ರಾಷ್ಟ್ರೀಯ

ಅಯ್ಯಪ್ಪ ಮಾಲೆ ಹಾಕುವವರು ಇವುಗಳನ್ನು ಪಾಲಿಸಲೇಬೇಕು

Pinterest LinkedIn Tumblr


ಅಯ್ಯಪ್ಪ ವ್ರತ ಮಾಡುವುದೆಂದರೆ ಅದೊಂದು ದೈವೀಕವಾದ ಅನುಭವ. ಸನಾತನ ಧರ್ಮದ ಪ್ರಕಾರ ಮನುಷ್ಯ ಭಗವಂತನಲ್ಲಿ ಐಕ್ಯವಾಗಲು ರಾಜ ಯೋಗ, ಭಕ್ತಿ ಯೋಗ, ಕರ್ಮಾ ಯೋಗ, ಜ್ಞಾನ ಯೋಗ ಮಾರ್ಗಗಳಿವೆ. ಅಯ್ಯಪ್ಪ ವ್ರತ ಮಾಡುವವರು ‘ಭಕ್ತಿ ಯೋಗ’ ಮೂಲಕ ದೈವ ಸ್ವರೂಪದ ಅನುಭವ ಪಡೆಯುತ್ತಾರೆ.

ಅಯ್ಯಪ್ಪ ವ್ರತ 41 ದಿನಗಳ ಆಚರಣೆ. ಅಯ್ಯಪ್ಪ ಭಕ್ತರು ಶಬರಿ ಮಲೆಗೆ ಹೋಗಿ ಅಯ್ಯಪ್ಪನ ದರ್ಶನ ಪಡೆಯುವ ಮೊದಲು 41 ದಿನಗಳ ಕಠಿಣ ವ್ರತಾಚರಣೆ ಮಾಡುತ್ತಾರೆ. ಒಂದು ಶಿಸ್ತುಬದ್ಧವಾದ ಜೀವನ ನಡೆಸುತ್ತಾರೆ. ಅದಕ್ಕಾಗಿ ಈ ನಿಯಮಗಳನ್ನು ಅಳವಡಿಸಿಕೊಳ್ಳುತ್ತಾರೆ.

1. ವ್ರತದಲ್ಲಿರುವವರು ಬೆಳಗ್ಗೆ ಮತ್ತು ಸಂಜೆ ಸ್ನಾನ ಮಾಡಿ ಪ್ರಾರ್ಥಿಸಬೇಕು.
2. ಸಸ್ಯಾಹಾರಿಯಾಗಬೇಕು
3. ಸಿನಿಮಾ ಮತ್ತಿತರ ಪ್ರಲೋಭನೆಕಾರಿ ಮನರಂಜನೆಗಳಿಂದ ದೂರವಿದ್ದು ಸದಾ ಅಯ್ಯಪ್ಪನನ್ನು ನೆನೆಯುತ್ತಾ ಇರಬೇಕು.
4. ಈ ವ್ರತ ಮಾಡುವವರು ಯಾವುದೇ ರೀತಿಯ ಕೆಡಕು ಕೆಲಸ ಮಾಡುವುದಾಗಲಿ, ಆಲೋಚಿಸುವುದಾಗಲಿ ಮಾಡಬಾರದು.
5. ಪಾದರಕ್ಷೆಗಳನ್ನು ಬಳಸದೇ ಇದ್ದರೆ ಒಳ್ಳೆಯದು.
6. ಸಮೀಪದ ಅಯ್ಯಪ್ಪ ದೇವಾಲಯಕ್ಕೆ ಹೋಗಿ ಪೂಜೆ ಸಲ್ಲಿಸಬೇಕು.
7. ಕನ್ನಿ ಸ್ವಾಮಿ (ಮೊದಲ ಬಾರಿ ಮಲೆಗೆ ಹೋಗುವವರು) ಕಪ್ಪು ಬಟ್ಟೆ ಧರಿಸಬೇಕು. ಗುರುಸ್ವಾಮಿಗಳು ಕಾವಿಪಂಚೆ ಧರಿಸಬಹುದು.

Comments are closed.