ರಾಷ್ಟ್ರೀಯ

ತಿರುವನಂತಪುರಂ-ಬೆಂಗಳೂರು ವಿಮಾನದೊಳಗೆ ಲ್ಯಾಪ್‌ಟಾಪ್‌ನಲ್ಲಿ ಬೆಂಕಿ

Pinterest LinkedIn Tumblr


ಹೊಸದಿಲ್ಲಿ: ತಿರುವನಂತಪುರಂನಿಂದ ಬೆಂಗಳೂರಿಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ಪ್ರಯಾಣಿಕರೊಬ್ಬರ ಲ್ಯಾಪ್‌ಟಾಪ್‌ಗೆ ಬೆಂಕಿ ಹತ್ತಿಕೊಂಡಿದ್ದು, ಬಳಿಕ ಅಗ್ನಿಶಾಮಕ ಚಿಮುಕಿಸಿ ಬೆಂಕಿ ನಂದಿಸಲಾಯಿತು. ಮೊನ್ನೆ ಶನಿವಾರ ಈ ಘಟನೆ ನಡೆದಿದೆ.

6ಇ-445 (ವಿಟಿ-ಐಜಿವಿ) ವಿಮಾನದೊಳಗೆ ಕಪ್ಪು ಬಣ್ಣದ ಬ್ಯಾಗ್‌ ಒಂದರಿಂದ ಸುಟ್ಟ ವಾಸನೆ ಬರುತ್ತಿದೆ ಎಂದು ಪ್ರಯಾಣಿಕರು ತಿಳಿಸಿದಾಗ ಆತಂಕದ ವಾತಾವರಣ ಸೃಷ್ಟಿಯಾಯಿತು. ತಕ್ಷಣ ವಿಮಾನದ ಸಿಬ್ಬಂದಿ ಅಕ್ಕ ಪಕ್ಕದ ಸೀಟುಗಳಿಂದ ಪ್ರಯಾಣಿಕರನ್ನು ಎಬ್ಬಿಸಿ ಬ್ಯಾಗ್‌ನಿಂದ ಲ್ಯಾಪ್‌ಟಾಪನ್ನು ಹೊರಗೆಳೆದು ನೀರು ಚಿಮುಕಿಸಿ ಬೆಂಕಿ ನಂದಿಸಿದರು. ನಂತರ ವಿಮಾನವನ್ನು ಸುರಕ್ಷಿತವಾಗಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಸಲಾಯಿತು. ಪ್ರಯಾಣಿಕರನ್ನು ಯಾವುದೇ ಅಪಾಯವಿಲ್ಲದೆ ಹೊರಗೆ ಕರೆತರಲಾಯಿತು. ನಂತರ ನಾಗರಿಕ ವಿಮಾನಯಾನ ನಿರ್ದೇಶನಾಲಯಕ್ಕೆ (ಡಿಜಿಸಿಎ) ಮಾಹಿತಿ ನೀಡಲಾಯಿತು.

‘ಪ್ರಯಾಣಿಕರ ಸಹಕಾರಕ್ಕೆ ಧನ್ಯವಾದಗಳು. ಇಂಡಿಗೋ ವಿಮಾನಗಳಲ್ಲಿ ಪ್ರಯಾಣಿಕರ ಸುರಕ್ಷತೆಗೆ ಗರಿಷ್ಠ ಆದ್ಯತೆ ನೀಡಲಾಗುತ್ತಿದೆ. ಅದರಲ್ಲಿ ಯಾವುದೇ ರಾಜಿಯಿಲ್ಲ’ ಎಂದು ಇಂಡಿಗೋ ಪ್ರಕಟಣೆ ತಿಳಿಸಿದೆ.

Comments are closed.