ರಾಷ್ಟ್ರೀಯ

ಐಡಿಯಾ -ವೊಡಾಫೋನ್ ವಿಲೀನ?

Pinterest LinkedIn Tumblr


ನವದೆಹಲಿ: ಟೆಲಿಕಾಂ ಕ್ಷೇತ್ರದಲ್ಲಿ ದಿಗ್ಗಜರಾದ ವೊಡಾಫೋನ್ ಕಂಪನಿ ಭಾರತದ ಐಡಿಯಾ ಕಂಪನಿ ಜತೆ ವಿಲೀನವಾಗಲು ತೀರ್ಮಾನಿಸಿದ್ದು, ಇದಕ್ಕಾಗಿ ಉಭಯ ಕಂಪನಿಗಳು ಮಾತುಕತೆ ನಡೆಸಿವೆ.

ಐಡಿಯಾ ಕಂಪನಿ ಜತೆಗೆ ವಿಲೀನವಾಗುವುದಕ್ಕಾಗಿ ಆದಿತ್ಯ ಬಿರ್ಲಾ ಗ್ರೂಪ್ ಜತೆ ಚರ್ಚೆ ನಡೆಸುತ್ತಿದ್ದೇವೆ ಎಂದು ವೊಡಾಫೋನ್ ಸಂಸ್ಥೆ ಹೇಳಿದೆ.

ವೊಡಾಫೋನ್ – ಐಡಿಯಾ ವಿಲೀನವಾದರೆ, ಗ್ರಾಹಕರ ಸಂಖ್ಯೆ 39 ಕೋಟಿಯಾಗಲಿದೆ. ಈಗಾಗಲೇ ಏರ್‍‍ಟೆಲ್ ಕಂಪನಿಗೆ 27 ಕೋಟಿ ಗ್ರಾಹಕರಿದ್ದು, ಐಡಿಯಾ ವೊಡಾಫೋನ್ ಜತೆಯಾದರೆ ಏರ್‍‍ಟೆಲ್ ಕಂಪನಿಯನ್ನು ಹಿಂದಿಕ್ಕಬಹುದಾಗಿದೆ.

ಕಳೆದ ಆರು ತಿಂಗಳಿನಿಂದ ಉಚಿತ ಸೌಲಭ್ಯಗಳನ್ನು ಒದಗಿಸಿ ಗ್ರಾಹಕರನ್ನು ತನ್ನೆಡೆಗೆ ಸೆಳೆದುಕೊಂಡಿದ್ದ ರಿಲಾಯನ್ಸ್ ಜಿಯೊಗೆ ಐಡಿಯಾ-ವೊಡಾಫೋನ್ ಮೈತ್ರಿ ಹೊಡೆತ ನೀಡಲಿದೆ. ಪ್ರಸ್ತುತ ಜಿಯೋಗೆ 7.2 ಕೋಟಿ ಗ್ರಾಹಕರಿದ್ದಾರೆ.

ದೇಶದಲ್ಲಿ ಅತೀ ಹೆಚ್ಚು ಗ್ರಾಹಕರಿರುವ ಏರ್‍‍ಟೆಲ್ ಕಂಪನಿಗೆ ಷೇರು ಮಾರುಕಟ್ಟೆಯಲ್ಲಿ ಶೇ.24 ಷೇರುಗಳಿವೆ.

19 ಶೇ. ಷೇರು ಹೊಂದಿರುವ ವೊಡಾಫೋನ್ ಮತ್ತು ಶೇ.17 ಷೇರು ಹೊಂದಿರುವ ಐಡಿಯಾ ವಿಲೀನವಾದರೆ, ಈ ಕಂಪನಿ ದೇಶದ ಅತೀ ದೊಡ್ಡ ಟೆಲಿಕಾಂ ಶಕ್ತಿಯಾಗಿ ಹೊರಹೊಮ್ಮಲಿದೆ.

ಟೆಲಿಕಾಂ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ಪೈಪೋಟಿಯಿಂದಾಗಿ ಏಕಾಂಗಿ ಹೋರಾಟ ಮಾಡುವುದು ವೊಡಾಫೋನ್‍ ಕಂಪನಿಗೆ ಕಷ್ಟವಾಗಿತ್ತು. ಹಾಗಾಗಿ ಐಡಿಯಾ ಜತೆ ವಿಲೀನಗೊಳ್ಳುವ ತೀರ್ಮಾನಕ್ಕೆ ಈ ಕಂಪನಿ ಮುಂದಾಗಿತ್ತು.

ಷೇರು ಮಾರುಕಟ್ಟೆಯಲ್ಲಿ ಏರಿಕೆ
ವೊಡಾಫೋನ್‍ ಟೆಲಿಕಾಂ ಸೇವೆ ಐಡಿಯಾ ಜತೆ ವಿಲೀನವಾಗುತ್ತಿದೆ ಎಂಬ ಸುದ್ದಿ ಹರಡುತ್ತಿದ್ದಂತೆ ಷೇರು ಮಾರುಕಟ್ಟೆಯಲ್ಲಿ ಐಡಿಯಾದ ಷೇರು ಮೌಲ್ಯ ಶೇ.27 ಏರಿಕೆಯಾಗಿದೆ.

ಟ್ವೀಟ್ ಪ್ರತಿಕ್ರಿಯೆ

ಐಡಿಯಾ ಅಂದರೆ Birla+AT&T+Tata (ಅಂದರೆ ಬಟಾಟ). ವೊಡಾಫೋನ್‍ ಜತೆ ವಿಲೀನವಾದರೆ ಬಟಾಟ ವಡಾ

Idea was originally Birla+AT&T+Tata (Then known as Batata)

Follow
Yatin Mota @YatinMota
Idea was originally Birla+AT&T+Tata (Then known as Batata)
Now if there is a merger with Vodafone it should be called – “Batata Voda”
2:13 PM – 30 Jan 2017
265 265 Retweets 299 299 likes
ಐಡಿಯಾ ಮತ್ತು ವೊಡಾಫೋನ್ ವಿಲೀನ ಬಗ್ಗೆ ಸುದ್ದಿ ಕೇಳಿ ಬಂದಿದೆ, ಇನ್ನು ಮುಂದೆ ಜಾಹೀರಾತಿನಲ್ಲಿ ನಾಯಿ ಜತೆ ಅಭಿಷೇಕ್ ಬಚ್ಚನ್ ಕಾಣಿಸಿಕೊಳ್ಳಬಹುದು.

Idea and Vodafone are in talks for a merger. Which means, we will see Abhishek Bachchan with a dog in the next ad.

Follow
Sagar @sagarcasm
Idea and Vodafone are in talks for a merger. Which means, we will see Abhishek Bachchan with a dog in the next ad.
1:58 PM – 30 Jan 2017
155 155 Retweets 327 327 likes

Comments are closed.