಲಿ ಮೊದಲ ಬಾರಿಗೆ ಭೇಟಿ ನೀಡಿದ ಸಂದರ್ಭ ದೇವಸ್ಥಾನ ನಿರ್ಮಾಣಕ್ಕೆ ಅಲ್ಲಿನ ಸರಕಾರ ಅಬು ದಾಬಿಯಲ್ಲಿ ಜಾಗವನ್ನು ಗೊತ್ತು ಮಾಡಿತ್ತು. ಅಲ್‌ ವಥಬಾ ಎಂಬ ಪ್ರದೇಶದಲ್ಲಿ 20,000 ಚದರ ಮೀಟರ್‌ ಪ್ರದೇಶದಲ್ಲಿ ನಿರ್ಮಾಣಗೊಂಡಿದೆ.

ಪ್ರಸ್ತುತ ಯುಎಇನಲ್ಲಿ 26 ಲಕ್ಷ ಭಾರತೀಯರು ನೆಲೆಸಿದ್ದಾರೆ. ಅಂದರೆ ಒಟ್ಟು ಜನಸಂಖ್ಯೆಯ ಶೇ.30 ರಷ್ಟು.

ಫೆಬ್ರವರಿ 10ಕ್ಕೆ ಸಂಜೆ ಅಬು ದಾಬಿಗೆ ಬಂದಿಳಿಯಲಿರುವ ಪ್ರಧಾನಿ ಮೋದಿ ಮರುದಿನ ದುಬೈಗೆ ಪ್ರಯಾಣಿಸಲಿದ್ದಾರೆ. ಫೆಬ್ರವರಿ 11ರಂದು ದುಬೈ ಒಪೆರಾದಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮೋದಿ ಮಾತನಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ 1,800ಕ್ಕೂ ಹೆಚ್ಚು ಭಾರತೀಯರು ಆಗಮಿಸಿಲಿದ್ದಾರೆ ಎಂದು ಅಂದಾಜಿಸಲಾಗಿದೆ. ದುಬೈನಲ್ಲಿ ನಡೆಯಲಿರುವ 3 ದಿನಗಳ ವಾರ್ಷಿಕ ಕಾರ್ಯಕ್ರಮ, 6ನೇ ವಿಶ್ವ ಸರಕಾರಿ ಸಮ್ಮೇಳನದಲ್ಲಿ ಪ್ರಧಾನಿ ನರೇಂದ್ರ ಮೋದಿ ಸ್ಟಾರ್‌ ಅತಿಥಿಯಾಗಿದ್ದಾರೆ.

Comments are closed.