ಮನೋರಂಜನೆ

ಅಧಿಕೃತವಾಗಿ ತನ್ನ ಮದುವೆ ಘೋಷಿಸಿದ ನಟಿ ನಮಿತಾ

Pinterest LinkedIn Tumblr


ಸಾಮಾನ್ಯವಾಗಿ ಸಿನಿಮಾ ತಾರೆಗಳ ಮದುವೆ ಎಂದರೆ ಅಂತೆಕಂತೆಗಳದ್ದೇ ಕಾರುಬಾರು. ಅವರಿಗೆ ಮದುವೆ ಸೆಟ್ಟಾಯಿತಂತೆ, ಇಂತಹವರ ಜತೆ ಓಡಾಡುತ್ತಿದ್ದಾರಂತೆ ಎಂಬ ಸುದ್ದಿಗಳು ಹರಿದಾಡುತ್ತಿರುತ್ತವೆ. ಆದರೆ ನಟಿ ನಮಿತಾ ಮಾತ್ರ ತಮ್ಮ ಮದುವೆಯನ್ನು ಘೋಷಿಸಿದ್ದಾರೆ.

ತಮಿಳು ನಟ ವೀರೇಂದ್ರ ಚೌದರಿಯನ್ನು ವರಿಸುತ್ತಿದ್ದಾರೆ ನಮಿತಾ. ಇವರಿಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸಿಕೊಳ್ಳುತ್ತಿದ್ದು, ಎರಡೂ ಕುಟುಂಬಿಕರು ಇವರ ಮದುವೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಹಾಗಾಗಿ ನವೆಂಬರ್ 24ರಂದು ಇವರಿಬ್ಬರ ಮದುವೆ ತಿರುಪತಿಯಲ್ಲಿ ಅದ್ದೂರಿಯಾಗಿ ನಡೆಯಲಿದೆ.

ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ನಮಿತಾ ಮದುವೆ ಸುದ್ದಿ ಪ್ರಕಟಿಸಿದ್ದು, ‘ನವೆಂಬರ್ 24ರಂದು ವೀರ್ ಮತ್ತು ನಾನು ಮದುವೆಯಾಗುತ್ತಿದ್ದೇವೆ. ನಿಮ್ಮ ಪ್ರೀತಿ ಮತ್ತು ಹಾರೈಕೆ ಇರಲಿ. ನ.24ರಂದು ನಾನು ಮದುಮಗಳಾಗುತ್ತಿದ್ದೇನೆ. ಎಲ್ಲರಿಗೂ ಥ್ಯಾಂಕ್ಸ್ ‘ ಎಂದಿದ್ದಾರೆ.

ಇತ್ತೀಚೆಗಷ್ಟೇ ನಮಿತಾ ತಮಿಳಿನ ‘ಬಿಗ್ ಬಾಸ್‌’ನಲ್ಲೂ ಸ್ಪರ್ಧಿಸಿದ್ದರು. 2002ರಲ್ಲಿ ತೆಲುಗಿನ ‘ಸ್ವಂತಂ’ ಚಿತ್ರದ ಮೂಲಕ ಬೆಳ್ಳಿತೆರೆಗೆ ಅಡಿಯಿಟ್ಟ ನಮಿತಾ ಇದುವರೆಗೆ 40ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡದಲ್ಲಿ ನೀಲಕಂಠ, ಇಂದ್ರ, ಹೂ, ನಮಿತಾ ಐ ಲವ್ ಯೂ, ಬೆಂಕಿ ಬಿರುಗಾಳಿ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

Comments are closed.