ರಾಷ್ಟ್ರೀಯ

ಸಮಾಜ ಸೇವಕ ಕೈಲಾಷ್ ಸತ್ಯಾರ್ಥಿ ನೋಬಲ್ ಪಾರಿತೋಷಕ ಕಳವು

Pinterest LinkedIn Tumblr


ನವದೆಹಲಿ, ಫೆ. ೭- ಸುಪ್ರಸಿದ್ಧ ಸಮಾಜ ಸೇವಕ ಕೈಲಾಷ್ ಸತ್ಯಾರ್ಥಿ ಅವರಿಗೆ ನೀಡಲಾಗಿದ್ದ ನೋಬೆಲ್ ಪಾರಿತೋಷಕವನ್ನು ಅವರ ಮನೆಗೆ ಕನ್ನ ಹಾಕಿರುವ ದುಷ್ಕರ್ಮಿಗಳು ಅಪಹರಿಸಿದ್ದಾರೆ.

ನೋಬೆಲ್ ಪಾರಿತೋಷಕ ಸೇರಿದಂತೆ ಹಲವಾರು ಅಮೂಲ್ಯ ವಸ್ತುಗಳನ್ನು ಅವರ ಮನೆಯಿಂದ ಕಳವು ಮಾಡಲಾಗಿದೆ.

ಸತ್ಯಾರ್ಥಿ ಅವರ ಮನೆಯಲ್ಲಿ ಈಗ ಕಳವಾಗಿರುವುದು ನೋಬೆಲ್ ಪಾರಿತೋಷಕದ ಪ್ರತಿರೂಪ. ಮೂಲ ಪಾರಿತೋಷಕ ನಿಯಮದಂತೆ ರಾಷ್ಟ್ರಪತಿ ಭವನದಲ್ಲಿದೆ.

ಪೊಲೀಸರು ಕನ್ನಗಳವಿನ ಪ್ರಕರಣ ದಾಖಲಿಸಿದ್ದಾರೆ. ಸತ್ಯಾರ್ಥಿಯವರಿಗೆ ನೋಬೆಲ್ ಪ್ರಶಸ್ತಿ ಬಂದಿರುವುದು ಗೊತ್ತಿದ್ದ ದುಷ್ಕರ್ಮಿಗಳು ಈ ಕಳವು ಮಾಡಿದ್ದಾರೆ. ಆದರೆ ಅಲ್ಲಿದ್ದುದು ಪಾರಿತೋಷಕದ ಪ್ರತಿರೂಪ ಎಂಬುದು ಅವರಿಗೆ ಗೊತ್ತಿರಲಿಲ್ಲ!

ಕಳ್ಳರು ಪಾರಿತೋಷಕವನ್ನು ಮಾತ್ರವೇ ಕದಿಯಲು ಬಂದಿದ್ದರೆ ಎಂಬುದು ಖಚಿತವಾಗಿಲ್ಲ. ಪೊಲೀಸರು ಈ ದಿಸೆಯಲ್ಲಿ ಭಾರಿ ಶೋಧ ಕಾರ್ಯಾಚರಣೆ ನಡೆಸಿದ್ದು, ಸುತ್ತಮುತ್ತಲ ಪ್ರದೇಶದ ಹಳೇ ಅಪರಾಧಿಗಳು ಮತ್ತು ಗುಜರಿ ಅಂಗಡಿಗಳವರನ್ನು ಹಿಡಿದು ತಂದು ಪ್ರಶ್ನಿಸುತ್ತಿದ್ದಾರೆ.

ಸ್ಥಳಕ್ಕೆ ವಿಧಿವಿಜ್ಞಾನ ಪ್ರಯೋಗಾಲಯದ ತಂಡ ಆಗಮಿಸಿ ಬೆರಳಚ್ಚು ಮತ್ತಿತರ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದೆ.

ಕೈಲಾಷ್ ಸತ್ಯಾರ್ಥಿ ಮಕ್ಕಳ ಹಕ್ಕುಗಳ ಸುಪ್ರಸಿದ್ಧ ಹೋರಾಟಗಾರರಾಗಿದ್ದು, ಇದಕ್ಕಾಗಿ ಅವರಿಗೆ 2014ರಲ್ಲಿ ನೋಬೆಲ್ ಶಾಂತ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

Comments are closed.