ರಾಷ್ಟ್ರೀಯ

ಬಾಲಕನ ಆಸ್ಪತ್ರೆ ಬಿಲ್‌ ರೂ.18 ಲಕ್ಷ ಪಾವತಿಸಿದ ವೈದ್ಯರು

Pinterest LinkedIn Tumblr


ಚೆನ್ನೈ: ನ್ಯೂಮೋನಿಯಾ, ಡೆಂಗೆ ಸೋಂಕಿನಿಂದ ಬಳಲುತ್ತಿದ್ದ ಶರಣ್ ಎಂಬ 6 ವರ್ಷದ ಬಾಲಕನ ಚಿಕಿತ್ಸೆ ವೆಚ್ಛ ಭರಿಸಲು ವೈದ್ಯರೇ 18 ಲಕ್ಷದಷ್ಟು ದೇಣಿಗೆ ಸಂಗ್ರಹಿಸಿ ಬಾಲಕನ ಕುಟುಂಬಕ್ಕೆ ನೆರವಾಗಿದ್ದಾರೆ.

ಡೆಂಗ್ಯೂನಿಂದ ಬಳಲುತ್ತಿದ್ದ ಬಾಲಕಿಯ ಚಿಕಿತ್ಸೆಗೆ 16 ಲಕ್ಷ ರುಪಾಯಿ ಬಿಲ್‌ ಮಾಡಿ ಎಲ್ಲೆಡೆ ತೀವ್ರ ಟೀಕೆಗೆ ಒಳಗಾಗಿತ್ತು ಫೋರ್ಟಿಸ್‌ ಆಸ್ಪತ್ರೆ. ಎಲ್ಲಾ ವೈದ್ಯರೂ ಹಣದಾಹಿಗಳಲ್ಲ ಎಂಬುವುದಕ್ಕೆ ಉದಾಹರಣೆ ಚೆನ್ನೈನ ಕಂಚಿ ಕಾಮಕೋಟಿ ಚೈಲ್ಡ್‌ ಟ್ರಸ್ಟ್‌ ಎಂಬ ಖಾಸಗಿ ಆಸ್ಪತ್ರೆಯ ವೈದ್ಯರು.

ತೀವ್ರ ಜ್ವರದಿಂದ ಬಳಲುತ್ತಿದ್ದ ಶರಣ್ ಅನ್ನು ಐಸಿಯುವಿನಲ್ಲಿ 57 ದಿನಗಳ ಇಡಲಾಗಿತ್ತು. ಬಾಲಕ 33 ದಿನಗಳ ಇಸಿಎಂಒ ( extracorporeal membrane oxygenation) ಸಹಾಯದಿಂದ ಉಸಿರಾಟ ನಡೆಸುತ್ತಿದ್ದ. ಈ ಬಾಲಕನ ಚಿಕಿತ್ಸೆಗೆ ಒಟ್ಟು 34 ಲಕ್ಷ ರೂಪಾಯಿ ಬಿಲ್‌ ಆಗಿತ್ತು.

ಬಾಲಕನ ಪೋಷಕರಿಗೆ ಈ ಬಿಲ್‌ನ ಮೊತ್ತ ಅಧಿಕವಾಗಿದ್ದು, ತಮ್ಮಿಂದ ಸಾಧ್ಯವಾಗದು ಎಂದಾಗ ವೈದ್ಯರೇ ದೇಣಿಗೆ ಸಂಗ್ರಹಿಸಿ ಹುಡುಗನ ಚಿಕಿತ್ಸೆಗೆ ನೆರವಾಗಿದ್ದಾರೆ.

ಇದೀಗ ಬಾಲಕ ಗುಣಮುಖನಾಗಿ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾನೆ.

Comments are closed.