ಮೈಸೂರು (ಫೆ.01): ಕೇಂದ್ರದ ಬಜೆಟ್ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಬಜೆಟ್ ಮಂಡನೆಯಲ್ಲಿ ಯಾವುದೇ ನಿರ್ದಿಷ್ಟ ಪಾಲಿಸಿ ಇಲ್ಲ. ದೇಶದ ಅಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮಗಳು ಬಜೆಟ್ ನಲ್ಲಿ ಇಲ್ಲ. ನೋಟ್ ಬ್ಯಾನ್ ನಿಂದ ತೊಂದರೆಗೊಳಗಾದ ಜನಸಾಮಾನ್ಯರಿಗೆ ಸಹಾಯ ಮಾಡುವ ರೀತಿಯಲ್ಲಿರುತ್ತದೆ ಎಂಬ ನಂಬಿಕೆ ಇತ್ತು. ಆದರೆ ಬಹು ನಿರೀಕ್ಷಿತ ಬಜೆಟ್ ಜನರ ನಿರೀಕ್ಷೆ ಸುಳ್ಳು ಮಾಡಿದೆ.
ಆದಾಯ ಮಿತಿ ಕಳೆದ ಬಾರಿ ಇದ್ದಷ್ಟೇ ಈ ಬಾರಿಯೂ ಇದೆ. ಕೃಷಿಗೆ ಅಷ್ಟೇನೂ ಆದ್ಯತೆ ನೀಡಿಲ್ಲ. ಬರಗಾಲ ನಿರ್ವಹಣೆ ಬಗ್ಗೆ ಕೇಂದ್ರ ಸರ್ಕಾರ ಬಜೆಟ್ ನಲ್ಲಿ ಯಾವುದೇ ಯೋಜನೆ ಇಲ್ಲ. ಗುಜರಾತ್, ಮಹಾರಾಷ್ಟ್ರ,ತಮಿಳುನಾಡಿಗೆ ಹೋಲಿಸಿದರೆ ಬರದ ವಿಷಯದಲ್ಲಿ ನಮ್ಮ ರಾಜ್ಯಕ್ಕೆ ಅನ್ಯಾಯವಾಗಿದೆ. ಸಾಲ ಮನ್ನಾ ಬಗ್ಗೆ ಬಜೆಟ್ ನಲ್ಲಿ ಯಾವುದೇ ಯೋಜನೆ ಇಲ್ಲ. ನರೇಂದ್ರ ಮೋದಿ ಅಚ್ಚೆ ದಿನ್ ಆಗಯ ಅನ್ನುತ್ತಿದ್ದರು. ಆದರೆ ಅಚ್ಚೆ ದಿನ್ ನಯಿ ಆಗಯಾ ಎಂದು ಸಿಎಂ ಸಿಡಿದಿದ್ದಾರೆ.
ಕರ್ನಾಟಕ
Comments are closed.