ಕೋಲಾರ: ಪಲ್ಸರ್ ಬೈಕ್‌ಗೆ ಸ್ವಿಫ್ಟ್ ಕಾರ್ ಡಿಕ್ಕಿ ಹೊಡೆದ ಪರಿಣಾಮ ಪಲ್ಸರ್ ಬೈಕ್ ನಲ್ಲಿದ್ದ ಇಬ್ಬರು ಮೃತಪಟ್ಟಿದ್ದಾರೆ. ಮತ್ತೊಬ್ಬನ ಸ್ಥಿತಿ ಗಂಭೀರವಾಗಿದೆ.
ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಬೆಂಗನೂರು ಗೇಟ್ ಬಳಿ ಘಟನೆ ನಡೆದಿದೆ. ಜಾರ್ಜ್ (19) ಮೃತ ಯುವಕ. ಮತ್ತೊಬ್ಬ ಗಾಯಾಳು ಶ್ರೀಕಾಂತ್ ರಸ್ತೆಯಲ್ಲಿ ನರಳಾಡುತ್ತಿದ್ದರೂ ಸಾರ್ವಜನಿಕರು ಸುಮ್ಮನಿದ್ದು ಮೊಬೈಲ್‌ನಲ್ಲಿ ಚಿತ್ರ ಸೆರೆ ಹಿಡಿಯುತ್ತಿದ್ದರು.
ಇತ್ತೀಚಿನ ದಿನಗಳಲ್ಲಿ ಮೊಬೈಲ್‌ನಲ್ಲಿ ಎಲ್ಲವನ್ನು ಸೆರೆ ಹಿಡಿಯುವುದು ಖಯಾಲಿಯಾಗಿದೆ. ಅಪಘಾತ ಸಂದರ್ಭದಲ್ಲಿ ಒಂದೊಂದು ನಿಮಿಷವೂ ಅಮೂಲ್ಯ. ಇಂದು ನಡೆದ ಅಪಘಾತ ಸಂದರ್ಭದಲ್ಲಿಯೂ ಮಾನವೀಯತೆಯನ್ನು ಜನ ಮರೆತಿದ್ದಾರೆ. ಅಪಘಾತದಲ್ಲಿ ಗಾಯಗೊಂಡಿದ್ದ ಯುವಕ ನರಳಾಡುತ್ತಿದ್ದರು ಕೆಲವು ದಾರಿಹೋಕರು ಮೊಬೈಲ್‌ನಲ್ಲಿ ಸೆರೆ ಹಿಡಿಯುತ್ತಿದ್ದರು. ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಬೇಕು ಎಂಬ ಸೌಜನ್ಯವನ್ನೂ ತೋರಲಿಲ್ಲ.
ತಲೆಗೆ ಗಾಯವಾಗಿ ರಸ್ತೆಯಲ್ಲೇ ಅರ್ಧ ಗಂಟೆ ನರಳಾಡಿದ ಯುವಕನನ್ನು ನಂತರ ಆಂಬುಲೆನ್ಸ್ ನಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ.
ಇಬ್ಬರು ದಾಸರಹೊಸಹಳ್ಳಿ ಮೂಲದವರು. ಬೈಕ್ ಗೆ ಕಾರ್ ಡಿಕ್ಕಿಯಾಗಿ ಪರಾರಿಯಾದ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಬಂಗಾರಪೇಟೆ ಪೊಲೀಸರು ಭೇಟಿ ನೀಡಿ ತನಿಖೆ ಮುಂದುವರಿಸಿದ್ದಾರೆ.