ಕರಾವಳಿ

ಕೊಲೆಯಾದವ ಮಾಡಿದ ಇನ್ನೊಂದು ಕೊಲೆ; ಪ್ರವೀಣ್ ಕುಲಾಲ್ ಮರ್ಡರ್ ಬಗೆಗಿನ ರೋಚಕ ಕಥೆಯಿದು…

Pinterest LinkedIn Tumblr

ಉಡುಪಿ: ಉಡುಪಿ ಪೊಲೀಸರು ಅಪರೂಪದ ಕೊಲೆ ಪ್ರಕರಣವೊಂದನ್ನ ಬೇಧಿಸಿದ್ದಾರೆ. ಪ್ರಕರಣ ಬೇಧಿಸಲು ಹೊರಟ ಪೊಲೀಸರಿಗೆ ಕೊಲೆಯಾದವ ಮಾಡಿದ ಇನ್ನೊಂದು ಕೊಲೆ ಪತ್ತೆಯಾಗಿದೆ. ಎರಡೂ ಪ್ರಕರಣಗಳ ಆರೋಪಿಗಳು ಇದೀಗ ಅಂದರ್ ಆಗಿದ್ದಾರೆ. ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಸ್ಟೋರಿಯ ವಿವರ..

ಕೊಲೆಯಾಗುವ ಮುನ್ನ ಕೊಲೆ:

ಡಿ.19ರ ಮಟಮಟ ಮದ್ಯಾಹ್ನ. ರೌಡಿ ಶೀಟರ್ ಪ್ರವೀಣ್ ಕುಲಾಲ್ ರಕ್ತದ ಮಡುವಿನಲ್ಲಿ ಮರ್ಡರ್ ಆಗಿ ಹೋಗಿದ್ದ. ಉಡುಪಿ ಜಿಲ್ಲೆಯಲ್ಲಿ ತನ್ನ ಪಾತಕ ಲೋಕದ ಇತಿಹಾಸ ಬರೆಯಲು ಹೋಗಿದ್ದ ಪ್ರವೀಣ್ ತಾನೇ ಇತಿಹಾಸದ ಪುಟ ಸೇರಿದ್ದ. ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ದಿಯಾ ಬಾರ್ ಎದುರುಗಡೇ ಕೊಲೆಗೀಡಾಗಿದ್ದ ರೌಡಿ ಪ್ರವೀಣ್ ಕುಲಾಲ್ ತಾನು ಕೊಲೆಯಾಗುವ 2 ವಾರಗಳ ಹಿಂದೆಯೇ ಒಬ್ಬನನ್ನು ಕೊಲೆ ಮಾಡಿದ್ದ ಆದ್ರೆ ಆತ ಮಾಡಿರುವ ಕೊಲೆ ಯಾರಿಗೂ ಗೊತ್ತಾಗಿರಲಿಲ್ಲ. ಪ್ರವೀಣ್ ಕುಲಾಲ್ ಕೊಲೆ ಆದ ನಂತ್ರ ಈ ಕೇಸ್ ಮುಚ್ಚಿ ಹೋಗ್ತಿತ್ತು. ಆದ್ರೆ ಪೊಲೀಸ್ರು ಮಾತ್ರ ತಮ್ಮ ಚಾಣಾಕ್ಷತೆಯನ್ನು ಮೆರೆದು ಮತ್ತೊಂದು ಕೊಲೆಯ ಜಾಡು ಹಿಡಿದರು. ಪ್ರವೀಣ್ ಆಂಡ್ ಗ್ಯಾಂಗ್ ಕೈಯಲ್ಲಿ ಹತ್ಯೆಗೀಡಾದವನೇ ಸಂತೋಷ್ ನಾಯಕ್..ಸಂತೋಷ್ ನಾಯಕ್ ಪರ್ಕಳದ ಸಣ್ಣಕ್ಕಿಬೆಟ್ಟು ನಿವಾಸಿ. ಡಿ.2ರಂದು ಸಂತೋಷ್ ನಾಯಕ್ ನನ್ನು ಪ್ರವೀಣ್ ಕುಲಾಲ್ ಕೊಲೆ ಮಾಡಿ ಶವವನ್ನು ತುಂಡು ತುಂಡು ಮಾಡಿ ಬಾವಿಗೆ ಎಸೆದಿದ್ದ..

ಅಂದ ಹಾಗೆ ಸಂತೋಷ್ ನಾಯಕ್ ಹತ್ಯೆಯಾಗಲು ಕಾರಣ ಅಂದ್ರೆ ಹಣದ ವ್ಯವಹಾರ. ಸಂತೋಷ್ ನಾಯಕ್ ಪಕ್ಕ 420 ಮನುಷ್ಯ. ಜಾಗದ ವ್ಯವಹಾರ ಸೇರಿದಂತೆ ಅನೇಕ ವ್ಯವಹಾರಗಳಲ್ಲಿ ಅನೇಕರಿಗೆ ಹಣ ಕೊಡಲು ಬಾಕಿ ಇರುತ್ತದೆ. ಆದ್ದರಿಂದಲೇ ಉದ್ಯಮಿಗಳಾದ ನಿತ್ಯಾನಂದ ನಾಯಕ್, ಜಯಂತ್ ಪೈ ಹಾಗೂ ವಿಲ್ಫ್ರೆಡ್ ಯಾನೆ ವಿನ್ನು ಎಂಬುವವರು ತಮ್ಮ ಹಣವನ್ನು ವಸೂಲು ಮಾಡುವಂತೆ ಪ್ರವೀಣ್ ಕುಲಾಲ್ ಗೆ ಸುಪಾರಿ ನೀಡುತ್ತಾರೆ. ಈ ಹಿನ್ನಲೆಯಲ್ಲಿ ಡಿ.2ರಂದು ಸಂತೋಷ್ ನಾಯಕ್ ನನ್ನು ಕಿಡ್ನಾಪ್ ಮಾಡುವ ಪ್ರವೀಣ್ ಕುಲಾಲ್ ಆಂಡ್ ಗ್ಯಾಂಗ್ ವರ್ವಾಡಿಗೆ ತಂದು ಅಜ್ಞಾತ ಸ್ಥಳದಲ್ಲಿ ಸಂತೋಷ್ ಗೆ ಕಿರುಕುಳ ನೀಡುತ್ತಾರೆ.ಅಲ್ಲದೇ ಹೊಡೆದು ಸಾಯಿಸುತ್ತಾರೆ. ಅಲ್ಲದೇ ಆತನ ದೇಹವನ್ನು ತುಂಡು ಮಾಡಿ ಬಾವಿಗೆ ಎಸೆಯುತ್ತಾರೆ. ಸ್ಥಳದಲ್ಲಿ ರಕ್ತದ ಕಳೆಗಳಿರುವ ಕಾರಣ ಪೊಲೀಸರ ಹಾದಿ ತಪ್ಪಿಸಲು ಪ್ರವೀಣ್ ಆಂಡ್ ಗ್ಯಾಂಗ್ ದನವನ್ನು ಸಾಯಿಸಿ ಕಟ್ಟಿಗೆಯಲ್ಲಿ ಸುಟ್ಟು ಹಾಕ್ತಾರೆ. ಇದಾದ ನಂತ್ರ ಸಂತೋಷ್ ನಾಯಕ್ ಮನೆಗೆ ಬಂದು ಹಣ ಇರುವ ಬಗ್ಗೆ ತಪಾಸಣೆ ಮಾಡಿತ್ತಾರೆ. ಮಾತ್ರವಲ್ಲದೇ ಮನೆ ಮಂದಿಗೆ ಬೆದರಿಕೆ ಹಾಕುತ್ತಾನೆ. ಪ್ರವೀಣ್ ಕುಲಾಲ್ ತನಗೆ ಏನು ಮಾಡುತ್ತಾನೋ ಎಂಬ ಭಯದಿಂದ ಮನೆಯವರು ಪೊಲೀಸರಿಗೆ ದೂರು ನೀಡದೇ ಸುಮ್ಮನಾಗುತ್ತಾರೆ.

ಯಾವಾಗ ಸಂತೋಷ್ ನಾಯಕ್ ನನ್ನು ಹತ್ಯೆ ಮಾಡಿದ ಪ್ರವೀಣ್ ಕುಲಾಲ್ ನನ್ನು ಕೊಲೆ ಮಾಡುತ್ತಾರೋ ಆಗ ಮನೆಯವರು ಸಂತೋಷ್ ನಾಯಕ್ ಬಗ್ಗೆ ಮಿಸ್ಸಿಂಗ್ ಕಂಪ್ಲೇಂಟ್ ದಾಖಲಿಸುತ್ತಾರೆ. ಇದರ ಜಾಡು ಹಿಡಿದ ಪೊಲೀಸರಿಗೆ ಈ ಅಪರೂಪದ ಪ್ರಕರಣ ಬೆಳಕಿಗೆ ಬರುತ್ತದೆ. ಈ ಪ್ರಕರಣ ಆರೋಪಿ ಉದ್ಯಮಿಗಳಾದ ಜಯಂತ್ ಪೈ, ವಿನ್ನು ಸಹಿತ ೮ ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Comments are closed.