ರಾಷ್ಟ್ರೀಯ

ನೋಟು ನಿಷೇಧ: ಉತ್ತರ ಪ್ರದೇಶದಲ್ಲಿ ಬ್ಯಾಂಕ್ ಮೇಲೆ ದಾಳಿ ಪ್ರಕರಣಗಳಲ್ಲಿ ಹೆಚ್ಚಳ

Pinterest LinkedIn Tumblr

bank_russ_pics_1ಲಖನೌ: ಕೇಂದ್ರ ಸರ್ಕಾರದ ನೋಟು ಹಿಂಪಡೆತ ನಡೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಲಿದೆ ಎಂಬ ಊಹೆ ಈಗ ಉತ್ತರಪ್ರದೇಶದಲ್ಲಿ ನಿಜವಾಗುತ್ತಿದ್ದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.
ಹೊಸ ನೋಟುಗಳ ಪ್ರಮಾಣ ಅತಿ ಕಡಿಮೆಯಿದ್ದು, ಜನರು ನೆಮ್ಮದಿ ಕಳೆದುಕೊಳ್ಳುತ್ತಿದ್ದಾರೆ ಹಾಗು ಬ್ಯಾಂಕ್ ಮೇಲೆ ದಾಳಿ ಮತ್ತು ಕಲ್ಲೆಸೆತದ ಘಟನೆಗಳು ದಿನೇ ದಿನೇ ಹೆಚ್ಚುತ್ತಿವೆ.
ನಗದು ಇಲ್ಲ ಎಂಬ ಉತ್ತರ ಕೇಳಿ ಬ್ಯಾಂಕ್ ಮೇಲೆ ದಾಳಿ ಮಾಡಿದ, ಬ್ಯಾಂಕ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಹಿಂಸೆಯ ಘಟನೆಗಳು ಹೆಚ್ಚುತ್ತಿವೆ ಎಂದು ಪೊಲೀಸ ಅಧಿಕಾರಿಗಳು ಹೇಳಿದ್ದಾರೆ. ಇಲ್ಲಿಯವರೆಗೂ ಜನ ಶಾಂತಿಯಿಂದ ಇದ್ದದ್ದೇ ಪವಾಡ ಎಂದು ಕೂಡ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.
ನಗದು ಖಾಲಿಯಾಗಿದ್ದಕ್ಕೆ ಮೀರತ್ ನಲ್ಲಿ ಕಿರಿಕಿರಿಗೊಂಡ ನೂರಾರು ಗ್ರಾಹಕರು, ಹಾಪುರ್ ರಸ್ತೆಯ ಸಿಂಡಿಕೇಟ್ ಬ್ಯಾಂಕ್ ಘಟಕದ ಮೇಲೆ ದಾಳಿ ಮಾಡಿ ಹಾನಿಗೆ ಮುಂದಾಗಿದ್ದಾರೆ. ಈ ಸಮಯದಲ್ಲಿ ೧೨ ಕ್ಕೂ ಹೆಚ್ಚು ವಾಹನಗಳನ್ನು ಸುತ್ತಿರುವುದರಿಂದ ವಾಹನ ದಟ್ಟಣೆ ಉಂಟಾಗಿದೆ. ನರೇಂದ್ರ ಮೋದಿ ಅವರ ಪ್ರತಿಕೃತಿಯನ್ನು ಕೂಡ ಈ ಸಮಯದಲ್ಲಿ ದಹಿಸಲಾಗಿದೆ.
ಆಗ್ರಾದಲ್ಲಿ, ಖೇರ್ಗರ್ ನ ಓರಿಎಂಟ್ ಬ್ಯಾಂಕ್ ಆಫ್ ಕಾಮರ್ಸ್ ಎದುರು ನೆರೆದಿದ್ದ ಅಪಾರ ಕುಪಿತ ಜನರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಫಿಲಿಬಿತ್ ಮತ್ತು ಬಾಘ್ಪತ್ ಜಿಲ್ಲೆಗಳಲ್ಲೂ ಇಂತಹ ಘಟನೆಗಳು ನಡೆದಿವೆ. ಫಾರ್ರುಖಾಬಾದ್ ಬ್ಯಾಂಕ್ ಮ್ಯಾನೇಜರ್ ಒಬ್ಬರಿಗೆ ನಗದು ನೀಡಿ ಇಲ್ಲವೇ ಮುಂದಿನ ಕ್ರಮ ಎದುರಿಸಿ ಎಂದು ಜನ ಬೆದರಿಕೆ ಹಾಕಿದ ಘಟನೆ ಕೂಡ ನಡೆದಿದೆ.
“ಈ ಹಿಂದೆ ಬ್ಯಾಂಕ್ ಭದ್ರತೆ ವಾರಕ್ಕೆ ಒಂದು ದಿನದ ಕೆಲಸವಾಗಿತ್ತು. ಈಗ ಇದು ವಾರದ ಪ್ರತಿ ಘಂಟೆಯ ಕೆಲಸವಾಗಿ ಮಾರ್ಪಟ್ಟಿದೆ. ಇರುವ ಕಡಿಮೆ ಸಿಬ್ಬಂದಿಯಲ್ಲೇ ಇದನ್ನು ನಿರ್ವಹಿಸುತ್ತಿದ್ದೇವೆ” ಎಂದು ಲಖನೌ ಐ ಜಿ ಪಿ ಸತೀಶ್ ಗಣೇಶ್ ಹೇಳಿದ್ದಾರೆ.
ಡಿಸೆಂಬರ್ ೧ ರಿಂದ ಹಲವು ನೌಕರರು ವೇತನ ಪಡೆಯುವ ದಿನವಾಗಿದ್ದು ನಗದಿಗಾಗಿ ಉದ್ದುದ್ದ ಸರತಿಯಲ್ಲಿ ಬ್ಯಾಂಕ್ ಗಳ ಮುಂದೆ ನಿಂತು ಕುಪಿತರಾಗಿ ಹಿಂದಿರುಗುವ ದೃಶ್ಯಗಳು ದೇಶದಾದ್ಯಂತ ಸರ್ವೇ ಸಾಮಾನ್ಯವಾಗಿವೆ.

Comments are closed.