ರಾಷ್ಟ್ರೀಯ

ನೋಟ್ ನಿಷೇಧ: ಪೋಸ್ಟಾಫೀಸಿನಲ್ಲಿ 32,631 ಕೋಟಿ ಜಮೆ!

Pinterest LinkedIn Tumblr

indian_post_office-1ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರವು 500 ರೂ. ಹಾಗೂ 1,000ರೂ. ನಿಷೇಧ ಮಾಡಿದ ಬಳಿಕ ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ 1.55 ಲಕ್ಷ ಪೋಸ್ಟಾಫೀಸ್‍ಗಳಲ್ಲಿ 32,631 ಕೋಟಿ ರೂ. ಜಮೆಯಾಗಿದೆ. ಅಂಚೆ ಕಚೇರಿಗಳು ಕೂಡಾ ನವೆಂಬರ್ 10ರಿಂದ 24ರೊಳಗೆ ಸುಮಾರು 3,680 ಕೋಟಿ ರೂ. ಮುಖಬೆಲೆಯ ಹಳೆಯ ನೋಟುಗಳನ್ನು ವಿನಿಮಯಮಾಡಿಕೊಂಡಿದೆ ಎಂಬುವುದಾಗಿ ಅಂಚೆ ಕಚೇರಿ ಕಾರ್ಯದರ್ಶಿ ಬಿ ವಿ ಸುಧಾಕರ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಸುಮಾರು 1.55 ಲಕ್ಷ ಫೋಸ್ಟಾಫೀಸುಗಳಲ್ಲಿ 1.30 ಲಕ್ಷ ಪೋಸ್ಟಾಫೀಸುಗಳು ಗ್ರಾಮೀಣ ಪ್ರದೇಶಗಳಲ್ಲಿದ್ದು. ಉಳಿದ 25,000 ಪೋಸ್ಟಾಫೀಸುಗಳು ನಗರ ಪ್ರದೇಶಗಳಲ್ಲಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರ ನವೆಂಬರ್ 8ರಂದು 500 ರೂ. ಹಾಗೂ 1,000 ರೂ. ಮುಖಬೆಲೆಯ ನೋಟುಗಳನ್ನು ನಿಷೇಧ ಮಾಡಿದೆ. ಆ ಬಳಿಕ ಜನ ನೋಟು ವಿನಿಮಯಕ್ಕಾಗಿ ಬ್ಯಾಂಕ್‍ನಲ್ಲಿ ಕ್ಯೂ ನಿಂತರೆ, ಇನ್ನೂ ಹಣ ತೆಗೆಯಲೆಂದು ಎಟಿಎಂ ಮುಂದೆ ಜನರ ದಂಡು ನೆರೆದಿತ್ತು. ಈ ಮಧ್ಯೆ ವಿರೋಧ ಪಕ್ಷಗಳು ಊಹಾಪೋಹಗಳನ್ನು ಹಬ್ಬಿಸಿದ್ದವು. ಆದರೂ ದೇಶದ ಬಹುತೇಕ ಜನ ಮೋದಿ ನಡೆಯನ್ನು ಬೆಂಬಲಿಸುತ್ತಲೇ ಬಂದಿದ್ದಾರೆ ಎನ್ನುವುದು ಸಮೀಕ್ಷೆಗಳ ಮೂಲಕ ಗೊತ್ತಾಗಿದೆ.

Comments are closed.