ರಾಷ್ಟ್ರೀಯ

ಅಮೆರಿಕ ಒತ್ತಡ: ವಾರದ ಬಳಿಕ ಮತ್ತೆ ಹಫೀಜ್‌ ಬಂಧನ

Pinterest LinkedIn Tumblr


ಹೊಸದಿಲ್ಲಿ: ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳ ಒತ್ತಡಕ್ಕೆ ಮಣಿದಿರುವ ಪಾಕಿಸ್ತಾನ ವಾರದ ಹಿಂದೆಯಷ್ಟೇ ಬಿಡುಗಡೆ ಹೊಂದಿದ್ದ ಮುಂಬೈ ದಾಳಿ ಮಾಸ್ಟರ್ ಮೈಂಡ್ ಉಗ್ರ ಹಫೀಜ್ ಸಯೀದ್‌ನ್ನು ಮತ್ತೊಮ್ಮೆ ಬಂಧಿಸಿದೆ.

ಹಫೀಜ್‌ ಸಯೀದ್‌ ಬಿಡುಗಡೆಗೊಂಡ ಬಳಿಕ ಪಾಕ್‌ ವಿರುದ್ಧ ಕಿಡಿಕಾರಿರುವ ಅಮೆರಿಕ, ಕೂಡಲೇ ಸೂಕ್ತ ಸಾಕ್ಷಾಧಾರ ಒದಗಿಸಿ ಆತನನ್ನು ಬಂಧಿಸಿ ಎಂದು ಆಗ್ರಹಿಸಿತ್ತು. ಅಲ್ಲದೇ ಪಾಕಿಸ್ತಾನದ ಹಣಕಾಸು ಸಚಿವಾಲಯ ಕೂಡಾ ಹಫೀಜ್‌ ಬಿಡುಗಡೆ ದೇಶಕ್ಕೆ ರಾಜತಾಂತ್ರಿಕ ಮತ್ತು ಆರ್ಥಿಕ ಸಮಸ್ಯೆಗಳನ್ನು ತರಬಹುದು ಎಂದು ಸಲಹೆ ನೀಡಿತ್ತು.

ಜೆಯುಡಿ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ನನ್ನು ಜನವರಿ 31ರಿಂದ ಗೃಹ ಬಂಧನದಲ್ಲಿ ಇರಿಸಲಾಗಿತ್ತು. 10 ತಿಂಗಳ ಬಳಿಕ ಗೃಹ ಬಂಧನದಲ್ಲಿದ್ದ ಸಯೀದ್‌ನನ್ನು ಸಾಕ್ಷ್ಯಾಧಾರ ಕೊರತೆ ನೀಡಿ ಪಾಕಿಸ್ತಾನದ ಲಾಹೋರ್ ಕೋರ್ಟ್ ಬಂಧ ಮುಕ್ತಗೊಳಿಸಿತ್ತು. ಇದಕ್ಕೆ ಭಾರತ ಸೇರಿ ಹಲವು ರಾಷ್ಟ್ರಗಳು ಆಕ್ಷೇಪ ವ್ಯಕ್ತಪಡಿಸಿದ್ದವು.

ಜೆಯುಡಿ ಉಗ್ರ ಸಂಘಟನೆ ನಿಷೇಧಿತ ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಯ ಭಾಗವಾಗಿದ್ದು, 2008ರ ಮುಂಬೈ ದಾಳಿಗೆ ಈ ಸಂಘಟನೆಯೇ ಕಾರಣವಾಗಿತ್ತು.

Comments are closed.