ರಾಷ್ಟ್ರೀಯ

ಇನ್ಫೋಸಿಸ್‌ ಸಿಇಓ ಮತ್ತು ಎಂಡಿಯಾಗಿ ಸಲೀಲ್‌ ಎಸ್‌.ಪರೇಖ್‌

Pinterest LinkedIn Tumblr


ಹೊಸದಿಲ್ಲಿ: ಇನ್ಫೋಸಿಸ್‌ ನ ನೂತನ ಕಾರ್ಯನಿರ್ವಹಣಾಧಿಕಾರಿ ಮತ್ತು ಆಡಳಿತ ನಿರ್ದೇಶಕರನ್ನಾಗಿ ಸಲೀಲ್‌ ಎಸ್‌ ಪರೇಖ್‌ ಅವರು ನೇಮಕವಾಗಿದ್ದಾರೆ. ಅವರ ಕಾರ್ಯಾವಧಿ ಜನವರಿ 2 ರಿಂದ ಅನ್ವಯವಾಗಲಿದೆ.

ಫ್ರೆಂಚ್‌ ಐಟಿ ಕಂಪೆನಿ ಕ್ಯಾಪ್‌ಜೆಮಿನಿಯ ಎಕ್ಸ್‌ಕ್ಯೂಟಿವ್‌ ಬೋರ್ಟ್‌ ಸದಸ್ಯರಾಗಿ ಪರೇಖ್‌ ಕೆಲಸ ನಿರ್ವಹಿಸಿದ ಅನುಭವ ಹೊಂದಿದ್ದಾರೆ. 2000 ದಲ್ಲಿ ಪರೇಖ್‌ ಅವರು ಕಂಪೆನಿಗೆ ಸೇರ್ಪಡೆಯಾಗಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದಾರೆ.

ಕಂಪ್ಯೂಟರ್‌ ಸೈನ್ಸ್‌ನಲ್ಲಿ ಎಂಇ ಪದವೀಧರರಾಗಿರುವ ಪರೇಖ್‌ ಕಾರ್ನೆಲ್‌ ವಿಶ್ವವಿದ್ಯಾಲಯದಲ್ಲಿ ಮೆಕಾನಿಕಲ್‌ ಇಂಜಿನಿಯರಿಂಗ್‌ ಮತ್ತು ಏರೋನಾಟಿಕಲ್‌ ಇಂಜಿನಿಯರಿಂಗ್‌ನಲ್ಲಿ ಬಿ.ಟೆಕ್‌ ಪದವಿ ಪಡೆದಿದ್ದಾರೆ.

‘ವ್ಯವಹಾರವನ್ನು ಕಾರ್ಯಗತಗೊಳಿಸುವಲ್ಲಿ ಯಶಸ್ವಿಯಾಗಿರುವ ಪರೇಖ್‌ ಅವರು ಕಾರ್ಯನಿರ್ವಹಣೆಯಲ್ಲಿ ಪ್ರಬಲ ದಾಖಲೆಯನ್ನು ಹೊಂದಿದ್ದಾರೆ’ ಎಂದು ಇನ್‌ಫೋಸಿಸ್‌ ಅಧ್ಯಕ್ಷ ನಂದನ್‌ ನೀಲಕೇಣಿ ಹೇಳಿದ್ದಾರೆ.

ಹಾಲಿ ಯು.ಬಿ.ಪ್ರವೀಣ್‌ ರಾವ್‌ ಅವರು ಸಿಇಓ ಮತ್ತು ಎಂಡಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

-ಉದಯವಾಣಿ

Comments are closed.