ರಾಷ್ಟ್ರೀಯ

ಸ್ಮಾರಕದ ಬಳಿ ಜಯಲಲಿತಾರನ್ನೇ ಹೋಲುವ ಮಹಿಳೆ!

Pinterest LinkedIn Tumblr

deepa-jayakumarಚೆನ್ನೈ: ತಮ್ಮ ನೆಚ್ಚಿನ ನಾಯಕಿಯನ್ನು ಕಳೆದುಕೊಂಡ ದುಃಖದಲ್ಲಿ ದಿವಂಗತ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಸ್ಮಾರಕ ಸ್ಥಳವಾದ ಮರೀನಾ ಬೀಚ್ ನತ್ತ ಹರಿದುಬರುತ್ತಿರುವ ಜನಸಾಗರದ ಮಧ್ಯೆ ಒಬ್ಬಾಕೆ ಇದ್ದಕ್ಕಿದ್ದಂತೆ ಎಲ್ಲರ ಗಮನ ಸೆಳೆದರು. ಅವರೇ ಜಯಲಲಿತಾ ಅವರ ಸೋದರನ ಮಗಳು ದೀಪಾ. ಆಕೆ ಆಕೆಯ ಅತ್ತೆಯನ್ನೇ ಹೋಲುತ್ತಿದ್ದಳು.
ಸಾಯಂಕಾಲ 5.30ರ ಹೊತ್ತಿಗೆ ಜಯಲಲಿತಾ ಅವರನ್ನು ಸಮಾಧಿ ಮಾಡಿದ ಸ್ಥಳದಲ್ಲಿ ಅಭಿಮಾನಿಗಳು ಮತ್ತು ಜನ ತುಂಬಿಹೋಗಿದ್ದರು. ಕೆಲವರು ಬಹಳ ದುಃಖಿತರಾಗಿದ್ದರು. ಆಗ ಅಲ್ಲಿಗೆ ಬಂದ ದೀಪಾ ಮತ್ತವರ ಕುಟುಂಬದವರು ಸಮಾಧಿಗೆ ಸುತ್ತು ಬರುತ್ತಿದ್ದಾಗ ಜನರು ಆಕೆಯನ್ನು ಸುತ್ತುವರಿದರು. ನೀವು ಅಮ್ಮನನ್ನೇ ಹೋಲುತ್ತೀರಿ, ನಾವು ಅವರನ್ನು ನಿಮ್ಮಲ್ಲಿ ಕಾಣುತ್ತೇವೆ ಎನ್ನುತ್ತಿದ್ದರು.
ಆಕೆಯ ಹಿಂದೆ ಹೆಚ್ಚೆಚ್ಚು ಜನರು ಸುತ್ತುವರಿಯುತ್ತಿದ್ದಂತೆ ಪೊಲೀಸರು ಅವರಿಗೆ ಭದ್ರತೆ ನೀಡಲಾರಂಭಿಸಿದರು ಮತ್ತು ಅವರನ್ನು ಮರೀನಾ ಹತ್ತಿರವಿರುವ ಡಿ6 ಅಣ್ಣಾ ಸ್ಕ್ವಾರ್ ಪೊಲೀಸ್ ಸ್ಟೇಷನ್ ಗೆ ಕರೆದುಕೊಂಡು ಹೋದರು. ಕೆಲವರು ದೀಪಾರ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದರು.
ಜಯಲಲಿತಾರ ಸೋದರ ಜಯಕುಮಾರ್ ಅವರ ಪುತ್ರಿಯಾದರೂ ಕೂಡ ದೀಪಾ ಜಯಲಲಿತಾ ಆಸ್ಪತ್ರೆಯಲ್ಲಿ ದಾಖಲಾಗಿದ್ದ ದೂರವೇ ಉಳಿಯಬೇಕಾಯಿತು. ತಮ್ಮ ಅತ್ತೆಯನ್ನು ನೋಡಲೆಂದು ಅವರು ಆಸ್ಪತ್ರೆಗೆ ಹೋಗಿ ಮೂರು ದಿನ ಕಾದಿದ್ದರು. ಆದರೂ ಕೂಡ ಭದ್ರತೆಯ ಕಾರಣ ನೀಡಿ ಆಸ್ಪತ್ರೆಯ ಸಿಬ್ಬಂದಿ ಅವರನ್ನು ಒಳಗೆ ಬಿಟ್ಟಿರಲಿಲ್ಲ.
ಕಳೆದ ಭಾನುವಾರ ಜಯಲಲಿತಾ ಅವರಿಗೆ ತೀವ್ರ ಹೃದಯಸ್ಥಂಭನವಾಗಿದೆ ಎಂದು ಸುದ್ದಿ ಬಂದಾಗಲಂತೂ ಭೇಟಿ ಮಾಡುವ ಹಂಬಲದಿಂದ ದೀಪಾ ಆಸ್ಪತ್ರೆಯವರೆಗೆ ಹೋಗಿದ್ದರು. ಆದರೆ ಅಂದು ಕೂಡ ಬಿಡಲಿಲ್ಲ. ಅವರ ಆಸೆ ಹಾಗೆಯೇ ಉಳಿದಿತ್ತು.
ಮಂಗಳವಾರ ಅಂತಿಮ ಯಾತ್ರೆಯ ಸಂದರ್ಭದಲ್ಲಿ ಕೂಡ ದೀಪಾಳಿಗೆ ತಮ್ಮ ಅತ್ತೆಯ ಮುಖವನ್ನು ನೋಡಲು ಕೆಲ ಕ್ಷಣದ ಅವಕಾಶ ಮಾತ್ರ ಸಿಕ್ಕಿತ್ತು. ಜಯಲಲಿತಾ ಶವದ ಮುಂದೆ ಆಕೆಯ ಆಪ್ತ ಗೆಳತಿ ಶಶಿಕಲಾ ಮತ್ತವರ ಕುಟುಂಬದವರೇ ನೆರೆದಿದ್ದರು.
ಜಯಲಲಿತಾರವರು ಬದುಕುಳಿದಿದ್ದಾಗ ಶಶಿಕಲಾರ ಪತಿ ನಟರಾಜನ್ ಮತ್ತು ಆಕೆಯ ಬಂಧುಗಳನ್ನು ದೂರವೇ ಇರಿಸಿದ್ದರು. ಆದರೆ ವಿಪರ್ಯಾಸವೆಂದರೆ ಅವರು ತೀರಿಕೊಂಡ ನಂತರ ಅವರ ದೇಹದ ಸುತ್ತಮುತ್ತ ಶಶಿಕಲಾರಿಗೆ ಬೇಕಾದವರೇ ಸುತ್ತುವರಿದಿದ್ದರು.
ಶವಸಂಸ್ಕಾರದ ವೇಳೆ ಅತ್ತೆಯ ದೇಹದ ಸಮೀಪ ಹೆಚ್ಚು ಸಮಯ ಕಳೆಯಲು ಸಾಧ್ಯವಾಗದ ಕಾರಣ ದೀಪಾ ನಿನ್ನೆ ಸ್ಮಾರಕದ ಬಳಿಗೆ ಹೋಗಿರಬೇಕು. ಆದರೆ ಅಲ್ಲಿ ತನ್ನ ಅತ್ತೆಯ ಬೆಂಬಲಿಗರಿಂದ ಸುತ್ತುವರಿಯಲ್ಪಟ್ಟರು. ಅಭಿಮಾನಿಗಳು ಎಷ್ಟು ಪುಳಕಿತರಾದರೆಂದರೆ ತಮ್ಮ ನೆಚ್ಚಿನ ನಾಯಕಿಯ ಉತ್ತರಾಧಿಕಾರಿಯನ್ನು ನೋಡುತ್ತಿದ್ದೇವೆ ಎಂಬಷ್ಟು ಖುಷಿ ಅವರಿಗಾಯಿತು.
ಕೊನೆಗೆ ಪೊಲೀಸರು ದೀಪಾರನ್ನು ಪೊಲೀಸ್ ಸ್ಟೇಷನ್ ಗೆ ಕರೆದೊಯ್ದು ಅಲ್ಲಿಗೆ ಅವರ ಕಾರನ್ನು ಬರಹೇಳಿ ಸುರಕ್ಷಿತವಾಗಿ ಮನೆಗೆ ಕಳುಹಿಸಿದರು.

Comments are closed.