ರಾಷ್ಟ್ರೀಯ

19ರ ಯುವತಿಯ ಮೇಲೆ 3 ಗಂಟೆಗಳ ಕಾಲ ಗ್ಯಾಂಗ್‌ರೇಪ್‌!

Pinterest LinkedIn Tumblr


ಭೂಪಾಲ್‌: ಮಧ್ಯಪ್ರದೇಶದಲ್ಲಿ ನಡೆದ ಬೆಚ್ಚಿ ಬೀಳಿಸುವ ಹೇಯ ಘಟನೆಯೊಂದರಲ್ಲಿ 19 ವರ್ಷದ ವಿದ್ಯಾರ್ಥಿನಿಯೊಬ್ಬಳ ಮೇಲೆ ನಾಲ್ವರು ಕಾಮುಕರು 3 ಗಂಟೆಗಳ ಕಾಲ ಗ್ಯಾಂಗ್‌ ರೇಪ್‌ ನಡೆಸಿ ಅಟ್ಟಹಾಸ ಮೆರೆದಿದ್ದಾರೆ.

ಹಬೀಬ್‌ ಗಂಜ್‌ ರೈಲು ನಿಲ್ದಾಣದ ಬಳಿ ಐಎಎಸ್‌ ತರಬೇತಿ ಮುಗಿಸಿ ವಾಪಾಸಾಗುತ್ತಿದ್ದ ವಿದ್ಯಾರ್ಥಿನಿಯನ್ನು ನಾಲ್ವರು ಅಪಹರಿಸಿ ನಿರ್ಜನ ಪ್ರದೇಶದಲ್ಲಿ ಕೃತ್ಯ ಎಸಗಿದ್ದಾರೆ.

ಸಂತ್ರಸ್ತೆಯ ತಂದೆ ರೈಲ್ವೇ ಪೊಲೀಸ್‌ ಸಿಬಂದಿಯಾಗಿದ್ದರೆ, ತಾಯಿ ಪೊಲೀಸ್‌ ಪೇದೆ ಎಂದು ತಿಳಿದು ಬಂದಿದೆ.

ಘಟನೆಯ ಬಗ್ಗೆ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ತೀವ್ರ ಕಳವಳ ವ್ಯಕ್ತ ಪಡಿಸಿ ಇಬ್ಬರು ಪೊಲೀಸ್‌ ಅಧಿಕಾರಿಗಳನ್ನು ಅಮಾನತು ಮಾಡಿದ್ದಾರೆ.

ನಾಲ್ವರು ಆರೋಪಿಗಳನ್ನು ಗುರುತಿಸಲಾಗಿದ್ದು,ಗೋಲು ಬಿಹಾರಿ , ಅಮರ್‌ ಛಾಂಟು, ರಾಜೇಶ್‌ ಮತ್ತು ರಮೇಶ್‌ ಎನ್ನುವವರಾಗಿದ್ದು ಅವರಿಗಾಗಿ ಶೋಧ ನಡೆಸಲಾಗುತ್ತಿದೆ.

-ಉದಯವಾಣಿ

Comments are closed.