ರಾಷ್ಟ್ರೀಯ

ನೋಟು ನಿಷೇಧ: ಪ್ರವಾಸಿಗರಿಗೆ ಕೆಲ ಸಲಹೆಗಳು

Pinterest LinkedIn Tumblr

City_Tour_Bus_4ದೇಶದಾದ್ಯಂತ 500-1000 ಮುಖಬೆಲೆಯ ನೋಟುಗಳ ನಿಷೇಧದ ಬಳಿಕ ಪ್ರವಾಸಕ್ಕೆ ತೆರಳುವ ಪ್ರವಾಸಿಗರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಕೆಲ ಟ್ರಾವೆಲ್ ಸಂಸ್ಥೆಗಳು ಕೆಲವೊಂದು ಪ್ಯಾಕೆಜ್ ಗಳನ್ನು ನೀಡುತ್ತಿದ್ದು ಆಸಕ್ತಿ ಇರುವ ಪ್ರವಾಸಿಗರು ಇದನ್ನು ಬಳಸಕೊಳ್ಳಬಹುದಾಗಿದೆ.
ಕಪ್ಪುಹಣ ಮುಕ್ತಗೊಳಿಸುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 8ರಂದು ನೋಟುಗಳ ನಿಷೇಧವನ್ನು ಘೋಷಿಸಿದ್ದು ಪ್ರವಾಸಿಗರ ಅನುಕೂಲಕ್ಕಾಗಿ ಸ್ಟೆರ್ಲಿಂಗ್ ಹಾಲಿಡೇಸ್ ನ ಟ್ರಾವೆಲ್ ಅಡ್ವೈಜರ್ ವಿಕ್ರಂ ಲಾಲ್ವಾಣಿ ಅವರು ಕೆಲವೊಂದು ಟಿಪ್ಸ್ ಗಳನ್ನು ನೀಡಿದ್ದಾರೆ.
ಬುಕ್ ಪ್ಯಾಕೇಜ್: ನೀವು ಪ್ರವಾಸ ಕೈಗೊಳ್ಳುವ ಮುನ್ನ ಎಲ್ಲಾ ವಿವಿಧ ಪ್ರವಾಸ ಹಾಗೂ ಊಟೋಪಚಾರವನ್ನು ನೋಡಿಕೊಳ್ಳುವಂತಾ ಪ್ಯಾಕೇಜ್ ಬುಕ್ ಮಾಡಿಕೊಳ್ಳಿ. ಅಲ್ಲಿಗೆ ಕೊನೆಯ ಕ್ಷಣದಲ್ಲಿ ಹಣದ ಕೊರತೆಯಿಂದ ನೀವು ತಪ್ಪಿಸಿಕೊಂಡತ್ತಾಗುತ್ತದೆ.
ಆನ್ ಲೈನ್ ಪೇಮೆಂಟ್: ನಿಮ್ಮ ಪ್ರವಾಸ ಕೈಗೊಳ್ಳುವ ಮುನ್ನ ನೀವು ಹೋಗುವ ಜಾಗದ ಕುರಿತಾಗಿ ಹೊಟೇಲ್ ಇನ್ನಿತರ ಅವಶ್ಯಕತೆಗಳನ್ನು ಆನ್ ಲೈನ್ ನಲ್ಲಿ ಬುಕ್ ಮಾಡಿಕೊಳ್ಳುವುದು ಉಪಯುಕ್ತ.
ಪ್ರವಾಸ ಪ್ರತಿನಿಧಿ: ಪ್ರವಾಸಕ್ಕೂ ಮುನ್ನ ನಿಮ್ಮ ಪ್ರವಾಸ ಪ್ರತಿನಿಧಿ ಚೆಕ್ ಅಥವಾ ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಗಳನ್ನು ಸ್ವೀಕರಿಸುತ್ತಾರಾ ಎಂಬುದನ್ನು ಪರಿಶೀಲಿಸಿಕೊಳ್ಳುವುದು ಉತ್ತಮ.
ಸ್ಥಳೀಯ ಪ್ರವಾಸ: ಹಣರಹಿತ ವಹಿವಾಟು ನಡೆಸುವ ಕ್ಯಾಬ್ ಗಳನ್ನು ಬಳಸಿರಿ.
ವಾಲೇಟ್ ಮೊಬೈಲ್ ಆಪ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಿ: ಪ್ರವಾಸಕ್ಕೂ ಮುನ್ನ ಕೆಲ ವಾಲೇಟ್ ಮೊಬೈಲ್ ಆಪ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳಿ ಅದು ಹಣ ರಹಿತ ವಹಿವಾಟಿಗೆ ಉಪಯೋಗಿಸಿಕೊಳ್ಳಬಹುದು.
ಎಟಿಎಂ ಮತ್ತು ಬ್ಯಾಂಕ್ಸ್: ಪ್ರವಾಸಕ್ಕೆ ಹೊರಡುವ ಮುನ್ನ ನೀವು ಭೇಟಿಯಾಗಲಿರುವ ಜಾಗದ ಸುತ್ತಾಮುತ್ತ ಎಟಿಎಂ ಮತ್ತು ಬ್ಯಾಂಕ್ ಗಳಿರುವುದನ್ನು ಖಾತ್ರಿಪಡಿಸಿಕೊಳ್ಳಿ.
ಪ್ಯಾಕಿಂಗ್: ಲಗೇಜ್ ಪ್ಯಾಕ್ ಮಾಡುವಾಗ ಎಚ್ಚರಿಕೆಯಿಂದಿರಿ. ಪ್ರವಾಸಕ್ಕೆ ಬೇಕಾದ ಔಷಧಿಗಳನ್ನು ತೆಗೆದಿಟ್ಟುಕೊಳ್ಳುವುದು ಅತಿ ಮುಖ್ಯ. ಇದೇ ವೇಳೆ ಮೊಬೈಲ್ ಚಾರ್ಜರ್ ಮತ್ತು ಪವರ್ ಬ್ಯಾಂಕ್ ಗಳನ್ನು ತೆಗೆದುಕೊಂಡು ಹೋಗುವುದನ್ನು ಮರೆಯಬೇಡಿ.

Comments are closed.