ಕ್ರೀಡೆ

ಬಿಸಿಸಿಐ ಬ್ಯುಸಿ ಶೆಡ್ಯೂಲ್ ಗೆ ಕೊಹ್ಲಿ ಬೇಸರ, ತಯಾರಿಗೆ ಸಮಯ ಕೊಡಿ ಎಂದ ಕ್ಯಾಪ್ಟನ್

Pinterest LinkedIn Tumblr

ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯ ಬ್ಯುಸಿ ಶೆಡ್ಯೂಲ್ ಬಗ್ಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ತೀವ್ರ ಬೇಸರ ವ್ಯಕ್ತಪಡಿಸಿದ್ದು, ಮತ್ತೊಂದು ಪ್ರವಾಸ ಕೈಗೊಳ್ಳುವ ಮುನ್ನ ಸೂಕ್ತ ತಯಾರಿ ನಡೆಸಲು ನಮಗೆ ಸಮಯ ಕೊಡಿ ಎಂದು ಹೇಳಿದ್ದಾರೆ.

ಸಾಲು ಸಾಲು ಸರಣಿಗಳಿಂದ ಬೇಸತ್ತಿರುವ ವಿರಾಟ್ ಕೊಹ್ಲಿ ಅವರು ಇತ್ತೀಚಿಗಷ್ಟೇ ನಾನು ರೊಬೋಟ್ ಅಲ್ಲ. ನನಹೆ ವಿಶ್ರಾಂತಿ ಬೇಕಾದಗ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದರು. ಈಗ ಶ್ರೀಲಂಕಾ ನಂತರ ದಕ್ಷಿಣ ಆಫ್ರಿಕಾ ಸಿದ್ಧವಾಗಿರುವ ಬಿಸಿಸಿಐ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಬಿಸಿಸಿಐ ತಮಗೆ ಮನಬಂದಂತೆ ಸರಣಿ ನಿಯೋಜಿಸುತ್ತಿದೆ. ಇದರಿಂದ ಆಟಗಾರರಿಗೆ ಕೊಂಚವೂ ಕೂಡ ವಿಶ್ರಾಂತಿ ಸಿಗುತ್ತಿಲ್ಲ ಎಂದಿದ್ದಾರೆ.

ಪ್ರವಾಸಿ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯವಾಗಿದ್ದು, ಎರಡನೇ ಪಂದ್ಯ ನಾಳೆಯಿಂದ ಆರಂಭವಾಗಲಿದೆ. ಈ ಮಧ್ಯೆ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ವಿರಾಟ್ ಕೊಹ್ಲಿ, ಲಂಕಾ ಸರಣಿ ನಂತರ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳುವ ಮುನ್ನ ಕೇವಲ ಎರಡು ದಿನ ಮಾತ್ರ ಬಿಡುವು ನೀಡಿರುವುದು ದುರದೃಷ್ಟಕರ. ಬಿಸಿಸಿಐನ ಬ್ಯುಸಿ ಶೆಡ್ಯೂಲ್ ನಿಂದಾಗಿ ಆಟಗಾರರ ಮೇಲೆ ಪರಿಣಾಮ ಬೀರುತ್ತಿದೆ. ಒಂದು ಸರಣಿಯಿಂದ ಮತ್ತೊಂದು ಸರಣಿಗೆ ಒಂದು ತಿಂಗಳಾದರೂ ಬಿಡುವು ಸಿಕ್ಕರೆ ನಾವು ಸೂಕ್ತ ತಯಾರಿ ಮಾಡಿಕೊಳ್ಳಬಹುದು ಎಂದು ಹೇಳಿದ್ದಾರೆ.

ವಿದೇಶಿ ನೆಲದಲ್ಲಿ ಸರಣಿ ಆಯೋಜನೆ ಮಾಡುವಾಗ ಯೋಚನೆ ಮಾಡಿ ಪಂದ್ಯಗಳನ್ನು ನಿಯೋಜಿಸಬೇಕು ಎಂದು ಬಿಸಿಸಿಐಗೆ ಸಲಹೆ ನೀಡಿದ್ದಾರೆ. ಈ ರೀತಿ ದಿಢೀರನೆ ಪಂದ್ಯ ನಿಯೋಜಿಸುವುದರಿಂದ ಆಟಗಾರರಿಗೆ ಅಲ್ಲಿನ ಪರಿಸ್ಥಿತಿಗೆ ಒಗ್ಗುವುದು ತುಂಬಾ ಕಷ್ಟವಾಗುತ್ತದೆ. ಅಲ್ಲದೆ ವಿದೇಶಿ ನೆಲದಲ್ಲಿ ಆಡುವಾಗ ವಿಶೇಷ ತರಬೇತಿ ಕೂಡ ಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

ಉತ್ತಮ ಆಟ ಪ್ರದರ್ಶಿಸದಿದ್ದರೆ ಆಟಗಾರರನ್ನು ದೂರುವುದು ಸಹಜ. ಆದರೆ ತಯಾರಿಗೆ ಸೂಕ್ತ ಸಮಯ ನೀಡದಿರುವುದನ್ನು ಯಾರೂ ಪರಿಗಣಿಸುವುದಿಲ್ಲ ಎಂದು ಕೊಹ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Comments are closed.