ರಾಷ್ಟ್ರೀಯ

ಮಹಿಳೆ ದನವೇ: ಹೈಕೋರ್ಟ್ ಪ್ರಶ್ನೆ

Pinterest LinkedIn Tumblr


ನವದೆಹಲಿ, ಫೆ. ೭- ದೆಹಲಿಯ ಮಾನಸಿಕ ವಿಕಲಾಂಗರ ಆಶಾಕಿರಣ ಗೃಹದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಸತತವಾಗಿ ಕಳೆದ ಹತ್ತಾರು ವರ್ಷಗಳಿಂದಲೂ ಮುಂದುವರಿದಿದೆ.

2012ರಲ್ಲೇ ದೆಹಲಿ ಹೈಕೋರ್ಟ್ ಈ ನಿವಾಸದ ಲೋಪದೋಷಗಳನ್ನು ಖಂಡಿಸಿ ಅದರಲ್ಲೂ ಮಹಿಳೆಯರನ್ನು ದನಗಳಂತೆ ನೋಡಿಕೊಳ್ಳುತ್ತಿರುವುದನ್ನು ತಪ್ಪಿಸಿ ಮನುಷ್ಯರಂತೆ ಕಾಣಬೇಕೆಂದು ಎಚ್ಚರಿಕೆ ನೀಡಿತ್ತು.

ಈಗ 2017ರಲ್ಲಿ ದೆಹಲಿಯ ಮಹಿಳಾ ಆಯೋಗ ಅಲ್ಲಿಗೆ ಭೇಟಿ ನೀಡಿ ಮನೋವಿಕಲ ಮಹಿಳೆಯರ ಪಾಲನಾ ಗೃಹದಲ್ಲಿನ ದುರವಸ್ಥೆ ಬಗ್ಗೆ ಕೆಂಡಕಾರಿದೆ. ಅಲ್ಲಿನ ರೋಗಿಗಳು ಬೆತ್ತಲೆ ಓಡಾಡುತ್ತಾರೆ, ಶೌಚಾಲಯದ ವ್ಯವಸ್ಥೆ ಸಮರ್ಪಕವಾಗಿಲ್ಲ. ಇದರಿಂದ ಮಾನವ ಹಕ್ಕುಗಳ ಸಂಪೂರ್ಣ ಉಲ್ಲಂಘನೆಯಾಗಿದೆಯೆಂದು ಆಯೋಗ ಮತ್ತೆ ಖಂಡಿಸಿದೆ.

1998ರಲ್ಲಿ ಆಶಾಕಿರಣದಲ್ಲಿ ಐವರು ಒಟ್ಟಿಗೇ ಸತ್ತಿದ್ದನ್ನೂ ದೆಹಲಿ ನ್ಯಾಯಾಲಯ ಗಮನಿಸಿ ಅಲ್ಲಿನ ವ್ಯವಸ್ಥೆಯನ್ನು ಸುಧಾರಿಸುವಂತೆ ಸೂಚಿಸಿತ್ತು.

ಅಲ್ಲಿನ ನಿವಾಸಿಗಳೆಲ್ಲಾ ಮಾನಸಿಕ ರೋಗಿಗಳಾಗಿರುವುದರಿಂದ ಅವರಿಗೆ ದೂರು ಕೊಡುವುದು ಸಾಧ್ಯವಿಲ್ಲ. ಅವರ ಕಣ್ಣುಗಳಲ್ಲಿ ಏನೋ ಹೇಳಬೇಕೆಂದು ಅನ್ನಿಸುವ ಭಾವವಿದ್ದರೂ ಹೇಳಲಾಗದ ಪರಿಸ್ಥಿತಿಯಲ್ಲಿ ನರಳುತ್ತಿರುವ ಈ ರೋಗಿಗಳ ಬಗ್ಗೆ ಸೂಕ್ತ ಗಮನಹರಿಸುವಂತೆ ರಾಜ್ಯ ಸರ್ಕಾರಕ್ಕೆ ದೆಹಲಿ ಮಹಿಳಾ ಆಯೋಗ ಕಟುವಾದ ಎಚ್ಚರಿಕೆ ನೀಡಿದೆ.

ಸ್ವತಂತ್ರ ಭಾರತದಲ್ಲಿ ಇನ್ನೂ ಇಂತಹ ಅಮಾನವೀಯ ಶೋಷಣೆ ನಡೆಯುತ್ತಿರುವುದು ದುರದೃಷ್ಟಕರ ಎಂದಿರುವ ಅದರ ಅಧ್ಯಕ್ಷ ಗಲ್ಹೌತ್ ಸರ್ಕಾರ ಈ ನಿರ್ಲಕ್ಷವನ್ನು ನಿಲ್ಲಿಸಬೇಕು, ಅವರೆಲ್ಲರೂ ಗೌರವದಿಂದ ಬದುಕುವಂತೆ ವ್ಯವಸ್ಥೆ ಮಾಡಬೇಕೆಂದೂ ರಾಜ್ಯ ಸರ್ಕಾರಕ್ಕೆ ಸಲಹೆ ಮಾಡಿದ್ದಾರೆ.

Comments are closed.