ರಾಷ್ಟ್ರೀಯ

ಹೆತ್ತವರ ಸ್ವಯಾರ್ಜಿತ ಮನೆಯಲ್ಲಿ ಪುತ್ರನಿಗೆ ಹಕ್ಕಿಲ್ಲ: ದಿಲ್ಲಿ ನ್ಯಾಯಾಲಯ

Pinterest LinkedIn Tumblr

court01
ನವದೆಹಲಿ (ನ.29): ತಂದೆ ತಾಯಿಯ ಸ್ವಂತ ಮನೆಯಲ್ಲಿ ಮಗನಿಗೆ ವಾಸಿಸಲು ಯಾವುದೇ ಕಾನೂನಾತ್ಮಕ ಹಕ್ಕಿಲ್ಲ. ತಂದೆ ತಾಯಿ ಇಚ್ಚಿಸಿದರೆ ಮಾತ್ರ ಅವರೊಂದಿಗೆ ವಾಸಿಸಬಹುದು ಎಂದು ದೆಹಲಿ ನ್ಯಾಯಾಲಯ ತೀರ್ಪು ನೀಡಿದೆ.
ತಂದೆ-ಮಗನ ಸಂಬಂಧ ಸೌಹಾರ್ದಯುತವಾಗಿರುವವರೆಗೆ ಪೋಷಕರು ತಮ್ಮೊಟ್ಟಿಗೆ ಮಗನಿರುವುದಕ್ಕೆ ಅವಕಾಶ ನೀಡಬಹುದು. ಜೀವನ ಪರ್ಯಂತ ಮಗನ ದಬ್ಬಾಳಿಕೆಯನ್ನು ಸಹಿಸಿಕೊಳ್ಳುವ ಅಗತ್ಯವಿಲ್ಲವೆಂದು ನ್ಯಾಯಾಲಯ ಹೇಳಿದೆ.
ಮಗ ವಿವಾಹಿತನಿರಲಿ, ಅವಿವಾಹಿತನಿರಲಿ ತಂದೆ ತಾಯಿ ಅವಕಾಶ ನೀಡುವವರೆಗೆ ಮಾತ್ರ ಅವರ ಮೆನಯಲ್ಲಿ ವಾಸಿಸಬಹುದು. ಈ ವಿಚಾರದಲ್ಲಿ ಮಗನಿಗೆ ಯಾವುದೇ ಕಾನೂನಾತ್ಮಕ ಹಕ್ಕಿಲ್ಲವೆಂದು ನ್ಯಾ. ಪ್ರತಿಭಾ ರಾಣಿ ಆದೇಶಿಸಿದ್ದಾರೆ.

Comments are closed.