ಕರ್ನಾಟಕ

‘ಶಾ-ಜಾದ’ ಬಗ್ಗೆ ಮಾತನಾಡುವುದಿಲ್ಲ: ಕೋರ್ಟ್ ಆದೇಶದ ಬಳಿಕ ರಾಹುಲ್ ಗಾಂಧಿ

Pinterest LinkedIn Tumblr


ನವದೆಹಲಿ: ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಪುತ್ರ ಜಯ್ ಶಾ ಕಂಪನಿ ವಿರುದ್ಧ ದಿ ವೈರ್ ಪ್ರಕಟಿಸಿದ್ದ ವರದಿಗೆ ಸಂಬಂಧಿಸಿದಂತೆ ಮತ್ತೆ ಯಾವುದೇ ವರದಿ ಪ್ರಕಟಿಸಿದಂತೆ ಕೋರ್ಟ್ ಆದೇಶ ನೀಡಿದ ಬೆನ್ನಲ್ಲೇ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು, ‘ಶಾ-ಜಾದ’ ಬಗ್ಗೆ ಯಾವುದೇ ಮಾತನಾಡುವುದಿಲ್ಲ ಮತ್ತು ಬೇರೆಯವರಿಗೂ ಮಾತನಾಡಲು ಅವಕಾಶ ನೀಡುವುದಿಲ್ಲ ಎಂದು ಶುಕ್ರವಾರ ವ್ಯಂಗ್ಯವಾಡಿದ್ದಾರೆ.
ಮಿತ್ರರೇ, ‘ಶಾ-ಜಾದ’ ಬಗ್ಗೆ ಮಾತನಾಡಬೇಡಿ ಮತ್ತು ಬೇರೆಯವರಿಗೆ ಮಾತನಾಡಲು ಅವಕಾಶ ಕೊಡಬೇಡಿ ಎಂದು ರಾಹುಲ್ ಗಾಂಧಿ ಅವರು, ವೈರ್ ವಿರುದ್ಧ ಜಯ್ ಶಾ ದಾಖಲಿಸಿರುವ ಕ್ರಿಮಿನಲ್ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲಹಬಾದ್ ಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿರುವುದನ್ನು ಉಲ್ಲೇಖಿಸಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. ಅಲ್ಲದೆ ಅಲಹಬಾದ್ ಕೋರ್ಟ್ ತಡೆಯಾಜ್ಞೆ ಕುರಿತ ವರದಿಯನ್ನು ಟ್ಯಾಗ್ ಮಾಡಿದ್ದಾರೆ.
ಪರ್ಷಿಯನ್ ಭಾಷೆಯ ಜಾದ ಎಂದರೇ ಯುವರಾಜ ಎಂದರ್ಥ. ರಾಜರ ಪುತ್ರ ಅಥವಾ ಪುತ್ರಿಗೆ ಕಪ್ಪ ಕಾಣಿಕೆ ನೀಡುವುದಕ್ಕೆ ಈ ಪದವನ್ನು ಬಳಸಲಾಗುತ್ತದೆ.
ಕಳೆದ ಸೋಮವಾರ ಜಯ್ ಶಾ ಕ್ರಿಮಿನಲ್ ಮಾನಹಾನಿ ಪ್ರಕರಣದ ವಿಚಾರಣೆ ನಡೆಸಿದ್ದ ಅಲಹಬಾದ್ ಹೆಚ್ಚುವರಿ ಸಿವಿಲ್ ಜಡ್ಜ್ ಕೋರ್ಟ್, ವೈರ್ ವೆಬ್ ಸೈಟ್ ಪ್ರಕಟಿಸಿದ ವರದಿಗೆ ಸಂಬಂಧಿಸಿದಂತೆ ಯಾವುದೇ ಸುದ್ದಿ ಪ್ರಕಟಿಸದಂತೆ, ಪ್ರಸಾರ ಮಾಡದಂತೆ ಮತ್ತು ಚರ್ಚೆ ನಡೆಸದಂತೆ ತಡೆಯಾಜ್ಞೆ ನೀಡಿತ್ತು.

Comments are closed.