ರಾಷ್ಟ್ರೀಯ

ನಗದು ರಹಿತ ವ್ಯವಹಾರಕ್ಕೆ ನೀಲೇಕಣಿ ಸಹಾಯ ಕೋರಿದ ಪ್ರಧಾನಿ

Pinterest LinkedIn Tumblr

nilakeniನವದೆಹಲಿ: ರಾಷ್ಟ್ರದಲ್ಲಿ ಡಿಜಿಟಲ್ ಪೇಮೆಂಟ್ ವ್ಯವಸ್ಥೆಯನ್ನು ಜನಸ್ನೇಹಿಯಾಗಿಸಲು ಸಹಕರಿಸುವಂತೆ ಕೇಂದ್ರ ಸರ್ಕಾರ ಆಧಾರ್ ಕಾರ್ಡ್ ಸೂತ್ರಧಾರಿ ನಂದನ್ ನೀಲೇಕಣಿ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಕೋರಿದ್ದಾರೆ.

ನಗದು ರಹಿತ ವ್ಯವಹಾರ, ಆನ್ಲೈನ್ ಪೇಮೆಂಟ್ ವ್ಯವಸ್ಥೆಗೆ ಒಗ್ಗಿಕೊಳ್ಳಲು ಜನರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸಹಕರಿಸುವಂತೆ ನೀಲೇಕಣಿ ಅವರನ್ನು ಕೋರಲಾಗಿದೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರ ನೋಟು ನಿಷೇಧ ನಿರ್ಧಾರವನ್ನು ನೀಲೇಕಣಿ ಶ್ಲಾಘಿಸಿದ್ದರು. ನೋಟು ನಿಷೇಧದಿಂದ ನಗದು ವ್ಯವಹಾರಗಳು ನಿಂತುಹೋಗಿ ಡಿಜಿಟಲ್ ಆರ್ಥಿಕತೆಗೆ ಮಹತ್ವ ಬರುತ್ತದೆ ಎಂದಿದ್ದರು. ಇನ್ಪೋಸಿಸ್ನ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೀಲೇಕಣಿ ಅವರು 2014ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿ ಸೋತಿದ್ದರು.

Comments are closed.