ರಾಷ್ಟ್ರೀಯ

ಕಟ್ಟಡ ಕುಸಿತ: ಅವಶೇಷಗಳ ಅಡಿಯಲ್ಲಿ 15 ಗಂಟೆ ಸಿಲುಕಿದ್ದ 3 ವರ್ಷದ ಮಗು ರಕ್ಷಣೆ

Pinterest LinkedIn Tumblr


ಕಾನ್ಪುರ: ಇಲ್ಲಿನ ಜಜ್​ವಾವು ಪ್ರದೇಶದಲ್ಲಿ ಬುಧವಾರ ಕುಸಿದಿದ್ದ 6 ಮಹಡಿಗಳ ಕಟ್ಟಡದ ಅವಶೇಷಗಳ ಅಡಿಯಿಂದ 3 ವರ್ಷದ ಮಗುವನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್​ಡಿಆರ್​ಎಫ್) ತಂಡ ಗುರುವಾರ ರಕ್ಷಿಸಿದೆ.

ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಮಗುವನ್ನು ಸುಮಾರು 15 ಗಂಟೆಗಳ ಬಳಿಕ ರಕ್ಷಿಸಲಾಗಿದೆ. ಮಗುವನ್ನು ತಂದೆಗೆ ಒಪ್ಪಿಸಲಾಯಿತು.
ಮಗು ಅವಶೇಷಗಳ ಅಡಿಯಲ್ಲಿ ನಿದ್ರಿಸುತ್ತಿತ್ತು. ಅದೃಷ್ಟವಶಾತ್‌ ಮಗುವಿಗೆ ಯಾವುದೇ ರೀತಿಯ ಗಾಯಗಳಾಗಿಲ್ಲ ಎಂದು ಎನ್​ಡಿಆರ್​ಎಫ್ ಅಧಿಕಾರಿಗಳು ತಿಳಿಸಿದ್ದಾರೆ.

ಅವಶೇಷಗಳ ಅಡಿಯಲ್ಲಿ ಗುರುವಾರ ಎರಡು ಶವ ಪತ್ತೆಯಾಗಿದ್ದು ಸಾವಿನ ಸಂಖ್ಯೆ 9ಕ್ಕೆ ಏರಿದೆ.

Comments are closed.