ರಾಷ್ಟ್ರೀಯ

2 ತಿಂಗಳಿಂದ ನರಕ: ರಯಾನ್‌ ಶಾಲಾ ಬಸ್‌ ಚಾಲಕ

Pinterest LinkedIn Tumblr


ಗುರುಗ್ರಾಮ: ನಾನೇನು ತಪ್ಪು ಮಾಡದಿದ್ದರೂ ಕಳೆದೆರಡು ತಿಂಗಳಿನಿಂದ ನರಕ ಯಾತನೆಯಲ್ಲಿದ್ದೇನೆ. ಹರಿಯಾಣ ಪೊಲೀಸರು ಇಲ್ಲವೇ ಸಿಬಿಐವರು ನನ್ನ ವಿಚಾರಣೆ ನಡೆಸುತ್ತಲೇ ಇದ್ದರು ಎಂದು ರಯಾನ್‌ ಶಾಲೆಯ ಬಸ್‌ ಚಾಲಕ ಸೌರವ್‌ ರಾಘವ್‌ ಹೇಳಿದ್ದಾರೆ.

ರಯಾನ್‌ ಶಾಲೆಯಲ್ಲಿ ವಿದ್ಯಾರ್ಥಿ ಪ್ರದ್ಯಮ್ನ ಕೊಲೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸೌರವ್‌ ಅವರನ್ನೂ ಪೊಲೀಸರು ಮತ್ತು ಬಿಬಿಐ ವಿಚಾರಣೆ ನಡೆಸಿದೆ.

ಆ ಘಟನೆ ನಡೆದ ಬಳಿಕ ಶಾಲೆಗೆ ಹೋದರೆ ನನ್ನನ್ನು ಚಾಲಕನಾಗಿ ಕೆಲಸ ಮಾಡಲು ಅಲ್ಲಿ ಅವಕಾಶ ನೀಡಲಿಲ್ಲ. ಈಗ ತನಿಖೆ ಮುಗಿದಿದೆ. ನಾನು ಪ್ರತಿದಿನ ಬೆಳಗ್ಗೆ 6.30ಕ್ಕೆ ಶಾಲೆಯ ಬಳಿ ಹೋಗುತ್ತೇನೆ. ನನಗೆ ಅದು ಸಮಯ್ ವ್ಯರ್ಥ ಎಂಬುದು ಗೊತ್ತಿದೆ. ಆದರೂ ಆ ಸ್ಥಳವನ್ನು ನಾನು ಬಿಡಲಾರೆ ಎಂದು ಅವರು ಹೇಳಿದ್ದಾರೆ.

ವಿಚಾರಣೆ ವೇಳೆ ಪೊಲೀಸರು ಹಿಂಸಿಸಿದ್ದು, ಸಿಬಿಐನವರು ವಿಚಾರಣೆ ಮಾತ್ರ ನಡೆಸಿದ್ದರು ಎಂದೂ ಸೌರವ್‌ ಹೇಳಿದ್ದಾರೆ. ಪ್ರದ್ಯಮ್ನನ ಕೊಲೆಯ ಬಳಿಕ ಬಸ್‌ ಚಾಲಕರು ಮತ್ತು ನಿರ್ವಾಹಕರಿಗೆ ಶಾಲಾ ಕಟ್ಟಡದೊಳಗೆ ಪ್ರವೇಶವಿಲ್ಲ. ನಮಗೆಂದು ಶಾಲೆಯ ಹೊರಗೆ ವಾಶ್‌ರೂಂ ಕಟ್ಟಿಸಿದ್ದಾರೆ. ಎಲ್ಲರಿಗೂ ಪೊಲೀಸ್‌ ಪರಿಶೀಲನೆ ಕೂಡ ನಡೆಸಲಾಗಿದೆ.

ಸೆ.27ರಂದು ಸಿಬಿಐ ಕಚೇರಿಗೆ ಕರೆಸಿ ವಿಚರಣೆ ನಡೆಸಿದರು. ಮತ್ತೊಬ್ಬ ಚಾಲಕ ವಿಜೇಂದರ್‌ ಜತೆ ಹೋದೆ. ಆಗ ಕೊಲೆ ಆರೋಪಿ ಅಶೋಕ್‌ ಕುಮಾರ್‌ ಎಷ್ಟು ದಿನದಿಂದ ಗೊತ್ತು ಎಂದು ಪ್ರಶ್ನಿಸಿದರು. ನಾಲ್ಕು ತಿಂಗಳಿಂದ ಗೊತ್ತು ಎಂದೆ. ಅಶೋಕ್‌ ಕೊಲೆ ಮಾಡುವ ಸಂಶಯ ಇದೆಯೇ ಎಂದು ಕೇಳಿದಾಗ ಇಲ್ಲ , ಮಕ್ಕಳಲ್ಲಿ ಗದರಿ ಮಾತನಾಡುವವರೂ ಅಲ್ಲ ಎಂದು ಉತ್ತರಿಸಿದ್ದಾಗಿ ಹೇಳಿದ್ದಾರೆ.

ಚಾಕುವಿನ ಬಗ್ಗೆ ಕೇಳಿದಾಗ, ಬಸ್‌ ಟೂಲ್‌ ಬಾಕ್ಸ್‌ ಅನ್ನು ಕ್ಲೀನ್‌ ಮಾಡುವಾಗ ಚಾಕು ಇರಲಿಲ್ಲ ಎಂದೆ. ಆಗ ಅವರು ಆ ಚಾಕುವನ್ನು ಅಶೋಕ್‌ ಕುಮಾರ್‌ ತೆಗೆದುಕೊಂಡಿರುವುದಾಗಿ ತಿಳಿಸಿದರು ಎಂದು ಸೌರವ್‌ ವಿವರಿಸಿದ್ದಾರೆ.

ಗುರುಗ್ರಾಮ ರಯಾನ್‌ ಇಂಟರ್‌ನ್ಯಾಷನಲ್‌ ಸ್ಕೂಲ್‌ನಲ್ಲಿ 2016ರ ಸೆಪ್ಟೆಂಬರ್‌ 8ರಂದು ನಡೆದ 2ನೇ ತರಗತಿ ವಿದ್ಯಾರ್ಥಿ ಪ್ರದ್ಯುಮ್ನನ ಕೊಲೆಯಾಗಿತ್ತು.

ಪ್ರದ್ಯುಮ್ನನ ಸಾವಿಗೆ ಕಂಡಕ್ಟರ್‌ ಅಶೋಕ್‌ ಕುಮಾರ್‌ ಕಾರಣ ಎಂದು ಎಲ್ಲರೂ ಭಾವಿಸಿದ್ದರು ಬಳಿಕ ಪೊಲೀಸರು ಅಶೋಕ್‌ ಕುಮಾರ್‌ನನ್ನು ಬಂಧಿಸಿದ್ದರು.

ಪ್ರಕರಣದ ತನಿಖೆಯನ್ನು ಹರಿಯಾಣ ಸರಕಾರ ಮೊದಲು ವಿಶೇಷ ತನಿಖಾ ತಂಡಕ್ಕೆ(ಎಸ್‌ಐಟಿ) ವಹಿಸಿತ್ತು. ಬಾಲಕನ ತಂದೆ ವರುಣ್‌ ಠಾಕೂರ್‌ ಮತ್ತು ಕುಟುಂಬ ಸದಸ್ಯರು ಸಿಬಿಐ ತನಿಖೆ ಕೋರಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. ಆ ಬಳಿಕ ತನಿಖೆಯ ಹೊಣೆ ಸಿಬಿಐಗೆ ವರ್ಗಾವಣೆಯಾಗಿತ್ತು.

ಸಿಬಿಐ ಅತ್ಯಂತ ಕೂಲಂಕಷವಾಗಿ ನಡೆಸಿದ ತನಿಖೆಯಿಂದ ಪ್ರಕರಣದ ಚಿತ್ರಣವೇ ಬದಲಾಗಿದೆ. 11ನೇ ಕ್ಲಾಸಿನ ವಿದ್ಯಾರ್ಥಿಯೊಬ್ಬ ಪರೀಕ್ಷೆ ಮುಂದೂಡಿಕೆಗಾಗಿ ಈ ಕೃತ್ಯ ನಡೆಸಿದ್ದಾನೆ ಎಂಬ ಆಘಾತಕಾರಿ ಅಂಶ ಬಯಲಾಗಿದೆ.

Comments are closed.