ರಾಷ್ಟ್ರೀಯ

950 ಮಿಲಿಯನ್ ಭಾರತೀಯರು ನೆಟ್ ಸಂಪರ್ಕ ಹೊಂದಿಲ್ಲ!

Pinterest LinkedIn Tumblr

Internet_Speed_More
ನವದೆಹಲಿ: ಭಾರತದಲ್ಲಿ ಮೊಬೈಲ್ ಡೇಟಾ ಪ್ಲಾನ್ ಹಾಗೂ ಸ್ಮಾರ್ಟ್ ಫೋನ್ ಗಳ ದರ ಗಣನೀಯವಾಗಿ ಇಳಿಕೆಯಾಗುತ್ತಿದ್ದರೂ ಭಾರತದಲ್ಲಿ ಇಂದಿಗೂ 950 ಮಿಲಿಯನ್ ಭಾರತೀಯರು ಇಂಟರ್ ನೆಟ್ ಸಂಪರ್ಕ ಹೊಂದಿಲ್ಲ ಎಂದು ಅಧ್ಯಯನ ವರದಿಯೊಂದರ ಮೂಲಕ ತಿಳಿದುಬಂದಿದೆ.
ಇಂಟರ್ ನೆಟ್ ಸಂಪರ್ಕ ಹೊಂದುತ್ತಿರುವವರ ಸಂಖ್ಯೆ ಭಾರತದಲ್ಲಿ ಹೆಚ್ಚುತ್ತಿದ್ದು, ಡಿಜಿಟಲ್ ಸಾಕ್ಷರತೆಯನ್ನು ಹೆಚ್ಚಿಸಲು ಕೈಗೆಟುಕುವ ದರದಲ್ಲಿ ಬ್ರಾಡ್ ಬ್ಯಾಂಡ್, ಸ್ಮಾರ್ಟ್ ಸಾಧನಗಳು ಹಾಗೂ ತಿಂಗಳ ಡೇಟಾ ಪ್ಯಾಕೇಜ್ ಗಳ ಅಗತ್ಯವಿದೆ ಎಂದು ಅಸ್ಸೋಚಾಮ್-ಡಿಯೋಲಾಯ್ಟ್ ಸಂಸ್ಥೆ ನಡೆಸಿರುವ ಅಧ್ಯಯನ ವರದಿ ತಿಳಿಸಿದೆ.
ಗ್ರಾಮೀಣ ಪ್ರದೇಶಗಳಿಗೂ ಇಂಟರ್ ನೆಟ್ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ತನ್ನ ಮೂಲಸೌಕರ್ಯ ಬಳಕೆಯನ್ನು ಮತ್ತಷ್ಟು ಹೆಚ್ಚಿಸಬೇಕು. ಸ್ಕಿಲ್ ಇಂಡಿಯಾದ ಅಡಿಯಲ್ಲಿ ತರಬೇತಿ ಪಡೆದಿರುವವರಿಂದ ಶಾಲೆಗಳಲ್ಲಿ ಸಾಂಸ್ಥಿಕ ತರಬೇತಿಯನ್ನು ನೀಡುವ ಮೂಲಕ ಡಿಜಿಟಲ್ ಸಾಕ್ಷರತೆ ಹೆಚ್ಚುವಂತೆ ಮಾಡಬೇಕಿದೆ ಎಂದು ಅಸೋಚಾಮ್- ಡಿಯೋಲಾಯ್ಟ್ ಅಭಿಪ್ರಾಯಪಟ್ಟಿದೆ.
ಡಿಜಿಟಲ್ ಇಂಡಿಯಾ ಹಾಗೂ ಸ್ಕಿಲ್ ಇಂಡಿಯಾವನ್ನು ಬೆಸೆಯುವಂತಹ ಯೋಜನೆಗಳನ್ನು ತರಬೇತಿಗಳನ್ನು ಹಮ್ಮಿಕೊಳ್ಳಬೇಕು, ತಂತ್ರಜ್ಞಾನದ ಬಳಕೆ ಹಾಗೂ ಅಧ್ಯಯನದ ಬಗ್ಗೆ ಭಾರತ ಸರ್ಕಾರ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಅಸೋಚಾಮ್-ಡಿಯೋಲಾಯ್ಟ್ ಸಂಸ್ಥೆಯ ಅಧ್ಯಯನ ವರದಿ ಸರ್ಕಾರಕ್ಕೆ ಸಲಹೆ ನೀಡಿದೆ.

Comments are closed.