ರಾಷ್ಟ್ರೀಯ

ತಳ್ಳಿದ ಕಾರಣ ಜಯಲಲಿತಾ ಸತ್ತಿದ್ದಾರೆ: ಪಿ.ಎಚ್.ಪಾಂಡ್ಯನ್

Pinterest LinkedIn Tumblr


ಚೆನ್ನೈ, ಫೆ. ೭- ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರನ್ನು ಪೊಯಸ್ ಗಾರ್ಡನ್ನಿನ ಅವರ ಮನೆಯಲ್ಲಿದ್ದಾಗ ತಳ್ಳಿದ ಕಾರಣ ಅವರು ಸತ್ತಿದ್ದಾರೆ. ಅನುಮಾನ ಬಾರದಿರಲಿ ಎಂಬ ಕಾರಣಕ್ಕಾಗಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಎಐಎಡಿಎಂಕೆ ಪಕ್ಷದ ಹಿರಿಯ ನಾಯಕ ಪಿ.ಎಚ್.ಪಾಂಡ್ಯನ್ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ.

ಜಯಲಲಿತಾ ಸಾವಿನ ಹಿಂದೆ ಯಾವುದೇ ಸಂಚು ಅಥವಾ ಹುನ್ನಾರಗಳಿಲ್ಲ ಎಂದು ನಿನ್ನೆಯಷ್ಟೇ ಲಂಡನ್ನಿನ ವೈದ್ಯ ರಿಚರ್ಡ್ ಬೀಲೆ ಹೇಳಿದ್ದು, ಅದರ ಬೆನ್ನಲ್ಲೇ ಪಾಂಡ್ಯನ್ ಈ ಆರೋಪ ಮಾಡಿದ್ದಾರೆ.

ಯಾವುದೋ ವಾಗ್ವಾದದ ಸಂದರ್ಭದಲ್ಲಿ ಜಯಲಲಿತಾರನ್ನು ಯಾರೊ ತಳ್ಳಿದಾಗ ಅವರು ತಮ್ಮ ಮನೆಯಲ್ಲಿ ಕುಸಿದು ಬಿದ್ದರು ಎಂದು ಪಾಂಡ್ಯನ್ ಹೇಳಿದರು.

ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ. ಶಶಿಕಲಾ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ತರಾತುರಿಯಲ್ಲಿರುವಾಗ ಪಾಂಡ್ಯನ್ ಈ ವಿಷಯವನ್ನು ಬಹಿರಂಗಗೊಳಿಸಿದ್ದಾರೆ.

ಜಯಲಲಿತಾ ಸತ್ತಿದ್ದಕ್ಕಾಗಿ ಶಶಿಕಲಾ ದುಃಖಿಸಲೂ ಇಲ್ಲ ಎಂದೂ ಅವರು ಹೇಳಿದ್ದಾರೆ.

ದಿವಂಗತ ಜಯಲಲಿತಾ ಮತ್ತು ಎಂ.ಜಿ. ರಾಮಚಂದ್ರನ್ ಅವರ ಹಾರೈಕೆಯಿಂದಲೇ ಶಶಿಕಲಾ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿಲ್ಲ ಎಂದು ಪಾಂಡ್ಯನ್ ಹೇಳಿದರು.

ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಅಥವಾ ಮುಖ್ಯಮಂತ್ರಿ ಸ್ಥಾನಕ್ಕೆ ಶಶಿಕಲಾ ಅರ್ಹರಲ್ಲ ಎಂದು ಪಾಂಡ್ಯನ್ ಹೇಳಿದ್ದಾರೆ.

`ಶಶಿಕಲಾ ತಮಿಳುನಾಡಿನ ಮುಖ್ಯಮಂತ್ರಿಯಾಗುವುದು ನನಗೆ ಇಷ್ಟವಿಲ್ಲ’ ಎಂದು ಜಯಲಲಿತಾ ಅವರೇ ಒಮ್ಮೆ ನನಗೆ ಹೇಳಿದ್ದರು’ ಎಂದು ಮತ್ತೊಬ್ಬ ಎಐಎಡಿಎಂಕೆ ಹಿರಿಯ ನಾಯಕ ಮನೋಜ್ ಪಾಂಡ್ಯನ್ ಹೇಳಿದ್ದಾರೆ.

ಮಾಜಿ ಮುಖ್ಯಮಂತ್ರಿ ಜಯಲಲಿತಾ ಮತ್ತು ಶಶಿಕಲಾ ಅವರು ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಪ್ರಕರಣದಲ್ಲಿ ಜಂಟಿ ಆರೋಪಿಗಳಾಗಿರುವ ಕಾರಣ ಶಶಿಕಲಾ ಮುಖ್ಯಮಂತ್ರಿಯಾಗಲು ಅವಕಾಶ ನೀಡದಿರುವಂತೆ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಲಾಗಿದೆ.

Comments are closed.