ರಾಷ್ಟ್ರೀಯ

ನೋಟು ಬದಲಾವಣೆ ಜಾಲದಿಂದ 19.7 ಲಕ್ಷ ನಗದು ವಶ

Pinterest LinkedIn Tumblr

note
ತೆಲಂಗಾಣ: ಇಲ್ಲಿನ ನಲಗೊಂಡ ಪ್ರದೇಶದಲ್ಲಿ ಸಕ್ರಿಯವಾಗಿದ್ದ ನೋಟು ಬದಲಾವಣೆ ಜಾಲವನ್ನು ಪತ್ತೆ ಹಚ್ಚಿರುವ (ತೆಲಂಗಾಣ)ಪೊಲೀಸರು 19.7 ಲಕ್ಷ ನಗದನ್ನು ವಶಕ್ಕೆ ಪಡೆದಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಮಾರ್ಕೆಟಿಂಗ್‌ ಎಕ್ಸಿಕ್ಯೂಟಿವ್‌ ಮತ್ತು ಓರ್ವ ವಿದ್ಯಾರ್ಥಿ ಸೇರಿದಂತೆ ಒಟ್ಟು ಮೂವರನ್ನು ಬಂಧಿಸಲಾಗಿದೆ. ದಾಳಿ ವೇಳೆ ವಶಕ್ಕೆ ಪಡೆದಿರುವ ಹಣವನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ನೋಟು ರದ್ದು ಕ್ರಮದ ಬಳಿಕ ಆದಾಯ ತೆರಿಗೆ ಇಲಾಖೆ ಹಾಗೂ ಪೊಲೀಸ್‌ ಇಲಾಖೆಯ ಅಧಿಕಾರಿಗಳು ದೇಶದಾದ್ಯಂತ ನಕಲಿ ನೋಟು ಜಾಲ ಮತ್ತು ಅಕ್ರಮ ಹಣ ಪತ್ತೆಗಾಗಿ ಬಲೆ ಬೀಸಿದ್ದಾರೆ.

**
ಬಂಧನ: ಕೇರಳದಲ್ಲಿ ಅಕ್ರಮ ಹಣ ಬದಲಾವಣೆ
ಮಲಪ್ಪುರಂ: ಮತ್ತೊಂದು ಪ್ರಕರಣದಲ್ಲಿ ಕೇರಳದ ಮಲಪ್ಪುರಂ ಜಿಲ್ಲೆಯ ತಿರೂರು ಸಮೀಪ ಅಕ್ರಮ ಹಣ ಬದಲಾವಣೆ ಜಾಲ ದೊಂದಿಗೆ ಸಂಪರ್ಕ ಹೊಂದಿರುವ ವ್ಯಕ್ತಿಯನ್ನು ಬಂಧಿಸಿರುವ ಪೊಲೀಸರು ₹39.98ಲಕ್ಷ ಮೌಲ್ಯದ ₹2000 ರೂಪಾಯಿಯ ಹೊಸ ನೋಟುಗಳನ್ನು ವಶಕ್ಕೆ ಪಡೆದಿದ್ದಾರೆ.
ತಿರೂರ್‌ ಬಸ್‌ ನಿಲ್ದಾಣದಲ್ಲಿ ಸಿಕ್ಕಿ ಬಿದ್ದಿರುವ 63ವರ್ಷದ ಶೌಕತ್‌ ಅಲಿ ಎಂಬಾತನಿಂದ ₹3ಲಕ್ಷ ಹಣ ವಶಕ್ಕೆ ಪಡೆದು ಉದ್ಯಮಿ ಶಬೀರ್‌ ಬಾಬು ಎಂಬುವವರ ನಿವಾಸದ ಮೇಲೆ ದಾಳಿ ನಡೆಸಿದ ಪೊಲೀಸರು ಸ್ಥಳದಲ್ಲಿ ₹36.98ಲಕ್ಷ ಹಣವನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿ ಶೌಕತ್‌ ಅಲಿ ಪಾಲಕ್ಕಾಡ್‌ ಜಿಲ್ಲೆಯವನಾಗಿದ್ದು ಈತನನ್ನು ಆರು ತಿಂಗಳ ಹಿಂದೆ ಅವ್ಯವಹಾರದ ಆರೋಪದಲ್ಲಿ ಬಂಧಿಸಲಾಗಿತ್ತು. ಆದರೆ, ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ತಲೆ ಮರೆಸಿಕೊಂಡಿರುವ ಉದ್ಯಮಿ ಶಬೀರ್‌ ಬಾಬುವಿಗಾಗಿ ಹುಡುಕಾಟ ಆರಂಭಿಸಿದ್ದು, ಈತ ಶೌಕತ್‌ ಅಲಿಗೆ ₹3 ಲಕ್ಷ ಹಣ ನೀಡಿ ತನ್ನಲ್ಲಿರುವ ಅಪಾರ ಮೊತ್ತದ ₹500 ಹಾಗೂ ₹1000ದ ಹಳೆ ನೋಟುಗಳನ್ನು ಬದಲಾಯಿಸಿ ಕೊಡಲು ಬೇಡಿಕೆ ಇಟ್ಟಿದ್ದ. ಮತ್ತು ಇನ್ನಿತರ ಒಂಬತ್ತು ಮಂದಿಯನ್ನು ಈ ಕಾರ್ಯಕ್ಕಾಗಿ ಸಂಪರ್ಕಿಸಿದ್ದ ಎಂದು ಪೊಲೀಸ್‌ ಮೂಲಗಳು ಮಾಹಿತಿ ನೀಡಿವೆ.

Comments are closed.