ರಾಷ್ಟ್ರೀಯ

ನೋಟು ನಿಷೇ;: ಈ ವರ್ಷದ ಅತಿ ದೊಡ್ಡ ಹಗರಣ: ಚಿದಂಬರಂ

Pinterest LinkedIn Tumblr

chidambaramನವದೆಹಲಿ: ಕೇಂದ್ರ ಸರ್ಕಾರದ ಅನಾಣ್ಯೀಕರಣ ನಡೆ ವರ್ಷದ ಅತಿ ದೊಡ್ಡ ಹಗರಣ, ಈ ಕುರಿತು ಸಮಗ್ರ ತನಿಖೆ ಆಗಬೇಕು ಎಂದು ಮಾಜಿ ಹಣಕಾಸು ಸಚಿವ ಮತ್ತು ಕಾಂಗ್ರೆಸ್ನ ಹಿರಿಯ ನಾಯಕ ಪಿ. ಚಿದಂಬರಂ ಆಗ್ರಹಿಸಿದ್ದಾರೆ.

ಕೇಂದ್ರ ಸರ್ಕಾರದ ಈ ನಡೆ ಅಸಂಬದ್ಧವಾದುದು ಮತ್ತು ಯೋಚನಾರಹಿತವಾದುದು. ಅನಾಣ್ಯೀಕರಣ ಕ್ರಮದ ಕುರಿತು ವಿಶ್ವ ಮಟ್ಟದಲ್ಲಿ ಬೆಂಬಲ ವ್ಯಕ್ತವಾಗುತಿಲ್ಲ. ಜತೆಗೆ ಪ್ರಮುಖ ದಿನಪತ್ರಿಕೆಗಳು ಮತ್ತು ಆರ್ಥಿಕ ತಜ್ಞರು ಸರ್ಕಾರದ ನಡೆಯನ್ನು ಟೀಕಿಸುತ್ತಿದ್ದಾರೆ. ಕೇಂದ್ರ ಸರ್ಕಾರವು ಪ್ರಮುಖ ಆರ್ಥಿಕ ತಜ್ಞರು, ಬಿಜೆಪಿ ಹಿರಿಯ ಮುಖಂಡ ಯಶವಂತ್ ಸಿನ್ಹಾ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅಂತಹ ವ್ಯಕ್ತಿಗಳನ್ನು ಸಂರ್ಪಸಿ ಸಲಹೆ ಪಡೆಯಬಹುದಿತ್ತು. ಆದರೆ ಕೇಂದ್ರ ಸರ್ಕಾರ ಇದಾವುದನ್ನೂ ಮಾಡಿಲ್ಲ ಎಂದು ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಅನಾಣ್ಯೀಕರಣದಿಂದ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿತ್ತು. ಆದರೆ ಸರ್ಕಾರ ತಿಳಿಸಿದ್ದಕ್ಕೆ ವ್ಯತಿರಿಕ್ತವಾಗಿ ಬಡವರು ಮಾತ್ರ ಕಷ್ಟ ಅನುಭವಿಸುತ್ತಿದ್ದಾರೆ. ಬ್ಯಾಂಕುಗಳು ಕ್ಯೂನಲ್ಲಿ ನಿಲ್ಲುವ ಗ್ರಾಹಕರಿಗೆ ಹಣ ನೀಡಲು ಪರದಾಡುತ್ತಿವೆ. ಅನಾಣ್ಯೀಕರದಿಂದಾಗಿ ಸುಮಾರು 45 ಕೋಟಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೇಂದ್ರ ಸರ್ಕಾರ ನಗದು ರಹಿತ ವ್ಯವಸ್ಥೆ ಜಾರಿಗೆ ತರಲು ಪ್ರಯತ್ನಿಸುತ್ತಿದೆ. ಆದರೆ ಇದು ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದೆ ಎಂದು ಚಿದಂಬರಂ ಕೇಂದ್ರದ ನಡೆಯನ್ನು ಪ್ರಶ್ನಿಸಿದ್ದಾರೆ.

Comments are closed.