ಮುಂಬೈ

ನೋಟ್ ನಿಷೇಧವಾದ 7 ಗಂಟೆಯಲ್ಲಿ ಚಿನ್ನ ಮಾರಾಟವಾಗಿದ್ದೆಷ್ಟು?

Pinterest LinkedIn Tumblr

goldಮುಂಬೈ: 500, 1000 ರೂ. ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ ಬಳಿಕ ನವೆಂಬರ್ 8 ಮತ್ತು 9ರಂದು ಭಾರತದಲ್ಲಿ ಒಟ್ಟು 15 ಟನ್ (15 ಸಾವಿರ ಕೆಜಿ) ಚಿನ್ನ ಮಾರಾಟವಾಗಿದೆ.

ಇಂಡಿಯನ್ ಬುಲಿಯನ್ ಆಂಡ್ ಜ್ಯುವೆಲರ್ಸ್ ಅಸೋಸಿಯೇಷನ್(ಐಬಿಜೆಎ) ರಾಷ್ಟ್ರೀಯ ಕಾರ್ಯದರ್ಶಿ ಸುರೇಂದ್ರ ಮೆಹ್ತಾ ಮಾಧ್ಯಮವೊಂದಕ್ಕೆ ಈ ಮಾಹಿತಿ ತಿಳಿಸಿದ್ದು, ರಾತ್ರಿ ಎಂಟು ಗಂಟೆಯಿಂದ ನವೆಂಬರ್ 9ರ ನಸುಕಿನ ಜಾವ 2-3 ಗಂಟೆಯವೆಗೆ ಅಂದಾಜು 5 ಸಾವಿರ ಕೋಟಿ ರೂ. ವ್ಯವಹಾರ ನಡೆದಿದೆ ಎಂದು ಹೇಳಿದ್ದಾರೆ.

ದೆಹಲಿ, ಉತ್ತರ ಪ್ರದೇಶ ಮತ್ತು ಪಂಜಾಬ್ ನಲ್ಲಿ ಅತಿ ಹೆಚ್ಚು ವ್ಯವಹಾರ ನಡೆದಿದೆ. ದೇಶದಲ್ಲಿರುವ 6 ಲಕ್ಷ ಜುವೆಲ್ಲರಿ ಪೈಕಿ 1 ಸಾವಿರ ಜುವೆಲ್ಲರಿಗಳು ಮಾತ್ರ ನ.8ರ ರಾತ್ರಿ 500, 1 ಸಾವಿರ ರೂ. ನೋಟುಗಳನ್ನು ಸ್ವೀಕರಿಸಿದೆ ಎಂದು ತಿಳಿಸಿದರು.

ನೋಟ್ ಬ್ಯಾನ್ ಆದ ಬಳಿಕ ಕೆಲವು ಜ್ಯುವೆಲ್ಲರಿಗಳು ನಡೆಸಿದ ಅಕ್ರಮದಿಂದ ನಮ್ಮ ಎಲ್ಲ ವ್ಯವಹಾರದ ಮೇಲೆ ಕೆಟ್ಟ ಹೆಸರು ಬಂದಿದೆ. ಅಕ್ರಮಕ್ಕೆ ಸಹಕಾರ ನೀಡಿದ ಜುವೆಲ್ಲರಿಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದರು.

ಭಾರತದಲ್ಲಿ ಪ್ರತಿವರ್ಷ ಅಂದಾಜು 15 ಟನ್ ಚಿನ್ನ ಮಾರಾಟವಾಗುತ್ತಿದ್ದು, ನೋಟ್ ನಿಷೇಧದಿಂದಾಗಿ ಈ ಬಾರಿ 500 ಟನ್ ಮಾರಾಟವನ್ನು ನಿರೀಕ್ಷಿಸಲಾಗುತ್ತಿದೆ ಎಂದು ಸುರೇಂದ್ರ ಮೆಹ್ತಾ ಹೇಳಿದರು.

ನೋಟ್ ಬ್ಯಾನ್ ಆದ ಬಳಿಕ ಅತಿ ಹೆಚ್ಚು ವ್ಯವಹಾರ ನಡೆಸಿದ ಗ್ರಾಹಕರ ಮಾಹಿತಿಯನ್ನು ನೀಡುವಂತೆ ಆದಾಯ ತೆರಿಗೆ ಇಲಾಖೆ ಜುವೆಲ್ಲರಿಗೆ ನೋಟಿಸ್ ನೀಡಿದೆ. ಅಷ್ಟೇ ಅಲ್ಲದೇ ಸಿಸಿಟಿವಿ ದೃಶ್ಯಗಳನ್ನು ನೀಡುವಂತೆ ಸೂಚಿಸಿದೆ.

Comments are closed.