ಕರ್ನಾಟಕ

ಬಳ್ಳಾರಿ ಗಣಿ ಕುರಿತ ವಿಚಾರ ಶೀಘ್ರ ಬಹಿರಂಗ: ಸಂತೋಷ್‌ ಹೆಗ್ಡೆ

Pinterest LinkedIn Tumblr

ಬಾಗಲಕೋಟ: ಬಳ್ಳಾರಿ ಗಣಿ ಕುರಿತು ಶೀಘ್ರದಲ್ಲೇ ಒಂದು ವಿಷಯ ಬಹಿರಂಗಗೊಳಿಸುವೆ. ಎಲ್ಲ ಮಾಧ್ಯಮಗಳ ಮುಂದೆ ಮಹತ್ವದ ವಿಚಾರ ಹೊರ ಹಾಕುವೆ ಎಂದು ಮಾಜಿ ಲೋಕಾಯುಕ್ತ, ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಹೇಳಿದ್ದಾರೆ.

ಸರಕಾರ ಮತ್ತು ರಾಜಕಾರಣಿಗಳ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಎಸಿಬಿಯನ್ನು ಮುಚ್ಚಬೇಕು. ಲೋಕಾಯುಕ್ತವನ್ನು ಬಲಪಡಿಸಬೇಕು. ಲೋಕಾಯುಕ್ತಕ್ಕೆ ಅಧಿಕಾರ ವಾಪಸ್ ಕೊಡಬೇಕು. ಲೋಕಾಯುಕ್ತ ಸಂಸ್ಥೆ ಇರುವುದು ಯಾವುದೇ ರಾಜಕೀಯ ಪಕ್ಷಗಳಿಗೂ ಬೇಕಿಲ್ಲ ಎಂದರು. ರಾಜಕಾರಣಿಗಳು ರಕ್ತದ ರುಚಿಕಂಡ ಹುಲಿಗಳು, ಹೀಗಾಗಿ ಲೋಕಾಯುಕ್ತ ಸಂಸ್ಥೆ ಬಲಪಡಿಸುವುದು ಅವರಿಗೆ ಬೇಕಿಲ್ಲ. ಜನ ಸೇವಕರು ಎನ್ನುವುದನ್ನು ಮರೆತು ಜನತಾ ಮಾಲೀಕರಂತಾಗಿದ್ದಾರೆ.ಶಾಸಕಾಂಗದ ಹಸ್ತ ಕ್ಷೇಪ ಎಲ್ಲ ಕ್ಷೇತ್ರಗಳಲ್ಲಿ ಹೆಚ್ಚಾಗುತ್ತಿದೆ. ನ್ಯಾಯಾಂಗದ ಕೆಲಸವನ್ನು ಶಾಸಕಾಂಗ ಮಾಡುತ್ತಿದೆ. ಪ್ರಜಾಪ್ರಭುತ್ವ ದುರ್ಬಲವಾಗುತ್ತಿದೆ ಎಂದು ಹೇಳಿದರು.

ನೋಟ್ ಬ್ಯಾನ್‌ನಿಂದ ಕಪ್ಪು ಹಣ ಕಡಿವಾಣ ಬಿದ್ದಿದೆ. ಈಗಲ್ಲದಿದ್ದರೂ ಭವಿಷ್ಯದಲ್ಲಿ ನೋಟ್ ಬ್ಯಾನ್‌ನ ಪರಿಣಾಮ ಒಳ್ಳೆಯದಾಗುತ್ತದೆ. ದೇಶದಲ್ಲಿ ಏಕಕಾಲಕ್ಕೆ ಚುನಾವಣೆ ನಡೆಯುವುದು ಒಳ್ಳೆಯದು ಎಂದರು.

Comments are closed.