
ಹೊಸದಿಲ್ಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಕೆಲವೇ ದಿನಗಳಲ್ಲಿ ಅಧ್ಯಕ್ಷ ಹುದ್ದೆಗೆ ಏರಲಿದ್ದಾರೆ. ಅದಕ್ಕೆ ಪೂರಕವಾಗಿ @OfficeOfRG ಎಂಬ ಟ್ವಿಟರ್ ಖಾತೆ ಬದಲಾವಣೆಯಾಗುವ ಸಾಧ್ಯತೆ ಇದೆ. ಟ್ವಿಟರ್‌ನಲ್ಲಿ ಜನಪ್ರಿಯತೆ ಗಳಿಸಿರುವ ಪ್ರಧಾನಿ ಮೋದಿಯವರಿಗೆ ಸ್ಪರ್ಧೆ ನೀಡುವ ನಿಟ್ಟಿನಲ್ಲಿ “ರಾಹುಲ್ ಗಾಂಧಿ’ ಅಥವಾ “ರಾಹುಲ್’ ಎಂದು ಬದಲಿಸಿಕೊಳ್ಳುವ ಸಾಧ್ಯತೆಯಿದೆ. ಮೋದಿಗೆ 3.55 ಕೋಟಿ ಫಾಲೋವರ್ಸ್ ಇದ್ದರೆ, ರಾಹುಲ್ 37 ಲಕ್ಷ ಫಾಲೋವರ್‌ಗಳನ್ನು ಹೊಂದಿದ್ದಾರೆ.
-ಉದಯವಾಣಿ
Comments are closed.