ರಾಷ್ಟ್ರೀಯ

ಆಪ್‌ ಸರಕಾರದಿಂದ ಈಗ ಉಚಿತ ಯಾತ್ರಾ ಭಾಗ್ಯ

Pinterest LinkedIn Tumblr


ಹೊಸದಿಲ್ಲಿ: ಹೊಸದಿಲ್ಲಿಯ ಆಪ್‌ ಸರಕಾರ ಈಗ ಹೊಸ ಯೋಜನೆಯೊಂದನ್ನು ಜಾರಿಗೆ ತರಲು ಮುಂದಾಗಿದೆ.

ಉಚಿತವಾಗಿ ಯಾತ್ರಾರ್ಥಿಗಳಿಗೆ ವಸತಿ ವ್ಯವಸ್ಥೆ ಹಾಗೂ ಆಹಾರ ಒದಗಿಸುವ ಯಾತ್ರಾ ಭಾಗ್ಯವನ್ನು ನೀಡಲು ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಚಿಂತನೆ ನಡೆಸಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌, ಉಪ ಮುಖ್ಯಮಂತ್ರಿ ಮನೀಷ್‌ ಸಿಸೋಡಿಯಾ ಹಗೂ ಇನ್ನಿತರ ಹಿರಿಯ ಸಚಿವರು, ಅಧಿಕಾರಿಗಳು ಸಭೆ ನಡೆಸಿದ್ದಾರೆ.

ವೈಷ್ಣೋದೇವಿ, ಹರಿದ್ವಾರ, ಹೃಷಿಕೇಶ, ಅಜ್ಮೇರ್‌, ಸ್ವರ್ಣ ಮಂದಿರ, ವೃಂದಾವನ, ಮಥುರಾ, ನೀಲಕಾಂತ್‌ಗೆ ತೆರಳುವ ಯಾತ್ರಾರ್ಥಿಗಳಿಗೆ ಉಚಿತ ವಸತಿ ಸೌಲಭ್ಯ, ಆಹಾರ ನೀಡುವ ಯೋಜನೆ ರೂಪಿಸಲು ತಯಾರಿ ನಡೆಸಲಾಗಿದೆ.

ಪ್ರತಿ ವಿಧಾನಸಭಾ ಕ್ಷೇತ್ರದಿಂದ ನಿರ್ದಿಷ್ಟ ಸಂಖ್ಯೆಯ ಯಾತ್ರಾರ್ಥಿಗಳನ್ನು ಕರೆದೊಯ್ಯುವ ಯೋಜನೆ ಇದಾಗಿದೆ. 2-3 ದಿನಗಳ ಯಾತ್ರ ಇದಾಗಲಿದೆ.

ಮತ್ತೆರಡು ಸಭೆ ನಡೆಸಲು ರಾಜ್ಯ ಸರಕಾರ ನಿರ್ಧರಿಸಿದ್ದು, ಆ ನಂತರ ಯಾತ್ರಾರ್ಥಿಗಳು ಯಾವ ರೀತಿ ಇದಕ್ಕೆ ಅರ್ಜಿ ಸಲ್ಲಿಸಬಹುದು ಹಾಗೂ ಮತ್ತಿತರ ವಿವರಗಳನ್ನು ನೀಡಲಾಗುವುದು ಎಂದು ಹಿರಿಯ ಸಚಿವರೊಬ್ಬರು ತಿಳಿಸಿದ್ದಾರೆ.

Comments are closed.