ಚೆನ್ನೈ: ಚೆನ್ನೈನ ಸತ್ಯಭಾಮಾ ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿನಿ ರಾಗಮೌಲಿಕಾ ಎಂಬಾಕೆ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಇದೀಗ ವಿಶ್ವವಿದ್ಯಾಲಯವನ್ನು ರಣಾರಂಗಣವಾಗಿಸಿದೆ.
ವಿಶ್ವವಿದ್ಯಾಲಯ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿ ವಿದ್ಯಾರ್ಥಿನಿ ಕೆಲ ದಿನಗಳ ಹಿಂದಷ್ಟೇ ಆತ್ಮಹತ್ಯೆ ಮಾಡಿಕೊಂಡಿದ್ದಳು. ವಿದ್ಯಾರ್ಥಿನಿಯ ಆತ್ಮಹತ್ಯೆಯಿಂದ ಕ್ಷುದ್ಧಗೊಂಡಿರುವ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಕಟ್ಟಡಗಳಿಗೆ ಕಳೆದ ರಾತ್ರಿ ಬೆಂಕಿ ಹಚ್ಚಿದ್ದಾರೆ.
ಪರೀಕ್ಷೆಯಲ್ಲಿ ಕಾಪಿ ಹೊಡೆಯುತ್ತಿದ್ದ ವೇಳೆ ರಾಗಮೌಲಿಕಾ ಸಿಕ್ಕಿಬಿದ್ದಿದ್ದಳು. ಹೀಗಾಗಿ ವಿಶ್ವವಿದ್ಯಾಲಯದ ಸಿಬ್ಬಂದಿ ಹಾಗೂ ಆಡಳಿತ ಮಂಡಳಿ ವಿದ್ಯಾರ್ಥಿನಿಗೆ ಕಿರುಕುಳ ನೀಡಿದೆ. ಇದೇ ಆಕೆಯ ಆತ್ಮಹತ್ಯೆಗೆ ಕಾರಣ ಎಂದು ವಿದ್ಯಾರ್ಥಿಗಳು ಕಿಡಿಕಾರಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ ರಾಗಮೋನಿಕಾ ಹೈದರಾಬಾದ್ ಮೂಲದವಳಾಗಿದ್ದು, ಎಂಜಿನಿಯರಿಂಗ್ ನ ಪ್ರಥಮ ವರ್ಷದ ವಿದ್ಯಾರ್ಥಿಯಾಗಿದ್ದಳು. ನಿನ್ನೆ ಬೆಳಿಗ್ಗೆ 2ನೇ ಸೆಮಿಸ್ಟರ್ ನ ಪರೀಕ್ಷೆ ಬರೆಯುತ್ತಿದ್ದ ವೇಳೆ ನಕಲು ಮಾಡುವಾಗ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಳು. ಆ ನಂತರ ಪರೀಕ್ಷಾ ಕೊಠಡಿಯಿಂದ ರಾಧಾಳನ್ನು ಹೊರಗೆ ಕಳುಹಿಸಿದ್ದರು.
ಇದರಿಂದ ತೀವ್ರ ರಾಗಮೋನಿಕಾ ಅವಮಾನಕ್ಕೊಳಗಾಗಿದ್ದಳು. ಅಲ್ಲದೆ, ತೀವ್ರ ಮನನೊಂದು ಸಂಜೆ ಹಾಸ್ಟೆಲ್’ನ ಕೊಠಡಿಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಇದರಿಂದ ಆಕ್ರೋಶಗೊಂಡ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಾಸ್ಟೆಲ್ ಒಳಗಿನ ವಸ್ತುಗಳಿಗೆ ಬೆಂಚಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಶ್ವವಿದ್ಯಾಲಯದ ಸಿಬ್ಬಂದಿಗಳು ಆಕೆಗೆ ಅವಮಾನ ಮಾಡಿದ್ದರಿಂದಲೇ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಆರೋಪಿಸುತ್ತಿದ್ದಾರೆ. ವಿದ್ಯಾರ್ಥಿನಿ ಆತ್ಮಹತ್ಯೆಯಿಂದಾಗಿ ವಿಶ್ವವಿದ್ಯಾಲಯದ ಪರಿಸ್ಥಿತಿ ಉದ್ವಿಗ್ನಗೊಂಡಿದೆ.
ಪರೀಕ್ಷೆಯಲ್ಲಿ ಕಾಪಿ ಮಾಡುತ್ತಿದ್ದ ವೇಳೆ ವಿದ್ಯಾರ್ಥಿನಿ ಸಿಕ್ಕಿಬಿದ್ದಿದ್ದಳು. ಬಳಿಕ ಹಾಸ್ಟೆಲ್’ಗೆ ತೆರಳಿದ್ದಾಳೆ. ವಿಶ್ವವಿದ್ಯಾಲಯದಲ್ಲಿ ರಾಗಮೋನಿಕಾ ಸಹೋದರ ರಾಕೇಶ್ ಕೂಡ ವಿದ್ಯಾಭ್ಯಾಸ ಮಾಡುತ್ತಿದ್ದಾನೆ. ಹಾಸ್ಟೆಲ್ ಗೆ ತೆರಳಿದ ರಾಗ ತೆಲುಗು ಭಾಷೆಯಲ್ಲಿ ಸಹೋದರನಿಗೆ ಸಂದೇಶವನ್ನು ರವಾನಿಸಿದ್ದಾಳೆ. ಪರೀಕ್ಷೆಯಲ್ಲಿ ನಕಲು ಮಾಡಿದ್ದಕ್ಕಾಗಿ ಸಹೋದರನ ಬಳಿ ಕ್ಷಮೆ ಕೇಳಿದ್ದಾಳೆಂದು ಅಧಿಕಾರಿಗಳು ಹೇಳಿದ್ದಾರೆ.
ಪರೀಕ್ಷೆ ಮುಕ್ತಾಯವಾದ ಬಳಿಕ ರಾಗ ರೂಮಿನಲ್ಲಿದ್ದ ಗೆಳತಿಯವರು ಕೊಠಡಿಗೆ ಹೋಗಿದ್ದಾರೆ. ಈ ವೇಳೆ ರಾಗ ನೇಣುಬಿಗಿದುಕೊಂಡಿರುವ ವಿಚಾರ ಬೆಳಕಿಗೆ ಬಂದಿದೆ. ಕೂಡಲೇ ವಿದ್ಯಾರ್ಥಿಗಳು ಹಾಸ್ಟೆಲ್ ಸಿಬ್ಬಂದಿ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ರಾಗ ಮೃತದೇಹವನ್ನು ರೊಯಪೇಟ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದಾರೆ.
ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ವಿದ್ಯಾರ್ಥಿಗಳು, ವಿಶ್ವವಿದ್ಯಾಲಯದ ಸಿಬ್ಬಂದಿಗಳು ಅವಮಾನ ಮಾಡಿದ್ದೇ ಆಕೆ ಆತ್ಮಹತ್ಯೆ ಮಾಡಲು ಕಾರಣ. ಕೆಲ ದಿನಗಳ ಹಿಂದಷ್ಟೇ ಒಬ್ಬ ವಿದ್ಯಾರ್ಥಿಗೂ ಇದೇ ರೀತಿ ಅವಮಾನ ಮಾಡಲಾಗಿತ್ತು ಎಂದು ಹೇಳಿದ್ದಾರೆ.
ಪ್ರಕರಣ ಸಂಬಂಧ ಸೆಕ್ಷನ್ ಸಿಆರ್’ಪಿಸಿ 174 (ಅಸ್ವಾಭಾವಿಕ ಸಾವು)ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.