ರಾಷ್ಟ್ರೀಯ

ಇಂದು ಪೇಟಿಎಂಗೆ ಪೈಪೋಟಿ ನೀಡುವ ಆಧಾರ್ ಪೇಮೆಂಟ್ ಆ್ಯಪ್ ಬಿಡುಗಡೆ

Pinterest LinkedIn Tumblr

aadhar-cards
ನವದೆಹಲಿ: ಕೇಂದ್ರ ಸರ್ಕಾರದ ಬಹು ಆಕಾಂಕ್ಷಿತ ಡಿಜಿಟಲ್ ಇಂಡಿಯಾದ ಭಾಗವಾದ ಆಧಾರ್ ಪೇಮೆಂಟ್ ಅಪ್ಲಿಕ್ಷೇನ್ಅನ್ನು ಡಿಸೆಂಬರ್ 25ರಂದು ಬಿಡುಗಡೆ ಮಾಡಲು ನಿರ್ಧರಿಸಿದೆ. ಡೆಬಿಟ್/ಕ್ರೆಡಿಟ್ ಕಾರ್ಡ್ಗಳಿಗೆ ಬದಲಾಗಿ ಅತ್ಯಂತ ಸುಲಭವಾಗಿ ನೂತನ ಆ್ಯಪ್ ಬಳಸಬಹುದಾಗಿದ್ದು, ನಗದು ರಹಿತ ವ್ಯವಹಾರ ಸುಗಮಗೊಳ್ಳಲಿದೆ. ಪ್ರಸ್ತುತ ಚಾಲ್ತಿಯಲ್ಲಿರುವ ಪೇಟಿಎಂ ಸಮನಾಗಿ ಆಧಾರ್ ಪೇಮೆಂಟ್ ಆ್ಯಪ್ ಬಳಕೆಗೆ ಬರಲಿದೆ.

ಆ್ಯಂಡ್ರಾಯ್ಡ್ ಫೋನ್ ಮೂಲಕ ಸುಲಭವಾಗಿ ನೂತನ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ಜನಸಾಮಾನ್ಯರಿಗೆ ಸುಲಭವಾಗಿ ವ್ಯವಹಾರ ನಡೆಸಲು ಅನುಕೂಲವಾಗುವ ರೀತಿಯಲ್ಲಿ ಆ್ಯಪ್ಅನ್ನು ಅಭಿವೃದ್ಧಿ ಪಡಿಸಲಾಗಿದೆ. ಯುಎಡಿಎಐ, ಭಾರತದ ರಾಷ್ಟ್ರೀಯ ಪಾವತಿ ಸಹಕಾರ ಸಂಘ ಮತ್ತು ಐಡಿಎಫ್ಸಿ ಬ್ಯಾಂಕ್ ಜತೆಯಾಗಿ ನೂತನ ಆ್ಯಪ್ ಅಭಿವೃದ್ಧಿ ಪಡಿಸಿವೆ.

Comments are closed.