ರಾಷ್ಟ್ರೀಯ

ಪುರುಷರ ‘ಘನತೆ’ ಬಗ್ಗೆಯೂ ಚರ್ಚಿಸಿ: ಕೋರ್ಟ್‌

Pinterest LinkedIn Tumblr

ಹೊಸದಿಲ್ಲಿ: ಪುರುಷರ ‘ಘನತೆ ಮತ್ತು ಗೌರವಗಳ’ ಬಗ್ಗೆ ಎಲ್ಲಿಯೂ ಚರ್ಚೆಯೇ ಆಗುತ್ತಿಲ್ಲ.; ಮಹಿಳೆಯರ ಘನತೆ ಮತ್ತು ಗೌರವಗಳಿಗಾಗಿ ಎಲ್ಲರೂ ತಮ್ಮ ತಮ್ಮೊಳಗೆ ಹೋರಾಡುತ್ತಿದ್ದಾರೆ. ಎಷ್ಟೋ ವೇಳೆ ಮಹಿಳೆಯರು ತಮ್ಮ ಹಕ್ಕುಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಅತ್ಯಾಚಾರ ಆರೋಪಿಯೊಬ್ಬನನ್ನು ಇತ್ತೀಚೆಗೆ ದೋಷಮುಕ್ತಗೊಳಿಸುತ್ತಾ ಸುಪ್ರೀಂ ಕೋರ್ಟ್‌ ಈ ವಿಚಾರಗಳನ್ನು ಮಂಡಿಸಿದೆ.

‘ಈಗ ಪುರುಷರ ಪರ ನಿಲ್ಲ ಬೇಕಾದ ಸಮಯ ಬಂದಿದೆ’ ಎಂದು ಪೋಕ್ಸೋ ಕಾಯ್ದೆ ನ್ಯಾಯಾಲಯದ ವಿಶೇಷ ನ್ಯಾಯಾಧೀಶರಾದ ನಿವೇದಿತಾ ಅನಿಲ್‌ ಶರ್ಮಾ ಹೇಳಿದರು. ವಿಚಾರಣೆ ವೇಳೆ ಮಹಿಳೆ ಮತ್ತು ಆಕೆಯ ಪೋಷಕರು ಆರೋಪವನ್ನು ಸಾಬೀತುಪಡಿಸಲು ವಿಫಲರಾದರು.

‘ಬಲಿಪಶು’ಗಳನ್ನು (ವಿಕ್ಟಿಮ್ಸ್‌) ಈಗ ‘ಬದುಕುಳಿದವರು’ (ಸರ್ವೈವರ್ಸ್‌) ಎಂದು ಕರೆಯಲಾಗುತ್ತಿದೆ ಎಂಬ ಉದನ್ನು ಗಮನಿಸಿದ ಕೋರ್ಟ್‌, ‘ವಿಚಾರಣೆಯ ಅವಧಿಯಲ್ಲಿ ದೋಮುಕ್ತಗೊಂಡ ಆರೋಪಿ ಸುದೀರ್ಘ ಕಾಲ ಕಸ್ಟಡಿಯಲ್ಲಿ ಇರುವಂತಾಗಿದೆ. ಅವರನ್ನು ಗೌರವದಿಂದ ದೋಷಮುಕ್ತಗೊಳಿಸಬೇಕಿದೆ. ಅವರನ್ನು ‘ಅತ್ಯಾಚಾರ ಆರೋಪದಿಂದ ಪಾರಾದವರು’ ಎಂದು ಏಕೆ ಕರೆಯಬಾರದು?’ ಎಂದು ಜಡ್ಜ್‌ ಪ್ರಶ್ನಿಸಿದ್ದಾರೆ.

ದೋಷಮುಕ್ತ ವ್ಯಕ್ತಿ ತನ್ನ ಮಾನಹಾನಿ ಮಾಡಿದ ವಿಚಾರಣಾ ವಕೀಲರ ವಿರುದ್ಧ ಕೇಸು ದಾಖಲಿಸಬಹುದು. ಎಂದು ತೀರ್ಪಿನಲ್ಲಿ ಹೇಳಲಾಗಿದೆ.

20 ವರ್ಷದ ಯುವಕನ ವಿರುದ್ಧ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ನಡೆಸಿದ ಆರೋಪ ಹೊರಿಸಲಾಗಿತ್ತು. 1997ರ ಸೆಪ್ಟೆಂಬರ್‌ 18ರಂದು ಘಟನೆ ನಡೆದಿದೆ ಎಂದು ದೂರಲಾಗಿತ್ತು.

ಈ ಆರೋಪಕ್ಕೆ ಆತನ ಮೇಲೆ ಯಾವುದೇ ಕಾರಣಗಳನ್ನು ನೀಡದಿರುವುದು ಆತನ ಭವಿಷ್ಯಕ್ಕೆ ಮಾರಕವಾಗಬಹುದು ಎಂದು ಕೋರ್ಟ್‌ ಕಳವಳ ವ್ಯಕ್ತಪಡಿಸಿತು.

Comments are closed.