ರಾಷ್ಟ್ರೀಯ

ರಾಷ್ಟ್ರಪತಿ ಪುತ್ರಿಗೆ ಗಗನಸಖಿ ಕಾಯಕದಿಂದ ಮುಕ್ತಿ

Pinterest LinkedIn Tumblr


ಹೊಸದಿಲ್ಲಿ: ಏರ್‌ ಇಂಡಿಯಾ ವಿಮಾನದಲ್ಲಿ ಗಗನಸಖಿಯಾಗಿದ್ದ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರ ಪುತ್ರಿ ಸ್ವಾತಿಯವರನ್ನು ಇತ್ತೀಚೆಗೆ ಭದ್ರತಾ ಕಾರಣಗಳಿಗಾಗಿ ಕಚೇರಿ ಕೆಲಸಕ್ಕೆ ಸೀಮಿತಗೊಳಿಸಲಾಗಿದೆ ಎಂಬ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ.

ಸ್ವಾತಿ (ಇವರು ಸರ್‌ನೇಮ್‌ ಬಳಸುವುದಿಲ್ಲ) ಅವರು ಇಲ್ಲಿಯ ತನಕ ಏರ್‌ ಇಂಡಿಯಾ ಸಂಸ್ಥೆಯ ‘ದೂರ ಪಯಣದ’ ಬೋಯಿಂಗ್‌ 787 ಹಾಗೂ ಬೋಯಿಂಗ್‌ 777 ವಿಮಾನಗಳಲ್ಲಿ ಕ್ಯಾಬಿನ್‌ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ, ಒಂದು ತಿಂಗಳಿಂದೀಚೆಗೆ, ಅವರನ್ನು ದಿಲ್ಲಿಯಲ್ಲಿರುವ ಏರ್‌ ಇಂಡಿಯಾದ ಕೇಂದ್ರ ಕಚೇರಿಯ ಸಮನ್ವಯ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ ಎಂದು ವಿಮಾನ ಸಂಸ್ಥೆಯ ವಕ್ತಾರ ಭಾನುವಾರ ತಿಳಿಸಿದ್ದಾರೆ.

”ರಾಷ್ಟ್ರಪತಿಯವರ ಪುತ್ರಿಯಾಗಿರುವುದರಿಂದ, ಸುತ್ತಮುತ್ತ ಭದ್ರತಾ ಸಿಬ್ಬಂದಿ ಇಟ್ಟುಕೊಂಡು (ಗಗನಸಖಿಯಾಗಿ) ಕಾರ್ಯ ನಿರ್ವಹಿಸಲು ಅವರಿಗೆ ಸಾಧ್ಯವಾಗುತ್ತದೆ ಎಂದು ನನಗನ್ನಿಸುವುದಿಲ್ಲ. ಅವರ ಕಾವಲು ಭಟರಿಗೆ ಒಂದಷ್ಟು ಸೀಟುಗಳನ್ನು ಮೀಸಲಿಡಬೇಕಾಗುವುದರಿಂದ ಪ್ರಯಾಣಿಕರ ಸೀಟುಗಳನ್ನು ಕಡಿತಗೊಳಿಸಬೇಕಾಗುತ್ತದೆ,” ಎಂದು ಏರ್‌ ಇಂಡಿಯಾ ಮೂಲಗಳು ತಿಳಿಸಿವೆ.

Comments are closed.