ರಾಷ್ಟ್ರೀಯ

ಬಜೆಟ್ 2017: 10 ಪ್ರಮುಖ ಅಂಶಗಳು

Pinterest LinkedIn Tumblr


ಬಹುನಿರೀಕ್ಷಿತ ಬಜೆಟ್- 2017 ನ್ನು ಅರುಣ್ ಜೇಟ್ಲಿ ತನ್ನ ಬಜೆಟನ್ನು ಈ 10 ಪ್ರಮುಖ ವಿಷಯಗಳಿಗೆ ಕೇಂದ್ರಿಕರಿಸಿದ್ದಾರೆ.
ನವದೆಹಲಿ (ಫೆ. 01): ಬಹುನಿರೀಕ್ಷಿತ ಬಜೆಟ್- 2017 ನ್ನು ಅರುಣ್ ಜೇಟ್ಲಿ ತನ್ನ ಬಜೆಟನ್ನು ಈ 10 ಪ್ರಮುಖ ವಿಷಯಗಳಿಗೆ ಕೇಂದ್ರಿಕರಿಸಿದ್ದಾರೆ.
01. ರೈತರಿಗೆ ಆದ್ಯತೆ – ಮುಂದಿನ 5 ವರ್ಷಗಳಲ್ಲಿ ರೈತರ ಆದಾಯವನ್ನು ದ್ವಿಗುಣಗೊಳಿಸಲು ನಾವು ಬದ್ಧರಾಗಿದ್ದೇವೆ.
02. ಗ್ರಾಮೀಣ ಪ್ರದೇಶದ ಜನರಿಗೆ ಉದ್ಯೋಗ, ಮೂಲಭೂತ ಸೌಲಭ್ಯ ಒದಗಿಸುವುದು.
03. ಶಿಕ್ಷಣ ಹಾಗೂ ಉದ್ಯೋಗ ನೀಡುವುದರ ಮೂಲಕ ಯುವಜನತೆಯ ಸಾಮರ್ಥ್ಯವನ್ನು ಬಲವರ್ಧನೆ ಮಾಡುವುದು.
04. ಬಡವರು, ಶೋಷಿತರಿಗೆ ಸಾಮಾಜಿಕ ಭದ್ರತೆ, ಆರೋಗ್ಯ, ಆಶ್ರಯವನ್ನು ನೀಡಿ ಬಲವರ್ಧಿಸುವುದು
05. ಜೀವನ ಮಟ್ಟ ಸುಧಾರಣೆಗೆ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸುವುದು.
06. ಆರ್ಥಿಕ ವಲಯದ ಬೆಳವಣಿಗೆ, ಸುಸ್ಥಿರ ಅಭಿವೃದ್ಧಿಗೆ ಶ್ರಮಿಸುವುದು.
07. ಡಿಜಿಟಲ್ ಆರ್ಥಿಕತೆ, ಆ ಮೂಲಕ ಹಣಕಾಸು ವ್ಯವಹಾರಗಳಲ್ಲಿ ಪಾರದರ್ಶಕತೆ ಹೆಚ್ಚಿಸುವುದು.
08. ಸಾರ್ವಜನಿಕ ಸೇವಾಕ್ಷೇತ್ರವನ್ನು ಜನರ ಭಾಗವಹಿಸುವಿಕೆ ಮೂಲಕ ಇನ್ನಷ್ಟು ಪರಿಣಾಮಕಾರಿಯಾಗಿಸುವುದು.
09. ಸೂಕ್ತ ರೀತಿಯಲ್ಲಿ ಸಂಪನ್ಮೂಲ ಬಳಸಿಕೊಂಡು ಪರಿಣಾಮಕಾರಿಯಾಗಿ ಆರ್ಥಿಕ ನಿರ್ವಹಣೆ ಸಾಧಿಸುವುದು
10. ಪರಿಣಾಮಕಾರಿ ತೆರಿಗೆ ನಿರ್ವಹಣೆ ಕ್ರಮಗಳು.

Comments are closed.