ರಾಷ್ಟ್ರೀಯ

ಉತ್ತರ ಪ್ರದೇಶದಲ್ಲಿ ‘ಶೋಲೆ’ ರೂಪದಲ್ಲಿ ಚುನಾವಣಾ ಪ್ರಚಾರದ ಭಿತ್ತಿಪತ್ರಗಳು

Pinterest LinkedIn Tumblr


ಅಲಹಾಬಾದ್‌: ಉತ್ತರ ಪ್ರದೇಶ ಚುನಾವಣೆಗೆ ದಿನಗಣನೆ ಆರಂಭವಾದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ರಾಷ್ಟ್ರೀಯ ಉಪಾಧ್ಯಕ್ಷ ರಾಹುಲ್‌ ಗಾಂಧಿ ಮತ್ತು ಉ.ಪ್ರ. ಮುಖ್ಯಮಂತ್ರಿ ಅಖಿಲೇಶ್‌ ಯಾದವ್‌ 1970 ರ ಬಾಲಿವುಡ್‌ ಹಿಟ್‌ ಚಿತ್ರ ‘ಶೋಲೆ’ಯ ಪಾತ್ರಧಾರಿಗಳಾಗಿ ಬಿಂಬಿಸಿರುವ ಪೋಸ್ಟರ್‌ಗಳು ಪ್ರಚಾರದ ಭಾಗವಾಗಿ ಬಿಂಬಿಸಲಾಗುತ್ತಿವೆ.

ಚುನಾವಣಾ ಪೂರ್ವ ಮೈತ್ರಿಯಲ್ಲಿ ಕಾಂಗ್ರೆಸ್‌ ಮತ್ತು ಸಮಾಜವಾದಿ ಪಕ್ಷಗಳು ಒಟ್ಟಾಗಿವೆ. ಶೋಲೆ ಚಿತ್ರದ ಗೆಳೆಯರ ಪಾತ್ರದಲ್ಲಿ ಮಿಂಚಿದ್ದ ಅಮಿತಾಬ್‌ ಬಚ್ಚನ್‌ ಮತ್ತು ಧರ್ಮೇಂದ್ರ ಅವರ ಸ್ಥಾನದಲ್ಲಿ ರಾಹುಲ್‌ ಮತ್ತು ಅಖಿಲೇಶ್‌ ಬೈಕ್‌ ಮೇಲೆ ಸವಾರಿ ಹೊರಟಿರುವ ಭಿತ್ತಿಚಿತ್ರಗಳನ್ನು ಹೊರತರಲಾಗಿದೆ.

ಇದಲ್ಲದೆ, ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ, ಅಖಿಲೇಶ್‌ ಪತ್ನಿ ಡಿಂಪಲ್‌ ಯಾದವ್‌ ಮತ್ತು ಸಮಾಜವಾದಿ, ಕಾಂಗ್ರೆಸ್‌ ಪಕ್ಷದ ಇನ್ನಿತರ ಮುಖಂಡರ ಭಾವಚಿತ್ರಗಳು ಚಿತ್ರದಲ್ಲಿದೆ. ‘ಉತ್ತರ ಪ್ರದೇಶಕ್ಕೆ ಈ ಮೈತ್ರಿ ಇಷ್ಟ’ ಎಂಬ ತಲೆ ಬರಹವೂ ಹೊಂದಿದೆ.

403 ಸ್ಥಾನಗಳ ಬೃಹತ್‌ ವಿಧಾನಸಭೆಯಲ್ಲಿ ಬಹುಮತ ಪಡೆಯಲು ಎಲ್ಲ ಪಕ್ಷಗಳು ಪ್ರಣಾಳಿಕೆ ಬಿಡುಗಡೆಗೊಳಿಸಿ ಚುರುಕಿನ ಪ್ರಚಾರ ನಡೆಸಿವೆ. ಸಮಾಜವಾದಿ ಪಕ್ಷವು ಕಾಂಗ್ರೆಸ್‌ ಜತೆ ಮೈತ್ರಿ ಮಾಡಿಕೊಂಡು ರಾಜ್ಯದಲ್ಲಿರುವ 18% ಮುಸ್ಲಿಂ ಮತಗಳ ಮೇಲೆ ಕಣ್ಣಿಟ್ಟಿದೆ.

Comments are closed.