ರಾಷ್ಟ್ರೀಯ

2,000 ವರೆಗಿನ ಕ್ಯಾಸ್ ಲೆಸ್ ವಹಿವಾಟಿಗೆ ಸೇವಾ ತೆರಿಗೆ ಕೈಬಿಡಲು ಚಿಂತನೆ

Pinterest LinkedIn Tumblr

swipeನವದೆಹಲಿ: ನೋಟು ರದ್ದತಿ ಬಳಿಕ ನಗದು ರಹಿತ ವಹಿವಾಟಿಗೆ ಉತ್ತೇಜನಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ ಡೆಬಿಟ್‌, ಕ್ರೆಡಿಟ್‌ ಕಾರ್ಡ್‌ ಬಳಸಿ ₹2,000 ವರೆಗೆ ನಡೆಸುವ ನಗದುರಹಿತ ವಹಿವಾಟು ಮೇಲಿನ ಸೇವಾ ತೆರಿಗೆಯನ್ನು ಹಿಂಪಡೆಯಲಿದೆ. ಈ ಸಂಬಂಧ ಸಂಸತ್‌ನಲ್ಲಿ ತಿದ್ದುಪಡಿ ಮಸೂದೆ ಮಂಡನೆಯಾಗಲಿದೆ.

ಕ್ರೆಡಿಟ್‌, ಡೆಬಿಟ್‌ ಅಥವಾ ಇನ್ನಾವುದೇ ಪಾವತಿ ಕಾರ್ಡ್‌ ಬಳಸಿ ₹2,000 ವರೆಗೆ ನಡೆಸುವ ವಹಿವಾಟಿಗೆ ಸೇವಾತೆರಿಗೆಯಿಂದ ವಿನಾಯಿತಿ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ಈ ಸಂಬಂಧ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ಸಂಸತ್‌ನಲ್ಲಿ ತಿದ್ದುಪಡಿ ಮಸೂದೆ ಮಂಡನೆ ಮಾಡಲಿದ್ದಾರೆ.

Comments are closed.