ಕರ್ನಾಟಕ

ಮುದ್ರಣ ದೋಷ; 500 ರೂ. ನೋಟು ಮುದ್ರಣ ಸ್ಥಗಿತ

Pinterest LinkedIn Tumblr

500-noteಬೆಂಗಳೂರು: ₹500 ಮತ್ತು ₹1000 ಮುಖಬೆಲೆಯ ನೋಟುಗಳನ್ನು ರದ್ದು ಮಾಡಿ ಹೊಸ ₹500 ನೋಟುಗಳನ್ನು ಸರ್ಕಾರ ಮುದ್ರಿಸಿದ್ದರೂ, ₹500 ನೋಟುಗಳ ಕೊರತೆ ಜನರನ್ನು ಕಾಡುತ್ತಿದೆ.

ಗರಿಷ್ಠ ಮುಖಬೆಲೆಯ ನೋಟು ರದ್ದು ಆಗಿ ಮೂರು ವಾರಗಳೇ ಕಳೆದಿದ್ದರೂ, ಈಗಲೂ ₹500 ಹೊಸ ನೋಟಿಗಾಗಿ ಜನರು ಪರದಾಡುತ್ತಿದ್ದಾರೆ.

ಇಲ್ಲಿಯವರೆ ₹500 ಹೊಸ ನೋಟು ಮುದ್ರಣ ಸೆಕ್ಯುರಿಟಿ ಪ್ರಿಂಟಿಂಗ್ ಅಂಡ್ ಮಿಂಟಿಂಗ್ ಕಾರ್ಪೊರೇಶನ್ ಆಫ್ ಇಂಡಿಯಾದ ನಿರ್ವಹಣೆಯಲ್ಲಿರುವ ನಾಸಿಕ್ ಮತ್ತು ದೇವಾಸ್ ಮುದ್ರಣಾಲಯದಲ್ಲಿ ನಡೆಯುತ್ತಿತ್ತು.

ಆದರೆ ಆ ಮುದ್ರಣಾಲಯದಲ್ಲಿ ಮುದ್ರಣ ಸಾಮರ್ಥ್ಯ ಕಡಿಮೆಯಾಗಿರುವುದರಿಂದ ಹೊಸ ನೋಟುಗಳಲ್ಲಿ ದೋಷ ಕಂಡುಬಂದಿತ್ತು. ಹೀಗಾಗಿ ಈ ಮುದ್ರಣಾಲಯಗಳಲ್ಲಿ ₹500 ನೋಟು ಮುದ್ರಣವನ್ನು ಸ್ಥಗಿತಗೊಳಿಸಲಾಗಿದೆ.

ನಾಸಿಕ್ ಮತ್ತು ದೇವಾಸ್ ಪ್ರೆಸ್‍ನಲ್ಲಿ ಮುದ್ರಣ ಸ್ಥಗಿತಗೊಳಿಸಿರುವುದರಿಂದ ₹500 ಹೊಸ ನೋಟು ಮುದ್ರಣವನ್ನು ಮೈಸೂರಿನ ಮುದ್ರಣಾಲಯಕ್ಕೆ ವರ್ಗಾವಣೆ ಮಾಡಲು ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ವಿತ್ತ ಸಚಿವಾಲಯ ತೀರ್ಮಾನಿಸಿದೆ.

Comments are closed.