
ಗೋರಖ್ಪುರ: ಯುವತಿಯೊಬ್ಬಳಿಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದದ್ದಕ್ಕೆ ಆಕೆಯ ಸಹೋದರರು ಆತನ ಕೈ ಕತ್ತರಿಸಿ ಹಾಕಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಗೋರಖ್ಪುರದ ಸಿಂಧುಲಿ ಬಿಂದುಲಿ ಗ್ರಾಮದಲ್ಲಿ ಮೂವರು ಸಹೋದರರಾದ ಉಮೇಶ್, ಕಮಲೇಶ್ ಹಾಗೂ ಮಿತಿಲೇಶ್ ತಮ್ಮ ವಿವಾಹಿತ ಸಹೋದರಿಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದ ರಾಜ್ಮನ್ ಎಂಬಾತನ ಕೈಯನ್ನೇ ಕತ್ತರಿಸಿ ಹಾಕಿದ್ದಾರೆ.
ರಾಜ್ಮನ್ ಈ ಹಿಂದೆಯೂ ಯುವತಿಗೆ ಕಿರುಕುಳ ನೀಡಿದ ಆರೋಪದಲ್ಲಿ ಜೈಲು ಸೇರಿದ್ದ. ಆದರೆ ಆಕೆ ಮದುವೆಯಾದ ಬಳಿಕವೂ ಫೋನ್ ಮಾಡಿ ಕಿರುಕುಳ ನೀಡುತ್ತಿದ್ದ ಎಂದು ವರದಿಯಾಗಿದೆ.
ಈ ಸಹೋದರರು ರಾಜ್ಮನ್ ಮೇಲೆ ಸೇಡು ತೀರಿಸಿಕೊಳ್ಳಲು ಅವಕಾಶಕ್ಕಾಗಿ ಕಾಯುತ್ತಿದ್ದರು. ಜೈಲಿನಿಂದ ಆತ ಬಿಡುಗಡೆಯಾದಾಗಲೂ ಮೂವರು ಸಹೋದರರು ಹಾಗೂ ಆತನ ನಡುವೆ ಜಗಳವಾಗಿತ್ತು ಎಂದು ಪೊಲೀಸ್ ಅಧಿಕಾರಿ ಅಭಯ್ ಮಿಶ್ರಾ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ.
ಯುವತಿಗೆ ಕಿರುಕುಳ ನೀಡುತ್ತಿದ್ದ ರಾಜ್ಮನ್ ಸೋಮವಾರ ಇಲ್ಲಿನ ನದಿಯೊಂದರ ಬದಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಬೈಕ್ನಲ್ಲಿ ಬಂದ ಯುವತಿಯ ಮೂವರು ಸಹೋದರರು ರಾಜ್ಮನ್ ಮೇಲೆ ದಾಳಿ ಮಾಡಿದ್ದರು. ಆತನ ಕೈಯನ್ನು ಕತ್ತರಿಸಿ ತಮ್ಮ ಬಳಿಯೇ ಇಟ್ಟುಕೊಂಡು, ರಕ್ತಸ್ರಾವವಾಗುತ್ತಿದ್ದ ರಾಜ್ಮಾನ್ ನನ್ನು ಅಲ್ಲೆ ಬಿಟ್ಟು ಹೋದರು.
ಸದ್ಯ ಪೊಲೀಸರು ಈ ಬಗ್ಗೆ ಎಫ್ಐಆರ್ ದಾಖಲಿಸಿಕೊಂಡಿದ್ದು, ತಲೆಮರೆಸಿಕೊಂಡಿರೋ ಮೂವರು ಸಹೋದರರ ಪತ್ತೆಗೆ ಬಲೆ ಬೀಸಿದ್ದಾರೆ.
Comments are closed.