ಕರ್ನಾಟಕ

ಹೈಟೆಕ್ ಖಾಸಗಿ ಶಾಲೆಗಳ ಮಕ್ಕಳನ್ನು ಮೀರಿಸಿದ ಕನ್ನಡ ಶಾಲೆ

Pinterest LinkedIn Tumblr

belaku-nml-2ನೆಲಮಂಗಲ: ಹೈಟೆಕ್ ಖಾಸಗಿ ಶಾಲೆಗಳ ಹಾವಳಿ ಮಧ್ಯೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಯಲಚಗೆರೆ ಗ್ರಾಮದ ಸರ್ಕಾರಿ ಶಾಲೆ ತನ್ನ ವಿಭಿನ್ನತೆಯಿಂದ ಮಾದರಿಯಾಗಿದೆ. ಈ ಶಾಲೆ 2013ರಲ್ಲೇ ತಾಲೂಕಿಗೆ ಸಂಪೂರ್ಣ ಸ್ವಚ್ಛ ಶಾಲೆ ಎಂದು ಸರ್ಕಾರದಿಂದ ಮಾನ್ಯತೆ ಗಳಿಸಿದೆ. ಬೆಂಗಳೂರಿನ ಪ್ರಭಾವಳಿ ಸುತ್ತಲೂ ಇದ್ದರೂ ಈ ಗ್ರಾಮದಲ್ಲಿ ಪೋಷಕರು ಖಾಸಗಿ ಶಾಲೆಗೆ ಮಕ್ಕಳನ್ನ ಕಳಿಸದೇ, ಉತ್ತಮ ಶಿಕ್ಷಣ ನೀಡುತ್ತಿರುವ ಈ ಸರ್ಕಾರಿ ಶಾಲೆಗೆ ಮಕ್ಕಳನ್ನು ದಾಖಲಿಸಿದ್ದಾರೆ. ಇಲ್ಲಿನ ಶಿಕ್ಷಕರ ಕೌಶಲ್ಯತೆಯಿಂದಾಗಿ ಈ ಸರ್ಕಾರಿ ಶಾಲೆ ತಾಲೂಕಿನಲ್ಲಿ ಮಾದರಿ ಶಾಲೆಯಾಗಿದೆ.

78 ವಿದ್ಯಾರ್ಥಿಗಳಿರೋ ಈ ಶಾಲೆಯ ಮಕ್ಕಳು ಕನ್ನಡ, ಇಂಗ್ಲೀಷ್, ಹಿಂದಿ, ಗಣಿತ, ವಿಜ್ಞಾನ ಸೇರಿದಂತೆ ಎಲ್ಲಾ ವಿಷಯಗಳಲ್ಲೂ ಖಾಸಗಿ ಶಾಲೆಯ ಮಕ್ಕಳನ್ನ ಮೀರಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಇಂಗ್ಲೀಷ್‍ನಲ್ಲಿ ಸುಲಲಿತವಾಗಿ ಮಾತನಾಡುವ ಮೂಲಕ ನಾವು ಯಾರಿಗೂ ಕಮ್ಮಿ ಇಲ್ಲ ಅಂತಿದ್ದಾರೆ. ಮಕ್ಕಳ ಹಾಗೂ ಶಾಲೆಯ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ಶಾಲೆಯ ಮುಖ್ಯ ಶಿಕ್ಷಕ ಬಸಣ್ಣ ನವರಿಗೆ, ಸರ್ಕಾರದಿಂದ ಅತ್ಯುತ್ತಮ ಶಿಕ್ಷಕ, ಅಬ್ದುಲ್ ಕಲಾಂ ಪ್ರಶಸ್ತಿ ಬಂದಿದೆ. ಈ ಮಾದರಿ ಶಾಲೆಯ ಮಾದರಿ ಮಕ್ಕಳಿಗೆ ಕಂಪ್ಯೂಟರ್ ಕಲಿಕೆ ಮಾಡಬೇಕು ಎಂಬ ಉತ್ಸಾಹ. ಹಾಗಾಗಿ ಕಂಪ್ಯೂಟರ್ ಸೌಲಭ್ಯ ಬೇಕಿದೆ ಅಂತಾರೆ ಶಾಲೆಯ ಮುಖ್ಯ ಶಿಕ್ಷಕ ಬಸಣ್ಣ.

ಶಾಲೆಯ ಪರಿಸರ ಯಾವುದೇ ಹೈಟೆಕ್ ಶಾಲೆಗಳಿಗಿಂತ ಕಮ್ಮಿ ಇಲ್ಲ. ಬಿಸ್ಲೆರಿ ನೀರು, ಉತ್ತಮ ಶೌಚಾಲಯ, ಅಡುಗೆ ಮನೆ, ಸುಸಜ್ಜಿತವಾದ ಕೊಠಡಿ, ಗ್ರಂಥಾಲಯದ ಸೌಲಭ್ಯವಿದೆ. ಜೊತೆಗೆ ಇಲ್ಲಿ ನೂರಾರು ಬಗೆಯ ಗಿಡ ಮೂಲಿಕೆಯ ಸಸ್ಯಗಳನ್ನ ಶಿಕ್ಷಕರು ವಿದ್ಯಾರ್ಥಿಗಳ ನೆರವಿನಿಂದ ಬೆಳಸಿ ಪೋಷಣೆ ಮಾಡುತಿದ್ದಾರೆ. ಈ ಮಾದರಿ ಗ್ರಾಮೀಣ ಶಾಲೆಯ ಮಕ್ಕಳು ಇನ್ನಷ್ಟು ಓದು ಕಲಿಯಲು ಹಾಗೂ ಪ್ರಚಲಿತ ವಿದ್ಯಮಾನದ ಅರಿವು ಪಡೆಯಲು ಗಣಕಯಂತ್ರಗಳ ನೆರವಿನ ಸಹಾಯದ ನಿರೀಕ್ಷೆಯಲ್ಲಿದ್ದಾರೆ.

Comments are closed.