ಕಣ್ಣೂರು: ಭಾರತೀಯ ನೌಕಾಪಡೆಯ ಶಸ್ತ್ರಾಸ್ತ್ರ ಪರಿಶೀಲನಾ ವಿಭಾಗಕ್ಕೆ ಮಹಿಳಾ ಪೈಲಟ್‌ಗಳನ್ನು ನೇಮಿಸಲಾಗಿದೆ.
ನೌಕಾಪಡೆಗೆ ಇದು ಐತಿಹಾಸಿಕ ವಿಷಯ. ಇದೇ ಮೊದಲ ಬಾರಿಗೆ ಮಹಿಳೆಯರನ್ನು ಪೈಲಟ್‌ಗಳನ್ನಾಗಿ ನೇಮಕ ಮಾಡಿಕೊಳ್ಳಲಾಗಿದೆ.
ಮಹಿಳಾ ನೌಕಾ ಪೈಲಟ್ ಹಾಗೂ ಅಧಿಕಾರಿಗಳ ಹುದ್ದೆಗೆ ಮೂವರು ಮಹಿಳೆಯರನ್ನು ನೇಮಕ ಮಾಡಿ ರಕ್ಷಣಾ ಇಲಾಖೆ ಆದೇರ ಹೊರಡಿಸಿದೆ.
ಉತ್ತರ ಪ್ರದೇಶದ ಬರೇಲಿ ಮೂಲದ ಶುಭಾಂಗಿ ಸ್ವರೂಪ್ ಮೊದಲ ಮಹಿಳಾ ಪೈಲಟ್ ಆಗಿದ್ದಾರೆ. ಹೊಸದಿಲ್ಲಿಯ ಆಸ್ತಾ ಸೆಹಗಲ್, ಪುದುಚೇರಿಯ ರೂಪಾ ಎ. ಕೇರಳದ ಶಕ್ತಿ ಮಾಯಾ ನೇಮಕಗೊಂಡಿರುವವರು.
ರಕ್ಷಣಾ ಇಲಾಖೆಯ ಈ ಕ್ರಮದಿಂದ ಮಹಿಳೆಯರೂ ಕೂಡ ಮಹತ್ವದ ಹೊಣೆಗಾರಿಕೆ ನಿಭಾಯಿಸಬಹುದು ಎಂಬುದು ಸಾಬೀತಾಗಿದೆ. ಅಲ್ಲದೇ ಇನ್ನಷ್ಟು ಮಹಿಳೆಯರಿಗೆ ಇದು ಉತ್ತೇಜನ ನೀಡಿದಂತಾಗುತ್ತದೆ ಎಂದು ಈ ಮಹಿಳಾ ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.