ರಾಷ್ಟ್ರೀಯ

ಮೋದಿ ವಿರುದ್ಧ ಮತ್ತೆ ಗುಡುಗಿದ ಮನಮೋಹನ್ ಸಿಂಗ್ ! ಏನು ಹೇಳಿದ್ದಾರೆ ನೋಡಿ…

Pinterest LinkedIn Tumblr

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ನೋಟು ಹಿಂಪಡೆತ ನಿರ್ಧಾರದ ಮೇಲೆ ಮತ್ತೆ ವಾಗ್ದಾಳಿ ನಡೆಸಿರುವ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಆರ್ಥಿಕ ವ್ಯವಸ್ಥೆ ಈಗಾಗಲೇ ಕೆಟ್ಟ ಪರಿಣಾಮ ಎದುರಿಸುತ್ತಿದೆ, ‘ಇನ್ನು ಹೆಚ್ಚಿನ ದುಷ್ಪರಿಣಾಮ ಬಾಕಿಯಿದೆ’ ಎಂದಿದ್ದಾರೆ.

ಕಾಂಗ್ರೆಸ್ ಆಯೋಜಿಸಿದ್ದ ಜನ ವೇದನೆ ಸಮ್ಮೇಳನದಲ್ಲಿ ಮಾತನಾಡಿದ ಮನಮೋಹನ್ ಸಿಂಗ್, ಮೋದಿ ಮಾಡುತ್ತಿರುವ ತಪ್ಪುಗಳನ್ನು ಜನರಿಗೆ ತಿಳಿಸುವುದು ನನ್ನ ಗಂಭೀರವಾದ ಕರ್ತವ್ಯ ಎಂದಿದ್ದಾರೆ.

“ನೋಟು ಹಿಂಪಡೆತ ನಿರ್ಧಾರ ದೇಶಕ್ಕೆ ದೊಡ್ಡ ಹೊಡೆತ ನೀಡಿದೆ. ಕಳೆದ ಎರಡು ತಿಂಗಳಲ್ಲಿ ಕೆಟ್ಟ ಪರಿಣಾಮಗಳನ್ನು ದೇಶ ಎದುರಿಸಿದೆ, ಇನ್ನು ಕೆಟ್ಟದ್ದು ಬರುವುದಿದೆ” ಎಂದು ಅವರು ಹೇಳಿದ್ದಾರೆ.

“ಅಂತ್ಯದ ಪ್ರಾರಂಭ ಈಗ ಬಂದಿದೆ” ಎದಿರುವ ಸಿಂಗ್ “ತಪ್ಪು ಅಂಕೆಸಂಖ್ಯೆಗಳನ್ನು ಮುಂದು ಮಾಡಿ ಪ್ರಚಾರ ಮಾಡುತ್ತಿರುವ ಮೋದಿ ಅವರ ಯೋಜನೆ ತಾಳ ತಪ್ಪಿದೆ” ಎಂದಿದ್ದಾರೆ.

“ಕಳೆದ ಎರಡು ವರ್ಷಗಳಲ್ಲಿ ಭಾರತದ ರಾಷ್ಟ್ರೀಯ ವೇತನ ಹೆಚ್ಚಿದೆ ಎಂಬ ಪ್ರಚಾರ, ಸುಳ್ಳಾಗಿದೆ.. ದೇಶದ ಅಭಿವೃದ್ಧಿ ಕೆಲವೇ ತಿಂಗಳುಗಳಲ್ಲಿ ೭.೬೫ ನಿಂದ ೭% ಕುಸಿದು, ಜಿಡಿಪಿ ಕೂಡ ತೀವ್ರ ಕುಸಿತ ಕಂಡಿದೆ” ಎಂದು ಸಿಂಗ್ ಹೇಳಿದ್ದಾರೆ.

Comments are closed.