ರಾಷ್ಟ್ರೀಯ

ಏರ್‌ಸೆಲ್‌–ಮ್ಯಾಕ್ಸಿಸ್‌ ಲಂಚದ ಆರೋಪ: ದಯಾನಿಧಿ ಮಾರನ್‌ ಮತ್ತು ಕಲಾನಿಧಿ ಮಾರನ್‌ ಖುಲಾಸೆ

Pinterest LinkedIn Tumblr


ನವದೆಹಲಿ: ಏರ್‌ಸೆಲ್‌–ಮ್ಯಾಕ್ಸಿಸ್‌ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಮತ್ತು ಜಾರಿ ನಿರ್ದೇಶನಾಲಯವು ದೂರ ಸಂಪರ್ಕ ಇಲಾಖೆಯ ಮಾಜಿ ಸಚಿವ ದಯಾನಿಧಿ ಮಾರನ್‌ ಮತ್ತು ಅವರ ಸೋದರ ಕಲಾನಿಧಿ ಮಾರನ್‌ ಹಾಗೂ ಇತರರ ವಿರುದ್ಧ ಸಲ್ಲಿಸಿದ್ದ ದೋಷಾರೋಪವನ್ನು ವಿಶೇಷ ನ್ಯಾಯಾಲಯ ರದ್ದುಗೊಳಿಸಿದೆ.

ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶರಾದ ಒ.ಪಿ. ಶೈನಿ ಈ ಆದೇಶ ಹೊರಡಿಸಿದ್ದಾರೆ. ಮಲೇಷ್ಯಾದ ಟೆಲಿಕಾಂ ಕಂಪೆನಿಯಿಂದ ಮಾರನ್ ಅವರು ಸುಮಾರು ₹ 547 ಕೋಟಿ ಲಂಚ ಪಡೆದಿದ್ದಾರೆ ಎಂದು ಸಿಬಿಐ ಆರೋಪಿಸಿತ್ತು.

ದಯಾನಿಧಿ ಮಾರನ್ ಜತೆಗೆ ಅವರ ಸಹೋದರ ಹಾಗೂ ಸನ್ ಟಿವಿ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕ ಕಲಾನಿಧಿ ಮಾರನ್, ಮ್ಯಾಕ್ಸಿಸ್ ಕಮ್ಯುನಿಕೇಷನ್ ಅಧ್ಯಕ್ಷ ಟಿ.ಆನಂದ ಕೃಷ್ಣ, ಆಸ್ಟ್ರೊ ಆಲ್ ಏಷ್ಯಾ ನೆಟ್‌ವರ್ಕ್‌ನ ಹಿರಿಯ ಅಧಿಕಾರಿ ರಾಲ್ಫ್ ಮಾರ್ಷಲ್, ಆಸ್ಟ್ರೊ ಆಲ್ ಏಷ್ಯಾ ನೆಟ್‌ವರ್ಕ್, ಸನ್ ಟಿವಿ ಮತ್ತು ಮ್ಯಾಕ್ಸಿಸ್ ಕಮ್ಯುನಿಕೇಷನ್ ಕಂಪೆನಿಗಳ ವಿರುದ್ಧವೂ ಸಿಬಿಐ ಅವ್ಯವಹಾರದ ಆರೋಪ ಮಾಡಿತ್ತು.

Comments are closed.