ರಾಷ್ಟ್ರೀಯ

ಸಮಾಜವಾದಿ- ಕಾಂಗ್ರೆಸ್ ಪರ ಮುಲಾಯಂ ಚುನಾವಣಾ ಪ್ರಚಾರ

Pinterest LinkedIn Tumblr


ನವದೆಹಲಿ, ಫೆ. ೨- ಉತ್ತರ ಪ್ರದೇಶ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಮೈತ್ರಿ ಕೂಟದ ಪರವಾಗಿ ಪ್ರಚಾರ ಮಾಡುತ್ತೇನೆ ಎಂದು ಮುಲಾಯಂ ಸಿಂಗ್ ಹೇಳುವ ಮೂಲಕ ಯಾದವ್ ಕುಟುಂಬದಲ್ಲಿ ತಂದೆ-ಮಕ್ಕಳ ಕಿತ್ತಾಟ ಬರೀ ನಾಟಕ ಎಂಬುದನ್ನು ದೃಢಪಡಿಸಿದ್ದಾರೆ.

ಮುಖ್ಯಮಂತ್ರಿ ಅಖಿಲೇಶ್ ಯಾದವ್ ತಮ್ಮ ಪುತ್ರ ಅವರ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಮೈತ್ರಿಕೂಟದ ಪರವಾಗಿ ಪ್ರಚಾರ ಮಾಡುತ್ತೇನೆ ಎಂದು ಹೇಳುವ ಮೂಲಕ ಮುಲಾಯಂ ಸಿಂಗ್ ಯಾದವ್ ತಮ್ಮ ಹಿಂದಿನ ನಿಲುವಿನಿಂದ ಸಂಪೂರ್ಣವಾಗಿ ಉಲ್ಟಾ ಹೊಡೆದಿದ್ದಾರೆ.

ಸಮಾಜವಾದಿ ಪಕ್ಷದ ಪರವಾಗಿ ಇದೇ ತಿಂಗಳ 9 ರಿಂದ ತಾವು ಪ್ರಚಾರ ಮಾಡುವುದಾಗಿ ಮುಲಾಯಂ ಸಿಂಗ್ ಯಾದವ್ ಅಖಿಲೇಶ್ ಯಾದವ್ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿರುವುದಕ್ಕೆ ಮುಲಾಯಂ ಸಿಂಗ್ ವಿರೋಧವಿದೆ. ಅವರು ಪ್ರಚಾರಕ್ಕೆ ಬರುವುದಿಲ್ಲ ಎಂಬ ಊಹಾಪೋಹಕ್ಕೂ ಈಗ ತೆರೆ ಬಿದ್ದಿದೆ.

ಹಿಂದಿನ ನಿಲುವು
ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾ‌ಡಿಕೊಳ್ಳುವುದನ್ನು ವಿರೋಧಿಸಿದ್ದ ಮುಲಾಯಂಸಿಂಗ್, ತಾವು ಪಕ್ಷದ ಪರವಾಗಿ ಪ್ರಚಾರ ಮಾಡುವುದಿಲ್ಲ ಎಂದಿದ್ದರು.

ತಂದೆಯ ವಿರೋಧವನ್ನು ಲೆಕ್ಕಿಸದೆ, ಅಖಿಲೇಶ್ ಯಾದವ್ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿದ್ದೇ ಅಲ್ಲದೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರೊಂದಿಗೆ ಅಖಿಲೇಶ್ ಯಾದವ್ ರೋಡ್ ಶೋ ನಡೆಸಿದ್ದರು. ಅದಕ್ಕೆ ವ್ಯಕ್ತವಾದ ಜನ ಬೆಂಬಲವನ್ನು ಗಮನಿಸಿದ್ದ ಮುಲಾಯಂ ಸಿಂಗ್, ಮಗನ ಮೇಲಿನ ಮುನಿಸು ಮರೆತು, ಮಗನ ಬೆನ್ನು ತಟ್ಟಿದ್ದರು. ಈಗ ತಾವು ಪಕ್ಷದ ಪರವಾಗಿ ಪ್ರಚಾರ ಮಾಡುವುದಾಗಿ ಹೇಳಿದ್ದಾರೆ.

ಯಾದವ್ ಕುಟುಂಬದಲ್ಲಿ ಉಂಟಾಗಿದ್ದ ಭಿನ್ನಾಭಿಪ್ರಾಯ-ಜಗಳವನ್ನು ಬರೀ ನಾಟಕ ಎಂದು ವಿರೋಧ ಪಕ್ಷಗಳು ಟೀಕಿಸಿದ್ದವು. ಪುತ್ರನನ್ನು ಮತ್ತೆ ಸಿಎಂ ಗಾದಿಯಲ್ಲಿ ಕೂರಿಸಲು ಮುಲಾಯಂರ ನಾಟಕವಿದು ಎಂದು ಟೀಕಿಸಿದ್ದ ವಿರೋಧ ಪಕ್ಷಗಳ ಟೀಕೆ ಈಗ ನಿಜವಾಗಿದೆ ಎಂದು ಮೂಲಗಳು ತಿಳಿಸಿವೆ.

Comments are closed.